ವಿಶ್ವದ ಟಾಪ್ 10 ಬೆಸ್ಟ್ ಹೊಟೇಲ್ಸ್ ಇವು! ಜೀವನದಲ್ಲೊಮ್ಮೆಯಾದ್ರೂ ಇಲ್ಲಿಗೆ ಹೋಗಬೇಕು!
ವಿಶ್ವದ ಟಾಪ್ 10 ಹೊಟೇಲ್ಸ್ ಲಿಸ್ಟ್ ಇಲ್ಲಿದೆ. ಟ್ರಾವೆಲ್ ಜರ್ನಲಿಸ್ಟ್, ಹೋಟೇಲ್ ಮಾಲೀಕರು ಮತ್ತು ಲಕ್ಸುರಿ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವಂತಹ ಸುಮಾರು 600 ಜನರು ಸೇರಿ ಬೆಸ್ಟ್ ಹೊಟೇಲ್ ಆಯ್ಕೆ ಮಾಡಿದ್ದಾರೆ. ಭಾರತದ ಆಗ್ರಾದಲ್ಲಿರುವ ಓಬೆರಾಯ್ ಅಮರ್ ವಿಲ್ಲಾ (The Oberoi Amarvilas, Agra, India) ಹೊಟೇಲ್ 45ನೇ ಸ್ಥಾನದಲ್ಲಿದೆ.
ವಿಶ್ವದ ಟಾಪ್ 10 ಬೆಸ್ಟ್ ಹೊಟೇಲ್ ಗಳು ಯಾವುವು ನೋಡೋಣ :
ಪಸಲಾಖ್ವಾ ಹೋಟೇಲ್, ಲೇಕ್ ಕೋಮಾ ಇಟಲಿ (Passalacqua Hotel Lake Como Italy)
ಮೊದಲನೆ ಸ್ಥಾನದಲ್ಲಿ ಪಸಲಾಖ್ವಾ ಹೋಟೇಲ್, ಲೇಕ್ ಕೋಮಾ ಇಟಲಿ ಇದೆ.
ರೋಸ್ ವುಡ್, ಹಾಂಗ್ ಕಾಂಗ್ (Rosewood Hong Kong)
ವಿಶ್ವದ ಬೆಸ್ಟ್ ಹೊಟೇಲ್ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ರೋಸ್ ವುಡ್ ಹಾಂಗ್ ಕಾಂಗ್ ಇದೆ.
ಫೋರ್ ಸೀಸನ್ ಚಾವೋ ಪ್ರಾಯ ರಿವರ್ ಬ್ಯಾಂಕಾಕ್ (Four Season Chao Praya River Bangkok)
ಫೋರ್ ಸೀಸನ್ ಚಾವೋ ಪ್ರಾಯ ರಿವರ್ ಬ್ಯಾಂಕಾಕ್ ಅತ್ಯುತ್ತಮ ಹೊಟೇಲ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ದ ಅಪ್ಪರ್ ಹೌಸ್, ಬ್ಯಾಂಕಾಕ್ (The Upper House , Bangkok)
ದ ಅಪ್ಪರ್ ಹೌಸ್, ಬ್ಯಾಂಕಾಕ್ ತನ್ನ ಲಕ್ಸುರಿ ಮತ್ತು ರಿಚ್ ನೆಸ್ ನಿಂದಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಅಮನ್ ಟೋಕ್ಯೋ (Aman Tokyo)
ಜಿಮ್, ಯೋಗ, ಎರಡು ಸ್ಪಾ, ದೊಡ್ಡದಾದ ಸ್ವಿಮ್ಮಿಂಗ್ ಪೂಲ್, ಟ್ರೆಡಿಶನಲ್ ಚೈನೀಸ್ ಮೆಡಿಸಿನ್, ಸ್ಪಾ ಹೊಂದಿರುವ ಅಮನ್ ಟೋಕ್ಯೋ (Aman Tokyo) ಐದನೇ ಸ್ಥಾನದಲ್ಲಿದೆ.
ಲಾ ಮಮೌನಿಯಾ ಮರಕೇಶ್ ಮೊರೋಕೋ (La Mamounia, Marrakesh Morocco)
ಇದು ಮೊರಾಕೋದ ಅದ್ಭುತ ಹೊಟೇಲ್ ಆಗಿದೆ. 1929 ರಲ್ಲಿ ನಿರ್ಮಾಣಗೊಂಡ ಈ ಹೊಟೇಲ್ ಇಂದಿಗೂ ತನ್ನ ಹೆಸರನ್ನು ಟಾಪ್ ನಲ್ಲಿ ಉಳಿಸಿಕೊಂಡಿದೆ. ಇದು ವಿಶ್ವದ 6ನೇ ಬೆಸ್ಟ್ ಹೊಟೇಲ್ ಎನಿಸಿಕೊಂಡಿದೆ.
ಸೊನೇವ ಫುಶಿ ಮಾಲ್ಡೀವ್ಸ್ (Soneva Fushi, Maldives)
ಮಾಲ್ಡೀವ್ಸ್ ನಲ್ಲಿ ಪ್ರತಿಯೊಂದು ಸ್ಥಳವೂ ಅದ್ಭುತ ಎಂದೇ ಹೇಳಬಹುದು. ಅದರಲ್ಲೂ ಲಕ್ಸುರಿ, ರಿಚ್ ನೆಸ್, ಬೆಸ್ತ್ ಸರ್ವೀಸ್ ಬಗ್ಗೆ ಹೇಳೊದಾದರೆ ಸೊನೇವ ಫುಶಿ ಮಾಲ್ಡೀವ್ಸ್ ಬೆಸ್ಟ್ ಹೊಟೇಲ್ ಲಿಸ್ಟ್ ನಲ್ಲಿ 7ನೇ ಸ್ಥಾನದಲ್ಲಿದೆ.
ಒನ್ & ಓನ್ಲಿ ಮ್ಯಾಂಡರೀನಾ, ಪ್ಯೂರ್ಟೋ ವಲ್ಲಾರ್ಟಾ, ಮೆಕ್ಸಿಕೋ (One & Only Mandarina, Puerto Vallarta México)
ಒನ್ & ಓನ್ಲಿ ಮ್ಯಾಂಡರೀನಾ, ಪ್ಯೂರ್ಟೋ ವಲ್ಲಾರ್ಟಾ, ಮೆಕ್ಸಿಕೋ ಮಳೆಕಾಡು ಮತ್ತು ಬಿಳಿ ಮರಳಿನ ಸಮುದ್ರ ತೀರವನ್ನು ಆವರಿಸಿಕೊಂಡು ಸುಮಾರು 88 ಎಕರೆ ಜಾಗದಲ್ಲಿ ನೆಲಿನಿಂತಿದೆ. ಇದು 8 ನೇ ಸ್ಥಾನದಲ್ಲಿದೆ.
ಫೋರ್ ಸೀಸನ್ ಫ್ರೆಂಂಝ್ ಇಟಲಿ (Four Season Firenze Italy)
116 ಕೊಠಡಿಗಳನ್ನು ಹೊಂದಿರುವ 15ನೇ ಶತಮಾನದ ಈ ಫೋರ್ ಸೀಸನ್ ಫ್ರೆಂಂಝ್ ಇಟಲಿ ಹೊಟೇಲಿನ ರಿಚ್ ನೆಸ್ ನೋಡಿದ್ರೆ ಬೆರಗಾಗಬಹುದು. ಈ ಹೊಟೇಲ್ ಬೆಸ್ಟ್ ಹೊಟೇಲ್ ಲಿಸ್ಟಲ್ಲಿ 9ನೇ ಸ್ಥಾನದಲ್ಲಿದೆ.
ಮ್ಯಾಂಡರೀನಾ ಓರಿಯೆಂಟಲ್ ಬ್ಯಾಂಕಾಕ್ (Mandarin Oriental Bangkok)
ಕೊನೆಯದಾಗಿ ಹತ್ತನೇ ಸ್ಥಾನದಲ್ಲಿ ಮ್ಯಾಂಡರೀನಾ ಓರಿಯೆಂಟಲ್ ಬ್ಯಾಂಕಾಕ್ ಹೊಟೇಲ್ ಇದೆ. ಇದನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ರಾಯಲ್ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.