ಹೆಚ್ಚಿನ ದೆವ್ವಗಳು ತುಂಬಿರೋ ಊರಿದು… ಹೆಸರಲ್ಲಿದೆ ಗಿನ್ನಿಸ್ ದಾಖಲೆ… ಕಥೆ ಕೇಳಿದ್ರೆ ಹುಟ್ಟುತ್ತೆ ನಡುಕ!
ಯುಕೆಯಲ್ಲಿ ಒಂದು ಹಳ್ಳಿ ಇದೆ, ಅದನ್ನು ವಿಶ್ವದ ಅತ್ಯಂತ ಭಯಾನಕ ಹಳ್ಳಿ ಎಂದು ಕರೆಯಲಾಗುತ್ತದೆ. ಮಾನವರು ರಾತ್ರಿಯಲ್ಲಿ ಇಲ್ಲಿನ ಬೀದಿಗಳಲ್ಲಿ ತಿರುಗಾಡೋಕು ಹೆದರುತ್ತಾರೆ, ಯಾಕಂದ್ರೆ ಇಲ್ಲಿಮ ಬೀದಿ ಬೀಡಿಗಳಲ್ಲಿ ಮನುಷ್ಯರ, ಪ್ರಾಣಿಗಳ ಆತ್ಮವೂ ಅಲೆದಾಡುತ್ತಿದೆಯಂತೆ.
ಲಂಡನ್ನಿಂದ ಕೇವಲ ಒಂದು ಗಂಟೆ ದೂರದಲ್ಲಿ ಪ್ಲಕ್ಲಿ ಎಂಬ ಹಳ್ಳಿ (Pluckely Village( ಇದೆ. ಈ ಗ್ರಾಮವು ನೋಡೊದಕ್ಕೆ ತುಂಬಾನೆ ಸುಂದರವಿದೆ, ಸಾಮಾನ್ಯ ಊರಿನಂತೆ ಕಾಡುತ್ತದೆ. ಆದರೆ ಇಲ್ಲಿನ ಒಂದೊಂದು ಕಥೆ ಕೇಳಿದ್ರೆ, ಕೈ ಕಾಲು ನಡುಗೋಕೆ ಶುರುವಾಗುತ್ತೆ. ಈ ಹಳ್ಳಿಯ ಇತಿಹಾಸವನ್ನು ನೋಡಿದರೆ, ಭಯಂಕರ ಕೊಲೆಗಳು, ಭಯಾನಕ ಮುಖಗಳು ಮತ್ತು ಕಿರುಚಾಟಗಳಿಂದ ತುಂಬಿದ ಕಥೆ ಕೇಳಬಹುದು. ಇದು ಬ್ರಿಟನ್ನ ಅತಿ ಹೆಚ್ಚು ದೆವ್ವಗಳಿರುವ ಭಯಾನಕ ತಾಣಗಳಲ್ಲಿ ಒಂದಾಗಿದೆ ಮತ್ತು ಮಾಹಿತಿಯ ಪ್ರಕಾರ, ಇದು 1989 ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ (Gunnies Book of World Record) ಸ್ಥಾನ ಪಡೆದಿದೆ.
ಪ್ಲಕ್ಲಿಯ ಇತಿಹಾಸವನ್ನ ನೋಡಿದ್ರೆ ಇಲ್ಲಿ ಹೆಚ್ಚಿನ ಜನರ ಕೊಲೆಗಳು ನಡೆದಿವೆ ಅನ್ನೋದು ತಿಳಿದು ಬಂದಿದೆ. ಹಾಗಾಗಿ ಈ ತಾಣ ಆತ್ಮಗಳ ಆವಾಸ ಸ್ಥಾನವಾಗಿ ಮಾರ್ಪಾಡು ಹೊಂದಿದೆ. ಸತ್ತ ಜನರ ಆತ್ಮಗಳು ಇಂದು ಬ್ರಿಟನ್ ನ ಈ ಒಂದು ಸಣ್ಣ ಹಳ್ಳಿಯ ಬೀದಿಗಳಲ್ಲಿ ಅಲೆದಾಡುತ್ತಲೆ ಇರುತ್ತದೆ, ಅಷ್ಟೇ ಅಲ್ಲ ಇಲ್ಲಿ ಪ್ರಾಣಿಗಳ ಆತ್ಮವೂ ಅಲೆದಾಡುತ್ತಿದೆ.
ದೆವ್ವಗಳ ಹಾವಳಿ ಇರುವ 12 ಸ್ಥಳಗಳು (Haunted Village)
ಈ ಗ್ರಾಮದಲ್ಲಿ 12 ಸ್ಥಳಗಳಿವೆ, ಅಲ್ಲಿ ದೆವ್ವಗಳು ತಿರುಗಾಡುತ್ತಿರುವುದನ್ನ ಜನರು ಕಣ್ಣಾರೆ ಕಂಡಿದ್ದಾರೆ. ಹಾಗಂತ ಈ ಸ್ಥಳ ಖಾಲಿಯಾಗೇನೂ ಇಲ್ಲ. ಇದು ಹಾಲಿಡೇ ಎಂಜಾಯ್ ಮಾಡಲು ಜನರು ಹೆಚ್ಚಾಗಿ ಬರುವಂತಹ ತಾಣವಾಗಿದೆ. ಏಕೆಂದರೆ ಈ ಗ್ರಾಮವು ದೆವ್ವಗಳ ಕಾರಣದಿಂದಾಗಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಎಲ್ಲರೂ ದೆವ್ವಗಳಿಂದ ದೂರ ಇರಲು ಬಯಸಿದ್ರೆ, ಈ ತಾಣಕ್ಕೆ ದೆವ್ವಗಳ ಭೇಟಿಗೆಂದೇ ಜನ ಬರ್ತಾರೆ.
ಇಲ್ಲಿನ ಸುಮಾರು 12 ಸ್ಥಳಗಳಲ್ಲಿ ಜನರು ಅನೇಕ ದೆವ್ವಗಳನ್ನು ನೋಡಿದ್ದಾರಂತೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ನಿಮ್ಮನ್ನ ಕೂಗಿದಂತೆ ಭಾಸವಾಗೋದು, ಹತ್ತಿರ ಯಾರೋ ಬಂದು ನಿಂತ ಅನುಭವವೂ ಆಗುತ್ತಂತೆ. ಆದರೆ ಸುತ್ತಲೂ ಎಲ್ಲೂ ಮನುಷ್ಯರು ಇರೋದೆ ಇಲ್ಲ, ಇವೆಲ್ಲವೂ ದೆವ್ವವು ಅಲ್ಲಿ ಇರುವಂತಹ ಅನುಭವ ನೀಡುತ್ತದೆ.
ಪ್ಲಕ್ಲಿ ಗ್ರಾಮವು ತುಂಬಾ ಸುಂದರವಾಗಿದೆ ಮತ್ತು ಈ ಗ್ರಾಮದಲ್ಲಿ ಮನುಷ್ಯನ ಅಗತ್ಯಕ್ಕೆ ಬೇಕಾದ ಎಲ್ಲಾ ಸೌಲಭ್ಯವೂ ದೊರೆಯುತ್ತದೆ. ಚರ್ಚ್ ಗಳು, ಶಾಲೆಗಳು, ರೆಸ್ಟೋರೆಂಟ್ ಗಳು ಮತ್ತು ಅನೇಕ ಅಂಗಡಿಗಳನ್ನು ಸಹ ಒಳಗೊಂಡಿದೆ. ಇಲ್ಲಿನ ಜನವಸತಿ ಕೂಡ ಇದೆ. ಜನರಿಗೂ ಈಗ ದೆವ್ವಗಳು ಅಭ್ಯಾಸವಾಗಿಬಿಟ್ಟಿದೆ. ಹಾಗಾಗಿ ಜನ ಹೆಚ್ಚಾಗಿ ಹೆದರದೆ ದೆವ್ವಗಳೊಂದಿಗೆ ಜೀವನ ನಡೆಸ್ತಾರೆ ಇಲ್ಲಿ.
ಇನ್ನು ಇಲ್ಲಿ ಅಲೆಯುತ್ತಿರುವ ಪ್ರತಿಯೊಂದು ದೆವ್ವ ಅಥವಾ ಆತ್ಮವು ಒಂದೊಂದು ಕಥೆಯನ್ನು ಹೊಂದಿದೆ. 18 ನೇ ಶತಮಾನದಲ್ಲಿ, ಕೆಲವರು ಹೆದ್ದಾರಿಯಲ್ಲಿ ಒಬ್ಬ ವ್ಯಕ್ತಿಯನ್ನು ಖಡ್ಗದಿಂದ ಕತ್ತರಿಸಿದ್ದರಂತೆ, ಅಂದಿನಿಂದ ಅವನ ಆತ್ಮವು ಇಲ್ಲಿ ಅಲೆದಾಡುತ್ತಿದೆ. ಇದಲ್ಲದೆ, ಭಯ ಹುಟ್ಟಿಸುವ ವಿಭಿನ್ನ ದೆವ್ವದ ಕಥೆಗಳೂ (horror stories) ಇವೆ.
ಸ್ಕ್ರೀಮಿಂಗ್ ಮ್ಯಾನ್: ಪ್ಲಕ್ಲಿಯ ಅತ್ಯಂತ ಜನಪ್ರಿಯ ದೆವ್ವಗಳಲ್ಲಿ ಒಂದು ಸ್ಕ್ರೀಮಿಂಗ್ ಮ್ಯಾನ್ (Screaming man). ಆ ವ್ಯಕ್ತಿ ಹಳ್ಳಿಯ ಇಟ್ಟಿಗೆ ತಯಾರಿಸುವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಕಸ್ಮಾತ್ ಆಗಿ ಬಿದ್ದು ಸಾವನ್ನಪ್ಪಿದ್ದರಂತೆ, ಅವರ ಆತ್ಮ ಇಂದಿಗೂ ಜೋರಾಗಿ ಕಿರುಚುತ್ತಿರುತ್ತೆ ಎನ್ನಲಾಗಿದೆ.
ಹೈವೇ ಮ್ಯಾನ್: ಹೆದ್ದಾರಿ ಚಾಲಕನೊಬ್ಬನನ್ನು ಖಡ್ಗದಿಂದ ಕೊಂದು ಈಗ ಫ್ರೈಟ್ಸ್ ಕಾರ್ನರ್ ಎಂದು ಕರೆಯಲ್ಪಡುವ ಸ್ಥಳದಲ್ಲಿದ್ದ ಮರಕ್ಕೆ ನೇತುಹಾಕಲಾಗಿತ್ತಂತೆ. ಅವರ ಆತ್ಮ ಈಗ ಸ್ಥಳೀಯರು ಮತ್ತು ಪ್ರವಾಸಿಗರಿಗೆ ನೆರಳಿನ ರೂಪದಲ್ಲಿ ಕಾಣ ಸಿಗುತ್ತದೆ.
ವಯಸ್ಸಾದ ಮಹಿಳೆ: ಕೆಲವೊಮ್ಮೆ, ವಯಸ್ಸಾದ ಮಹಿಳೆಯ ಭೂತವನ್ನು ಇಲ್ಲಿ ಕಾಣಬಹುದು ಎಂದು ಅಲ್ಲಿನ ಜನ ಹೇಳ್ತಾರೆ. ಆ ಮಹಿಳೆ ಮಲಗಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಾವನ್ನಪ್ಪಿದ್ದರು. ಈಗ ದೆವ್ವವಾಗಿ ಈ ಜಾಗದಲ್ಲಿ ತಿರುಗಾಡುತ್ತಿದ್ದಾರೆ.
ವೆಕೇಶನ್ ಎಂಜಾಯ್ ಮಾಡಲು ಬರ್ತಾರೆ ಜನ
ಈ ಹಳ್ಳಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಎಲ್ಲವನ್ನೂ ತಿಳಿದ ನಂತರವೂ, ಅವರು ರಜಾದಿನಗಳನ್ನು ಎಂಜಾಯ್ ಮಾಡಲು ಜನ ಇಲ್ಲಿಗೆ ಬರುತ್ತಾರೆ. ಈ ಹಳ್ಳಿಯ ಇತಿಹಾಸವು ಬಹಳ ಹಳೆಯದು. ಮೊದಲನೆಯ ಮಹಾಯುದ್ಧದ ಅನೇಕ ಸೈನಿಕರು ಸಹ ಇಲ್ಲಿ ವಾಸಿಸುತ್ತಿದ್ದರು. ಈ ಸೈನಿಕರು ಸಾವಿನ ನಂತರ ತಮ್ಮ ಕುಟುಂಬಗಳನ್ನು ಭೇಟಿಯಾಗಲು ದೆವ್ವಗಳಂತೆ ಇಲ್ಲಿಗೆ ಬಂದರು ಮತ್ತು ನಂತರ ಇಲ್ಲಿಂದ ಹಿಂತಿರುಗದೇ, ಇಲ್ಲಿಯೇ ದೆವ್ವವಾಗಿ ಅಲೆದಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಇದೆ.