MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ

ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸತ್ತಾಗ, ಮನೆಯವರು ಏನು ಮಾಡುತ್ತಾರೆ? ಇದೆಂಥಾ ಪ್ರಶ್ನೆ ಅಂತಾ ಕೇಳ್ಬೇಡಿ. ಇದನ್ನು ಕೇಳೋದಕ್ಕೂ ಕಾರಣ ಇದೆ. ಒಬ್ಬ ಸತ್ತಾಗ ಸಂಪ್ರದಾಯದ ಪ್ರಕಾರ ಅವರ ಅಂತ್ಯ ಸಂಸ್ಕಾರ ಮಾಡಲಾಗುತ್ತೆ ಅಲ್ವಾ? ಅದು ಕೂಡ ಅತಿ ದುಃಖದ ಪರಿಸ್ಥಿತಿಯಲ್ಲಿ ಇದನ್ನೆಲ್ಲಾ ಮಾಡಲಾಗುತ್ತೆ. ಆದರೆ ಮಡಗಾಸ್ಕರ್ ನಲ್ಲಿ ಈ ವಿಧಾನವೇ ಬೇರೆ ಇದೆ.  

1 Min read
Suvarna News
Published : Feb 02 2023, 06:15 PM IST
Share this Photo Gallery
  • FB
  • TW
  • Linkdin
  • Whatsapp
16

ಮನೆಯಲ್ಲಿ ಯಾರಾದರೂ ಸತ್ತಾಗ, ಇಡೀ ಕುಟುಂಬ ಶೋಕದಲ್ಲಿ ಮುಳುಗುತ್ತೆ. ಎಲ್ಲಾ ಕಡೆಯೂ ಇದೇ ರೀತಿ ಆಗುತ್ತದೆ ಅಲ್ವಾ?. ಆದರೆ ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಜನರು ಆ ಹೆಣವನ್ನು ಹಿಡಿದುಕೊಂಡು ನೃತ್ಯ ಮಾಡಲು ಮತ್ತು ಹಾಡಲು ಪ್ರಾರಂಭಿಸುವ ದೇಶವಿದೆ ಎಂದು ನಾವು ಹೇಳಿದರೆ, ಬಹುಶಃ ಅದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಹೌದು, ಜನರು ಮೃತ ದೇಹದೊಂದಿಗೆ ನೃತ್ಯ (dancing with dead body) ಮಾಡುವ ದೇಶವಿದೆ. 

26

ಈ ದೇಶದಲ್ಲಿ, ಜನರು ತಮ್ಮ ಕುಟುಂಬದಲ್ಲಿ ಯಾರಾದರೂ ಸತ್ತಾಗ ಬೇಸರದಿಂದ ಅಂತ್ಯ ಸಂಸ್ಕಾರ ಮಾಡೋದಿಲ್ಲ, ಬದಲಾಗಿ ಅವರೊಂದಿಗೆ ನೃತ್ಯ ಮಾಡುತ್ತಾರೆ. ಈ ದೇಶದ ವಿಶಿಷ್ಟ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳಿ, ಈ ಬಗ್ಗೆ ಕೇಳಿದ್ರೆ ನೀವೂ ಹೇಳಬಹುದು ಹೀಗೂ ಉಂಟೆ ಎಂದು.

36
ಮಡಗಾಸ್ಕರ್ ದೇಶದಲ್ಲಿ ವಿಶಿಷ್ಟ ಪದ್ಧತಿ (Weird tradition in Madagascar)

ಮಡಗಾಸ್ಕರ್ ದೇಶದಲ್ಲಿ ವಿಶಿಷ್ಟ ಪದ್ಧತಿ (Weird tradition in Madagascar)

ಮಡಗಾಸ್ಕರ್ ಜನರು ತಮ್ಮ ಕುಟುಂಬ ಸದಸ್ಯರ ಮರಣದ ನಂತರ ಈ ವಿಶಿಷ್ಟ ಮತ್ತು ವಿಚಿತ್ರ ಪದ್ಧತಿಯನ್ನು ಆಚರಿಸುತ್ತಾರೆ. ಇಲ್ಲಿ ಯಾರಾದರೂ ಸತ್ತಾಗಲೆಲ್ಲಾ, ಕುಟುಂಬದ ಎಲ್ಲಾ ಜನರು ಆ ಮೃತ ದೇಹದೊಂದಿಗೆ ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ.

46
ಮಡಗಾಸ್ಕರ್ ನಲ್ಲಿ ಇದನ್ನು ಏನೆಂದು ಕರೆಯಲಾಗುತ್ತದೆ?

ಮಡಗಾಸ್ಕರ್ ನಲ್ಲಿ ಇದನ್ನು ಏನೆಂದು ಕರೆಯಲಾಗುತ್ತದೆ?

ಮಡಗಾಸ್ಕರ್ನಲ್ಲಿ, ಇದನ್ನು ಫಮಡಿಹಾನಾ (Famadihana) ಅಂದರೆ 'ಅಸ್ಥಿಪಂಜರ ರಚನೆ' (turning of the skeleton) ಎಂದು ಕರೆಯಲಾಗುತ್ತದೆ. ದೇಹವು ಎಷ್ಟು ಬೇಗ ಅಸ್ಥಿಪಂಜರವಾಗುತ್ತದೆಯೋ ಅಷ್ಟು ಬೇಗ ಅದು ಮುಕ್ತಿಯನ್ನು ಪಡೆಯುತ್ತದೆ ಎಂದು ಜನರು ನಂಬುತ್ತಾರೆ. ಆ ರೀತಿಯಾಗಿ ಅವನು ಹೊಸ ಜೀವನವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಜನ ನಂಬುತ್ತಾರೆ..

56
ಮೃತದೇಹವನ್ನು ಸಮಾಧಿಯಿಂದ ಹೊರಗೆ ತೆಗೆದು ನೃತ್ಯ ಮಾಡುತ್ತಾರೆ -

ಮೃತದೇಹವನ್ನು ಸಮಾಧಿಯಿಂದ ಹೊರಗೆ ತೆಗೆದು ನೃತ್ಯ ಮಾಡುತ್ತಾರೆ -

ಜನರ ಪ್ರಕಾರ, ಸತ್ತ ದೇಹದ ಮೇಲೆ ಮಾಂಸ ಇರುವವರೆಗೆ, ಆತ್ಮವು ಮತ್ತೊಂದು ದೇಹಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಸಮಾಧಿಯಿಂದ ಹೊರಗೆ ತೆಗೆದುಕೊಂಡು ಅದರೊಂದಿಗೆ ನೃತ್ಯ ಮಾಡುತ್ತಾರೆ.

66
ಸಂಪ್ರದಾಯವು ಯಾವಾಗ ನಡೆಯುತ್ತದೆ

ಸಂಪ್ರದಾಯವು ಯಾವಾಗ ನಡೆಯುತ್ತದೆ

ಮೃತ ದೇಹದೊಂದಿಗೆ ನೃತ್ಯ ಮಾಡುವ ಮತ್ತು ಹಾಡುವ ಮೂಲಕ, ಜನರು ಆ ಶವವನ್ನು ಮತ್ತೆ ಹೂಳುತ್ತಾರೆ. ಈ ರೀತಿಯಾಗಿ, ಸಂಪ್ರದಾಯವನ್ನು ಮರಣದ ಎರಡನೇ ವರ್ಷ ಅಥವಾ ಏಳನೇ ವರ್ಷದಲ್ಲಿ ಮಾಡಲಾಗುತ್ತದೆ.

About the Author

SN
Suvarna News
ನೃತ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved