MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಇದು ಜಗತ್ತಿನ ಬಲು ಅಗ್ಗದ ದೇಶ, ನಿಮ್ ಕೈಯಲ್ಲಿ 1000 ರೂ. ಇದ್ರೂ ಕೋಟ್ಯಾಧಿಪತಿ ತರ ಜೀವಿಸಬಹುದು

ಇದು ಜಗತ್ತಿನ ಬಲು ಅಗ್ಗದ ದೇಶ, ನಿಮ್ ಕೈಯಲ್ಲಿ 1000 ರೂ. ಇದ್ರೂ ಕೋಟ್ಯಾಧಿಪತಿ ತರ ಜೀವಿಸಬಹುದು

ಸಮುದ್ರದಿಂದ ಸುತ್ತುವರೆದಿರುವ ಈ ಸಣ್ಣ ದೇಶ ವಿಯಟ್ನಾಮ್ ಆಗ್ನೇಯ ಏಷ್ಯಾದಲ್ಲಿದೆ. ಟ್ರಾವೆಲ್ ಮಾಡೋದಕ್ಕೆ ಹೋಗೋದಾದ್ರೆ, ಇಲ್ಲಿ ಬೀಚ್, ಸರೋವರ ಮತ್ತು ಜಂಗಲ್ ಸಫಾರಿ ಎಲ್ಲವೂ ಇದೆ. ಈ ತಾಣಕ್ಕೆ ಹೋದ್ರೆ ಇಲ್ಲಿ ನೀವು ನಿಜವಾಗಿಯೂ ರಿಚ್ ಆಗಿ ಫೀಲ್ ಮಾಡ್ತೀರಿ.  

2 Min read
Author : Pavna Das
Published : Aug 06 2024, 03:03 PM IST
Share this Photo Gallery
  • FB
  • TW
  • Linkdin
  • Whatsapp
17

ಟ್ರಾವೆಲ್ ಮಾಡೋದಕ್ಕೆ ಇಷ್ಟಪಡುವವರು ಸುಂದರವಾದ, ನೇಚರನ್ನು ಎಂಜಾಯ್ ಮಾಡಿಕೊಳ್ಳಲು ಸಾಧ್ಯವಾಗುವಂತಹ, ಕಡಿಮೆ ಖರ್ಚಿನಲ್ಲಿ ದೇಶ ಸುತ್ತೋಕೆ ಖಂಡಿತವಾಗಿಯೂ ಇಷ್ಟ ಪಡ್ತಾರೆ ಅಲ್ವಾ? ನೀವು ಕೂಡ ಅಂತದ್ದೇ ಜಾಗ ಹುಡುಕುತ್ತಿದ್ರೆ ವಿಯೆಟ್ನಾಂ (Vietnam)  ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿಗೆ ನೀವು ಕಡಿಮೆ ಬಜೆಟ್‌ನಲ್ಲಿ ಇಂಟರ್‌ನ್ಯಾಷನಲ್ ಟ್ರಿಪ್ ಮಾಡಬಹುದು. 
 

27

ವಿಯೆಟ್ನಾಂ ದೇಶದಲ್ಲಿ ಭಾರತೀಯ ರೂಪಾಯಿಯ (value of Indian Ruoees) ಮೌಲ್ಯವು ತುಂಬಾ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ನೀವು ಕಡಿಮೆ ದರದಲ್ಲಿ ದೇಶದ ಮೂಲೆ ಮೂಲೆ ಸುತ್ತಬಹುದು. ಅಷ್ಟೇ ಅಲ್ಲ ಒಂದೆರಡು ಸಾವಿರ ಕೈಯಲ್ಲಿದ್ರೆ ಸಾಕು ನೀವೇ ಶ್ರೀಮಂತರು ಎನ್ನುವ ಅನುಭವ ಕೂಡ ಪಡೆಯಬಹುದು. ಯಾಕಂದ್ರೆ ವಿಯೆಟ್ನಾಂನಲ್ಲಿ, ನೀವು ಭಾರತದ 1000 ರೂಪಾಯಿಗಳನ್ನು ಹೊಂದಿದ್ದರೆ, ಅದರ ಬೆಲೆ ತುಂಬಾ ಹೆಚ್ಚಾಗಿರುತ್ತದೆ.
 

37

ವಿಯೆಟ್ನಾಂ ತನ್ನ ರುಚಿಕರವಾದ ಬೀದಿ ಆಹಾರ (street food), ಆಸಕ್ತಿದಾಯಕ ಸಂಸ್ಕೃತಿ ಮತ್ತು ಸುಂದರ ಪ್ರಕೃತಿಗೆ ಹೆಸರುವಾಸಿ. ಆದ್ದರಿಂದ, ಸಾಕಷ್ಟು ಹಣವಿಲ್ಲದಿದ್ದರೂ, ಕೆಲವು ಸಾವಿರ ರೂಪಾಯಿಗಳೊಂದಿಗೆ ವಿಯೆಟ್ನಾಂನಲ್ಲಿ ತಿರುಗಾಡಬಹುದು. ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡೋದಕ್ಕೆ ಅನೇಕ ಜನರು ಡಿಸೆಂಬರ್ ಮತ್ತು ಜನವರಿಯಲ್ಲಿ ಅಲ್ಲಿಗೆ ಹೋಗಲು ಬಯಸುತ್ತಾರೆ. ವಿಯೆಟ್ನಾಂನಲ್ಲಿ ಹೊಸ ವರ್ಷವನ್ನು ಆಚರಿಸುವುದು ಇತರ ದೇಶಗಳಿಗಿಂತ ತುಂಬಾನೆ ಚೀಪ್ ಆಗಿದೆ.
 

47

ವಿಯೇಟ್ನಾಂನಲ್ಲಿ ಭಾರತದ 1 ರೂಪಾಯಿಯ ಮೌಲ್ಯ ಎಷ್ಟು ಗೊತ್ತಾ?
ಸಮುದ್ರದಿಂದ ಸುತ್ತುವರೆದಿರುವ ಈ ಸಣ್ಣ ದೇಶವು ಆಗ್ನೇಯ ಏಷ್ಯಾದಲ್ಲಿದೆ. ಟ್ರಾವೆಲ್ ಮಾಡೋದಾದ್ರೆ, ಬೀಚ್, ಸರೋವರ ಮತ್ತು ಜಂಗಲ್ ಸಫಾರಿ ಈ ಮೂರನ್ನು ನೀವಿಲ್ಲಿ ಎಂಜಾಯ್ ಮಾಡಬಹುದು. ಕರೆನ್ಸಿಯ ಬಗ್ಗೆ ಹೇಳೋದಾದ್ರೆ ಇಲ್ಲಿನ ಹಣವನ್ನ ವಿಯೆಟ್ನಾಮೀಸ್ ಡಾಂಗ್ ಎನ್ನುತ್ತಾರೆ. 1 ರೂಪಾಯಿ ಭಾರತೀಯ ರೂಪಾಯಿಗಳ ಬದಲಿಗೆ 300 ವಿಯೆಟ್ನಾಮೀಸ್ ಡಾಂಗ್ (Vietnamies Dong) ಇಲ್ಲಿ ಸಿಗಲಿದೆ.

57

ವಿಯೆಟ್ನಾಂನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು
ಹನೋಯಿ, ಹೋ ಚಿ ಮಿನ್ಹ್, ಸಪಾ, ಹಾ ಲಾಂಗ್ ಬೇ, ನಹಾ ತರಂಗ್, ಮೆಕಾಂಗ್ ಡೆಲ್ಟಾ, ಯುದ್ಧ ಸ್ಮಾರಕಗಳು ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳಾಗಿವೆ. ವಿಯೆಟ್ನಾಂನಲ್ಲಿ ಹ್ಯಾಲೋಂಗ್ ಕೊಲ್ಲಿ ಎಂದು ಕರೆಯಲ್ಪಡುವ ಸುಂದರ ಪ್ರವಾಸಿ ಸ್ಥಳವಿದೆ. ಇದು ನಿಜವಾಗಿಯೂ ಪ್ರವಾಸಿಗರಿಗೆ ಜನಪ್ರಿಯ ಸ್ಥಳವಾಗಿದೆ ಮತ್ತು 'ಬೇ ಆಫ್ ಡಿಸ್ಕವರಿ ಡ್ರ್ಯಾಗನ್‌ಗಳು' ಎಂಬ ವಿಶೇಷ ಹೆಸರನ್ನು ಸಹ ಹೊಂದಿದೆ. 

67

ವಿಯೆಟ್ನಾಂನ ಮತ್ತೊಂದು ಸುಂದರ ಸ್ಥಳವೆಂದರೆ ರಾಜಧಾನಿ ಹನೋಯ್. ಇದು ಬಹಳ ಹಳೆಯ ಇತಿಹಾಸವನ್ನು ಹೊಂದಿದೆ ಮತ್ತು ಜನರು ನಿಜವಾಗಿಯೂ ಇಷ್ಟಪಡುವ ಸ್ಥಳ. ವಿಯೆಟ್ನಾಂನ ಉತ್ತರ ಭಾಗದಲ್ಲಿ, ಹುವಾ ಗಿಯಾಂಗ್ ಎಂಬ ಪಟ್ಟಣವಿದೆ, ಅಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಹೋಗೋದಕ್ಕೆ ಇಷ್ಟಪಡ್ತಾರೆ. 
 

77

ವಿಯೆಟ್ನಾಂ ತಲುಪುವುದು ಹೇಗೆ?
ವಿಯೆಟ್ನಾಂಗೆ ಅನೇಕ ನೇರ ವಿಮಾನಗಳು ಲಭ್ಯವಿದೆ. ದೆಹಲಿಯಿಂದ ವಿಯೆಟ್ನಾಂಗೆ ಕನಿಷ್ಠ ಶುಲ್ಕವು ಪ್ರಸ್ತುತ 8,466 ರೂ. ದೆಹಲಿಯಿಂದ ವಿಯೆಟ್ನಾಂ ತಲುಪಲು 11 ಗಂಟೆ 20 ನಿಮಿಷಗಳು ಬೇಕಾಗುತ್ತದೆ. ಇದು ನಿಮ್ಮನ್ನು ಹೋ ಚಿ ಮಿನ್ಹ್ ನಗರದಲ್ಲಿ ಇಳಿಸುತ್ತದೆ. ಇಲ್ಲಿಂದ ನೀವು ಹತ್ತಿರದ ಹೋಟೆಲ್ ಅನ್ನು ಬುಕ್ ಮಾಡಬಹುದು. ಇಲ್ಲಿ ಜೀವನ ವೆಚ್ಚವು ದಿನಕ್ಕೆ ಕನಿಷ್ಠ 1000 ಆಗಿದೆ. ಇಲ್ಲಿ ನೀವು ಪ್ರವಾಸಿ ಹಾಸ್ಟೆಲಿನಲ್ಲಿ ಉಳಿಯಬಹುದು. ದಿನಕ್ಕೆ ಮೂರು ಬಾರಿ ತಿನ್ನುವ ಸಂಪೂರ್ಣ ವೆಚ್ಚ ಎಲ್ಲಾ ಸೇರಿ ಸುಮಾರು 800 ರೂಪಾಯಿಗಳಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸ
ಪ್ರವಾಸೋದ್ಯಮ

Latest Videos
Recommended Stories
Recommended image1
ಭಾರತದಲ್ಲಿದೆ ‘Mini Iran’... ಈ ಗಾಜಿನ ದೇಗುಲ ಪ್ರವೇಶಿಸಿದರೆ ಇರಾನ್’ಗೆ ಕಾಲಿಟ್ಟ ಅನುಭವ!
Recommended image2
99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ
Recommended image3
ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved