ಈ ಗ್ರಾಮದ ಯುವಕರಿಗೆ ಮದುವೆಯಾಗೋ ಭಾಗ್ಯ ಇಲ್ಲ… ಇದು ಅವಿವಾಹಿತರ ಗ್ರಾಮ !
ಅವಿವಾಹಿತರಿಂದಲೇ ತುಂಬಿರೋ ಗ್ರಾಮವೊಂದು ಭಾರತದಲ್ಲಿದೆ, ಅಲ್ಲಿನ ಯುವಕರು ಮದುವೆಯಾಗದೇ ಅದೇಷ್ಟೊ ಸಮಯ ಆಯ್ತೋ ಗೊತ್ತಿಲ್ಲ. ಇದನ್ನ ಯಾಕೆ ಹೀಗೆ ಕರೀತಾರೆ? ಇಲ್ಲಿನ ಜನರು ಯಾಕೆ ಮದುವೆಯಾಗಿಲ್ಲ. ಅನ್ನೋದರ ಬಗ್ಗೆ ತಿಳಿಯೋಣ.

ಭಾರತವು ಹಳ್ಳಿಗಳ ದೇಶ ಅನ್ನೋದನ್ನು ನೀವು ಆಗಾಗ್ಗೆ ಕೇಳಿರಬಹುದು. ಭಾರತದ ಸಂಸ್ಕೃತಿ ಮತ್ತು ಸೌಂದರ್ಯವನ್ನು ತೋರಿಸುವ ಹಳ್ಳಿಗಳು ದೇಶದ ನಿಜವಾದ ಪರಂಪರೆಯಾಗಿದೆ. ಕೆಲವು ಹಳ್ಳಿಗಳು ತುಂಬಾ ಅದ್ಭುತವಾಗಿವೆ, ಜನರು ಅವುಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿದ್ದಾರೆ. ಇಂದು ನಾವು ನಿಮಗೆ 'ಬರ್ವಾನ್ ಕಲಾ' (Barwan Kala) ಎಂಬ ಹಳ್ಳಿಯ ಬಗ್ಗೆ ಹೇಳುತ್ತೇವೆ. 'ಬರ್ವಾನ್ ಕಲಾ'ವನ್ನು ಅವಿವಾಹಿತರ ಗ್ರಾಮ (Village of Bachelors) ಎಂದೂ ಕರೆಯುತ್ತಾರೆ. ಈ ಗ್ರಾಮದ ಬಗ್ಗೆ ತಿಳಿಯೋಣ.
ಬರ್ವಾನ್ ಕಲಾ ಗ್ರಾಮ
ಪಾಟ್ನಾದಿಂದ 300 ಕಿ.ಮೀ ದೂರದಲ್ಲಿರುವ ಈ ಹಳ್ಳಿಯಲ್ಲಿ, ಹಲವು ವರ್ಷಗಳಿಂದ ಯಾವುದೇ ಹುಡುಗನಿಗೆ ಮದುವೆಯಾಗಿಲ್ಲ. ಇಲ್ಲಿನ ಹುಡುಗರು ಮದುವೆಯಾಗಲು (Bachelor Village) ಬಯಸುವುದಿಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಈ ಹಳ್ಳಿಯ ಹುಡುಗರು ಮದುವೆಯಾಗಲು ಬಯಸುತ್ತಾರೆ ಆದರೆ ಇದರ ಹೊರತಾಗಿಯೂ, ಅವರಿಗೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲ.
ಗ್ರಾಮದಲ್ಲಿ ಕೆಲವು ಅವ್ಯವಸ್ಥೆಯಿಂದಾಗಿ ಯಾವುದೇ ಹುಡುಗಿ ಮದುವೆಯಾದ ನಂತರ ಇಲ್ಲಿಗೆ ಬರುವುದಿಲ್ಲ. ಈ ಹಳ್ಳಿಯಲ್ಲಿ ಒಬ್ಬ ಹುಡುಗನಿಗೆ ಮದುವೆಯಾಗಿ ಸುಮಾರು ವರ್ಷಗಳೇ ಕಳೆದಿತ್ತು ಎಂದು ಹೇಳಲಾಗುತ್ತದೆ. ಕೊನೆಯದಾಗಿ ಇಲ್ಲಿ, 2017ರಲ್ಲಿ ಒಬ್ಬ ಹುಡುಗನಿಗೆ ಮದುವೆ ಆಗಿತ್ತು.
ಹುಡುಗರು ಏಕೆ ಮದುವೆಯಾಗಬಾರದು?
ಈ ಹಳ್ಳಿಯ ಹುಡುಗರು ಮದುವೆಯಾಗದಿರಲು ವಿಭಿನ್ನ ಕಾರಣಗಳಿವೆ. ಈ ಗ್ರಾಮವು ತುಂಬಾ ಹಿಂದುಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಪೋಷಕರು ತಮ್ಮ ಮಗಳನ್ನು ಇಲ್ಲಿ ಮದುವೆ ಮಾಡಿ ಕೊಡಲು ಭಯ ಪಡ್ತಾರೆ. ಈ ಗ್ರಾಮದಲ್ಲಿ ಸರಿಯಾದ ರಸ್ತೆ ಸೌಲಭ್ಯವೂ ಇಲ್ಲ, ನೀರಿನ ಸಮಸ್ಯೆಯಂತೂ ಸಿಕ್ಕಾಪಟ್ಟೆ ಇದೆ. ಅಷ್ಟೇ ಅಲ್ಲ ಈ ಹಳ್ಳಿಯ ಶಾಲೆಗಳು ಮತ್ತು ಶಿಕ್ಷಣದ ಸ್ಥಿತಿಯೂ ಚಿಂತಾಜನಕವಾಗಿದೆ. ಇಷ್ಟೇಲ್ಲಾ ಸಮಸ್ಯೆ ಇರೋ ಗ್ರಾಮಕ್ಕೆ ಯಾರು ತಾನೆ ಹುಡುಗಿ ಕೊಡೋಕೆ ರೆಡಿಯಿದ್ದಾರೆ ನೀವೇ ಹೇಳಿ.
ಈ ಊರಿನ ಹುಡುಗನನ್ನು ಮದುವೆಯಾಗಲು ಸುತ್ತಮುತ್ತಲ ಊರಿನ ಹುಡುಗಿಯರು ಹಿಂದೇಟು ಹಾಕ್ತಾರೆ. ಸುಮಾರು 50 ವರ್ಷಗಳಿಂದ ಯಾವುದೇ ಮದುವೆ ನಡೆದಿರಲಿಲ್ಲವಂತೆ. ಆದ್ರೆ 2017ರಲ್ಲಿ ಇಲ್ಲಿ ಮದುವೆ ನಡೆದಿತ್ತು ಎನ್ನಲಾಗಿದೆ. ಮದುವೆಯಾಗೋದು ಸುಲಭವಲ್ಲ.
ಹುಡುಗ ಮದುವೆಗೆ ಮುನ್ನವೇ ಗ್ರಾಮವನ್ನು ತೊರೆಯಬೇಕು. ಯಾವುದಾದ್ರೂ ಗೆಸ್ಟ್ ಹೌಸಿನಲ್ಲಿ (Guest House) ಉಳಿದುಕೊಳ್ಳಬೇಕು. ಯಾಕೆಂದ್ರೆ ಈ ಗ್ರಾಮದಲ್ಲಿ ಮದುವೆಗೆ ಅವಶ್ಯವಿರುವ ಸೌಲಭ್ಯವಿಲ್ಲ. 2017ರ ನಂತ್ರ ಇಲ್ಲಿ ಯಾವುದೇ ಮದುವೆ ಇಲ್ಲಿ ನಡೆದಿಲ್ಲ. ಬಹಳ ವರ್ಷಗಳ ನಂತರ ಅಲ್ಲಿ ಮೊದಲ ಮದುವೆ ನಡೆದ ಕಾರಣ ವರನ ಸ್ವಾಗತವನ್ನು ಭಾರಿ ಅದ್ಧೂರಿಯಾಗಿ ನಡೆಸಲಾಗಿತ್ತು. ಗ್ರಾಮಸ್ಥರು ಗುಡ್ಡ-ಕಾಡು ಕಡಿದು 6 ಕಿ.ಮೀ ರಸ್ತೆ ಮಾಡಿ, ಮದುವೆಗೆ ತಯಾರಿ ನಡೆಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.