ಶಾಪಿಂಗ್ ಪ್ರಿಯರು ಮಿಸ್ ಮಾಡದೇ ಭೇಟಿ ನೀಡಲೇಬೇಕಾದ ಬೆಂಗಳೂರಿನ ತಾಣಗಳು
ನೀವು ಶಾಪಿಂಗ್ ಪ್ರಿಯರಾಗಿದ್ದರೆ, ಅದು ಬೆಂಗಳೂರಿನಲ್ಲಿದ್ದರೆ, ಈ ತಾಣಗಳಲ್ಲಿ ಶಾಪಿಂಗ್ ಮಾಡೋದನ್ನು ಮರಿಬೇಡಿ. ಈ ತಾಣಗಳು ಶಾಪಿಂಗ್ ಪ್ರಿಯರಿಗೆ ಸ್ವರ್ಗಕ್ಕಿಂತ ಕಡಿಮೆ ಏನಿಲ್ಲ.

ನೀವು ಬೆಂಗಳೂರಿನಲ್ಲಿದ್ದೀರಾ? ಇಲ್ಲಿ ಉತ್ತಮ ಫ್ಯಾಷನ್ ಬಟ್ಟೆಗಳು, ಟ್ರೆಂಡಿ ಉಡುಪುಗಳು, ರೇಷ್ಮೆ ಸೀರೆಗಳು, ಜ್ಯುವೆಲ್ಲರಿ, ಬ್ಯಾಗ್ಸ್, ಆಕ್ಸೆಸರೀಸ್, ಬುಕ್ಸ್, ಕ್ಯಾಮೆರಾ ಎಲ್ಲಿ ಸಿಗುತ್ತೆ ಎಂದು ಹುಡುಕಾಡುತ್ತಿದ್ದರೆ ಮಿಸ್ ಮಾಡದೇ ಈ ತಾಣಗಳಿಗೆ (Shopping streets of Bangalore) ಭೇಟಿ ನೀಡಿ.
ಗಾಂಧಿ ಬಜಾರ್ - ಬಸವನಗುಡಿ
ಏನು ಖರೀದಿಸಬೇಕು: ಸಾಂಪ್ರದಾಯಿಕ ಉಡುಗೆ, ಪೂಜಾ ಸಾಮಗ್ರಿಗಳು, ಹಿತ್ತಾಳೆ ಸಾಮಾನುಗಳು, ಹೂವುಗಳು, ಸಿಹಿತಿಂಡಿಗಳು.
ಟಿಪ್ಸ್ : ಹಬ್ಬದ ಶಾಪಿಂಗ್ ಮತ್ತು ದಕ್ಷಿಣ ಭಾರತೀಯ ವಾತಾವರಣಕ್ಕೆ ಸೂಕ್ತವಾಗಿದೆ.
ಅವೆನ್ಯೂ ರೋಡ್ - ಮೆಜೆಸ್ಟಿಕ್ ಹತ್ತಿರ
ಏನು ಖರೀದಿಸಬೇಕು: ಪುಸ್ತಕಗಳು, ಲೇಖನ ಸಾಮಗ್ರಿಗಳು, ಶೈಕ್ಷಣಿಕ ಮಾರ್ಗದರ್ಶಿಗಳು, ಹಳೆಯ ಕಾದಂಬರಿಗಳು, ಬಳಸಿದ ವಸ್ತುಗಳು.
ಟಿಪ್ಸ್ : ಪುಸ್ತಕ ಪ್ರಿಯರು ಮತ್ತು ದೊಡ್ಡ ಪ್ರಮಾಣದಲ್ಲಿ ಖರೀದಿಸುವವರಿಗೆ ಸ್ವರ್ಗ.
ಮಲ್ಲೇಶ್ವರಂ 8ನೇ ಕ್ರಾಸ್ - ಉತ್ತರ ಬೆಂಗಳೂರು
ಏನು ಖರೀದಿಸಬೇಕು: ದಿನನಿತ್ಯದ ಉಡುಗೆ ತೊಡುಗೆಗಳು, ಆಭರಣಗಳು, ಮನೆ ಅಲಂಕಾರದ ವಸ್ತುಗಳು, ಆಟಿಕೆಗಳು.
ಟಿಪ್ಸ್ : ಬಜೆಟ್ ಫ್ರೆಂಡ್ಲಿ ಮತ್ತು ಕಡಿಮೆ ಜನದಟ್ಟಣೆ.
ಕಮರ್ಷಿಯಲ್ ಸ್ಟ್ರೀಟ್ - ಸೆಂಟ್ರಲ್ ಬೆಂಗಳೂರು (Commercial Street)
ಏನು ಖರೀದಿಸಬೇಕು: ಹೆಚ್ಚುವರಿ ಬಟ್ಟೆ, ಆಕ್ಸೆಸರೀಸ್, ಫೂಟ್ ವೇರ್, ಬಟ್ಟೆ, ಜ್ಯುವೆಲ್ಲರಿ
ಟಿಪ್ಸ್ : ಬ್ರಾಂಡೆಡ್ ಡ್ರೆಸ್ ನಂತೆ ಕಾಣುವ ಬಟ್ಟೆಗಳು ಮತ್ತು ಬಾರ್ಗೈನ್ ಮಾಡಲು ಬೆಸ್ಟ್.
ಜಯನಗರ 4ನೇ ಬ್ಲಾಕ್ - ದಕ್ಷಿಣ ಬೆಂಗಳೂರು
ಏನು ಖರೀದಿಸಬೇಕು: ಸಾಂಪ್ರದಾಯಿಕ ಉಡುಗೆ, ಕ್ಯಾಶುಯಲ್ ಡ್ರೆಸ್, ಕಾಟನ್ ಕುರ್ತಿಗಳು, ಜಂಕ್ ಆಭರಣಗಳು.
ಟಿಪ್ಸ್ : ಸಣ್ಣ ಅಂಗಡಿಗಳು ಮತ್ತು ಮಳಿಗೆಗಳ ಉತ್ತಮ.
ರೆಸಿಡೆನ್ಸಿ ರೋಡ್ ಸಂಡೆ ಮರ್ಕೆಟ್ - ಎಂಜಿ ರಸ್ತೆ (ಭಾನುವಾರಗಳು ಮಾತ್ರ)
ಏನು ಖರೀದಿಸಬೇಕು: ಪ್ರಾಚೀನ ವಸ್ತುಗಳು, ಸೆಕೆಂಡ್ ಹ್ಯಾಂಡ್ ಪುಸ್ತಕಗಳು, ವಿಂಟೇಜ್ ಕ್ಯಾಮೆರಾಗಳು, ವಿನೈಲ್ ರೆಕಾರ್ಡ್‌ಗಳು.
ಟಿಪ್ಸ್ : ಬೆಸ್ಟ್ ಸಾಮಾಗ್ರಿಗಳು ಹುಡುಕಾಟಕ್ಕಾಗಿ ಆದಷ್ತು ಬೇಗನೆ ತೆರಳಿ!
ಟಿಬೆಟ್ ಮಾಲ್ - ಕೋರಮಂಗಲ
ಏನು ಖರೀದಿಸಬೇಕು: ಕ್ಯಾಶುಯಲ್ ಉಡುಗೆ, ಟ್ರೆಂಡಿ ಟಾಪ್ಸ್, ಬ್ಯಾಗ್‌ಗಳು, ಆಕ್ಸೆಸರೀಸ್, ಶೂಗಳು.
ಟಿಪ್ಸ್ : ಸ್ಟ್ರೀಟ್ ಸ್ಟೈಲ್ ಬಜೆಟ್ ಫ್ಯಾಷನ್ ಹುಡುಕುತ್ತಿರುವ ಕಾಲೇಜು ಪ್ರಿಯರಿಗೆ ಇದು ಸೂಕ್ತ.
ಎಸ್‌ಪಿ ರಸ್ತೆ (ಸದರ್ ಪತ್ರಪ್ಪ ರಸ್ತೆ) – ಟೌನ್ ಹಾಲ್ ಹತ್ತಿರ
ಏನು ಖರೀದಿಸಬೇಕು: ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಪರಿಕರಗಳು, ಸಿಸಿಟಿವಿ ಗೇರ್, ಕಂಪ್ಯೂಟರ್ ಭಾಗಗಳು.
ಟಿಪ್ಸ್ : ತಂತ್ರಜ್ಞರಿಗೆ ಉತ್ತಮ, ಆದರೆ ಖರೀದಿಸುವ ಮೊದಲು ಪರೀಕ್ಷಿಸಿ.
ಬ್ರಿಗೇಡ್ ರಸ್ತೆ - ಎಂಜಿ ರೋಡ್
ಏನು ಖರೀದಿಸಬೇಕು: ಫಂಕಿ ಟಿ-ಶರ್ಟ್‌ಗಳು, ಜೀನ್ಸ್, ಕೈಗಡಿಯಾರಗಳು, ಸನ್ ಗ್ಲಾಸ್, ಆಕ್ಸೆಸರೀಸ್.
ಟಿಪ್ಸ್ : ಟ್ರೆಂಡಿ ಸ್ಟ್ರೀಟ್‌ವೇರ್ ಜೊತೆಗೆ ಅಕ್ಕಪಕ್ಕದಲ್ಲಿ ಬ್ರಾಂಡೆಡ್ ಅಂಗಡಿಗಳು ಸಹ ಇವೆ.
ಚಿಕ್ಕಪೇಟೆ - ಕೆ.ಆರ್. ಮಾರುಕಟ್ಟೆ ಹತ್ತಿರ
ಏನು ಖರೀದಿಸಬೇಕು: ಸೀರೆಗಳು, ರೇಷ್ಮೆ ಬಟ್ಟೆಗಳು, ಮದುವೆಯ ಉಡುಪುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು.
ಟಿಪ್ಸ್ : ಸಾಂಪ್ರದಾಯಿಕ ಶಾಪಿಂಗ್ ಮತ್ತು ಬೃಹತ್ ಖರೀದಿಗೆ ಸೂಕ್ತವಾಗಿದೆ.