ಸೂಪರ್ ಮಾರ್ಕೆಟ್ ಗೆ ಹೋಗಿ  4 ಸಾವಿರಕ್ಕಿಂತ ಕಡಿಮೆ ಬಿಲ್ ಮಾಡೋರ ಸಂಖ್ಯೆ ಬಹಳ ಕಡಿಮೆ. ಅದು- ಇದು ಅಂತಾ ಬಜೆಟ್ ಜಾಸ್ತಿಯಾಗುತ್ತೆ. ಅಲ್ಲೂ ನೀವು ಕಡಿಮೆ ಹಣ ಖರ್ಚು ಮಾಡ್ಬೇಕು ಅಂದ್ರೆ ಈ ಪ್ಲಾನ್ ಫಾಲೋ ಮಾಡ್ಬೇಕು. 

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬದಲು ಈಗಿನ ಜನರು ಸೂಪರ್ ಮಾರ್ಕೆಟನ್ನು ಹೆಚ್ಚು ಇಷ್ಟಪಡ್ತಾರೆ. ಬೀದಿ ಬದಿಯಲ್ಲಾದ್ರೆ ಒಂದೇ ಕಡೆ ಎಲ್ಲ ವಸ್ತು ಸಿಗೋದಿಲ್ಲ. ತರಕಾರಿಗಾಗಿ ಒಂದು ಅಂಗಡಿಗೆ ಹೋದ್ರೆ, ದಿನಸಿಗೆ ಇನ್ನೊಂದು ಅಂಗಡಿಗೆ ಹೋಗ್ಬೇಕು. ಬಟ್ಟೆಗಾಗಿ ಇನ್ನೊಂದು ಅಂಗಡಿ ಹುಡುಕಬೇಕು. ಇದು ಕಿರಿಕಿರಿ ಎನ್ನುವ ಕಾರಣಕ್ಕೆ ಜನರು ಸೂಪರ್ ಮಾರ್ಕೆಟ್ ಇಷ್ಟಪಡ್ತಾರೆ. ಬೀದಿ ಬದಿ ವ್ಯಾಪಾರ ಹಾಗೂ ಸೂಪರ್ ಮಾರ್ಕೆಟ್ ವ್ಯಾಪಾರವನ್ನು ನೀವು ಹೋಲಿಸಿ ನೋಡಿದಾಗ, ಸೂಪರ್ ಮಾರ್ಕೆಟ್ ನಲ್ಲಿ ನಿಮಗೆ ಖರ್ಚು ಹೆಚ್ಚಾಗುತ್ತದೆ. ಸೂಪರ್ ಮಾರ್ಕೆಟ್ ಗೆ ಕಾಲಿಟ್ಮೇಲೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಡಿಮೆಯಾಯ್ತು ಎಂದೇ ಅರ್ಥ. ಅಲ್ಲಿ, ಕಂಡ ಕಂಡ ವಸ್ತುಗಳನ್ನೆಲ್ಲ ನಾವು ಖರೀದಿ ಮಾಡ್ತೇವೆ. ಮನೆಗೆ ಬಂದು ನೋಡಿದ್ರೆ ಅದ್ರಲ್ಲಿ ಅರ್ಥ ಪ್ರಯೋಜನಕ್ಕೆ ಬರೋದಿಲ್ಲ. ನಮ್ಮ ಪರಿಸ್ಥಿತಿಯೂ ಇದೆ ಎನ್ನುವವರು ನೀವಾಗಿದ್ದರೆ ಸೂಪರ್ ಮಾರ್ಕೆಟ್ ನಲ್ಲಿ ಖರೀದಿ ಮಾಡುವ ವೇಳೆ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಸೂಪರ್ ಮಾರ್ಕೆಟ್ (Supermarket) ನಲ್ಲಿ ಖರ್ಚು ಕಡಿಮೆ ಆಗ್ಬೇಕೆಂದ್ರೆ ಹೀಗೆ ಮಾಡಿ :

ಖರೀದಿ (Purchase) ಗೆ ಹೋಗುವ ಮೊದಲೇ ಒಂದು ಲೀಸ್ಟ್ ಸಿದ್ದಪಡಿಸಿಕೊಳ್ಳಿ : ಸೂಪರ್ ಮಾರ್ಕೆಟ್ ನಲ್ಲಿ ಎಲ್ಲವೂ ಒಂದೇ ಕಡೆ ಸಿಗುವ ಕಾರಣ ಜನರು ಯಾವುದೆ ಪ್ಲಾನ್ ಇಲ್ಲದೆ ಅಲ್ಲಿಗೆ ನುಗ್ಗುತ್ತಾರೆ. ಮನೆಯಲ್ಲಿ ಅದಿಲ್ಲ, ಇದಿಲ್ಲವೆನ್ನುತ್ತ ಒಂದಿಷ್ಟು ವಸ್ತುಗಳನ್ನು ಖರೀದಿ ಮಾಡ್ತಾರೆ. ನೀವು ಪ್ಲಾನ್ ಇಲ್ಲದೆ ಅಲ್ಲಿಗೆ ಹೋಗುವ ಸಾಹಸ ಮಾಡ್ಬೇಡಿ. ಸೂಪರ್ ಮಾರ್ಕೆಟ್ ಗೆ ಹೋಗುವ ಮೊದಲು ನಿಮಗೆ ಅಗತ್ಯವಿರುವ ವಸ್ತುಗಳನ್ನು ಪಟ್ಟಿಮಾಡಿ ಅದನ್ನು ಮಾತ್ರ ಖರೀದಿ ಮಾಡಿ. ಬೇರೆ ವಸ್ತುಗಳನ್ನು ಕಣ್ಣೆತ್ತಿಯೂ ನೋಡಲು ಹೋಗ್ಬೇಡಿ.

ಖರೀದಿಸಿದ ಸಾಮಗ್ರಿಗೆ ಬಿಲ್ ಪಡಿರಿ: ಒಂದು ಕೋಟಿವರೆಗೆ ಬಹುಮಾನ ಗೆಲ್ಲಿ

ಒನ್ ಟೈಂ ಬಳಕೆ ವಸ್ತುವನ್ನು ಖರೀದಿ ಮಾಡ್ಬೇಡಿ : ನೀವು ಸೂಪರ್ ಮಾರ್ಕೆಟ್ ನಲ್ಲಿ ಖರೀದಿ ಮಾಡುವವರಾಗಿದ್ದರೆ ಅಲ್ಲಿ ಒನ್ ಟೈಂ ಬಳಕೆ ಮಾಡುವ ಯಾವುದೇ ವಸ್ತು ಖರೀದಿಸಬೇಡಿ. ಅನೇಕ ಬಾರಿ ಬಳಕೆ ಮಾಡಬಹುದಾದ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಇದು ನಿಮ್ಮ ವೆಚ್ಚವನ್ನು ತಗ್ಗಿಸುತ್ತದೆ. 

ಖರೀದಿ ಪ್ರಮಾಣ ದೊಡ್ಡದಿರಲಿ :  ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಖರೀದಿಸಿದ್ರೆ ಪದೇ ಪದೇ ಬರುವುದು ತಪ್ಪುತ್ತದೆ, ವೆಚ್ಚ ಕೂಡ ಕಡಿಮೆ ಆಗುತ್ತದೆ. ಹಾಗಾಗಿ ಸೂಪರ್ ಮಾರ್ಕೆಟ್‌ನಿಂದ ಸರಕುಗಳನ್ನು ಖರೀದಿಸುವಾಗ ಒಂದೇ ಬಾರಿಗೆ ಹೆಚ್ಚಿನ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಿ. ನೀವು ಆರಾಮವಾಗಿ ಸಂಗ್ರಹಿಸಬಹುದಾದ ಮತ್ತು 6-7 ತಿಂಗಳವರೆಗೆ ಬಳಸಬಹುದಾದ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿ ಮಾಡಿ.

ರತನ್‌ ಟಾಟಾಗೆ ಮಾಯಾ ಟಾಟಾ ಉತ್ತರಾಧಿಕಾರಿ?, ಟಾಟಾ ಸಮೂಹಕ್ಕೆ ಮಹಿಳಾ ಅಧಿಪತ್ಯ ಸಾಧ್ಯತೆ

ಆಫರ್ ಹಾಗೂ ಅನಗತ್ಯ ವಸ್ತುಗಳ ಖರೀದಿ ಬೇಡ : ಸೂಪರ್ ಮಾರ್ಕೆಟ್ ನಲ್ಲಿ ಒಂದಿಷ್ಟು ಆಫರ್ ಗಳಿರುತ್ತವೆ. ಒಂದಕ್ಕೆ ಒಂದು ಉಚಿತ, ಶೇಕಡಾ 50ರಷ್ಟು ರಿಯಾಯಿತಿ ಹೀಗೆ ಅನೇಕ ಆಫರ್ ಬೋರ್ಡ್ ನಮ್ಮನ್ನು ಸೆಳೆಯುತ್ತದೆ. ನಮಗೆ ಆ ವಸ್ತುಗಳ ಅಗತ್ಯವಿಲ್ಲದೆ ಹೋದ್ರೂ ನಾವು ಆಫರ್ ಇದೆ ಎನ್ನುವ ಕಾರಣಕ್ಕೆ ಖರೀದಿ ಮಾಡ್ತೇವೆ. ಮನೆಯಲ್ಲಿ ಟಾಯ್ಲೆಟ್ ಪೇಪರ್ ಇದೆ ಅಥವಾ ಅದನ್ನು ನೀವು ಬಳಕೆ ಮಾಡೋದಿಲ್ಲ ಎನ್ನುವ ಸಮಯದಲ್ಲಿ ಕೂಡ ಆಫರ್ ಇದೆ ಎಂದು ಅದನ್ನು ಖರೀದಿ ಮಾಡಿದ್ರೆ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಪ್ರತಿ ವಸ್ತು ಖರೀದಿ ಮುನ್ನ ಅದನ್ನು ಕೈನಲ್ಲಿ ಹಿಡಿದು ಎಷ್ಟು ಅಗತ್ಯವಿದೆ, ನಾವು ಬಳಸುತ್ತೇವಾ ಎಂಬುದನ್ನು ಲೆಕ್ಕ ಮಾಡಿ ನಂತ್ರ ನಿರ್ಧರಿಸಿ. 

ಈ ವಿಷ್ಯದ ಬಗ್ಗೆಯೂ ಗಮನವಿರಲಿ : ಸೂಪರ್ ಮಾರ್ಕೆಟ್ ಮಾತ್ರವಲ್ಲ ಯಾವುದೇ ಅಂಗಡಿಗೆ ಹೋಗುವ ಮುನ್ನ ಕ್ಯಾರಿ ಬ್ಯಾಗ್ ನಿಮ್ಮ ಜೊತೆ ಇರಲಿ. ಇಲ್ಲವೆಂದ್ರೆ ನೀವು ಬ್ಯಾಗ್ ಗೆ ಹಣ ನೀಡಬೇಕಾಗುತ್ತದೆ. ಸಾಧ್ಯವಾದಷ್ಟು ಶಾಪಿಂಗ್ ವೇಳೆ ಮಕ್ಕಳನ್ನು ಕರೆದೊಯ್ಯಬೇಡಿ. ಕ್ಯಾಶ್ಬ್ಯಾಕ್ ಆಫರ್ ಪರಿಶೀಲನೆ ಮಾಡಿ. ಇಂಥ ಮಾರ್ಕೆಟ್ ಗಳ ಸದಸ್ಯತ್ವ ಪಡೆದಿದ್ದರೆ ನಿಮಗೆ ಸ್ವಲ್ಪ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ ಎಂಬುದು ನೆನಪಿರಲಿ.