- Home
- Karnataka Districts
- Shivamogga
- ಸಹೋದ್ಯೋಗಿಯಿಂದ ರ‍್ಯಾಗಿಂಗ್: ಠಾಣೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ ಹೆಡ್ ಕಾನ್ಸ್‌ಟೇಬಲ್
ಸಹೋದ್ಯೋಗಿಯಿಂದ ರ‍್ಯಾಗಿಂಗ್: ಠಾಣೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ ಹೆಡ್ ಕಾನ್ಸ್‌ಟೇಬಲ್
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಮಹಮ್ಮದ್ ಜಕ್ರೀಯಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಸಹೋದ್ಯೋಗಿಯ ಚುಚ್ಚುಮಾತುಗಳೇ ಕಾರಣ ಎಂದು ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಚುಚ್ಚು ಮಾತು
ಹೆಡ್ ಕಾನ್ಸ್‌ಟೇಬಲ್ ಪೊಲೀಸ್ ಠಾಣೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಹೋದ್ಯೋಗಿಯ ಚುಚ್ಚು ಮಾತುಗಳೇ ಹೆಡ್ ಕಾನ್ಸ್‌ಟೇಬಲ್ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ಮಹಮ್ಮದ್ ಜಕ್ರೀಯಾ (55) ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿರುವ ಮಹಮ್ಮದ್ ಜಕ್ರೀಯಾ, ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ಕಿಂಡಲ್ ಮಾಡುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ.
ದೀರ್ಘ ರಜೆ ಬಳಿಕ ಸೇವೆಗೆ ಮರಳಿದ್ರು
ಮೃತ ಮಹಮ್ಮದ್ ಜಕ್ರೀಯಾ ಅವರು ಶಿವಮೊಗ್ಗದ ಆರ್ ಎಂ ಎಲ್ ನಗರದ ವಾಸಿಯಾಗಿದ್ದು, ದೀರ್ಘ ರಜೆ ಬಳಿಕ ಇತ್ತೀಚೆಗಷ್ಟೆ ಸೇವೆಗೆ ಮರಳಿದ್ದರು. ಒಂದು ತಿಂಗಳ ರಜೆ ಬಳಿಕ ಸೇವೆಗೆ ಮರಳಿದ್ದ ಮಹಮ್ಮದ್ ಜಕ್ರೀಯಾ ಅವರನ್ನು ನಾಸೀರ್ ತಮ್ಮ ವ್ಯಂಗ್ಯ ಮಾತುಗಳಿಂದ ತಮಾಷೆ ಮಾಡಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ: ನಕಲಿ ಗೋಲ್ಡ್, ಅಸಲಿ ಎಫ್ಐಆರ್: ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಶಿವಮೊಗ್ಗದ 73ರ ಅಜ್ಜಿ
ಎಸ್‌ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ
ಈ ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್‌ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಯಶ್ ಹೇಳಿದ ಜೀವನಾನುಭವವನ್ನು ಪಾಠದಲ್ಲಿ ಸೇರಿಸಿ: ಸೊರಬದ ಯುವಕ ಆತ್ಮ*ಹತ್ಯೆ

