ಯಶವಂತಪುರ-ತಾಳಗುಪ್ಪ ವಿಶೇಷ ರೈಲು: ಹೊಸ ಸಂಚಾರ ಸೇವೆ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಜುಲೈ 25, 2025 ರಿಂದ ಸೇವೆ ಆರಂಭಿಸಲಿದ್ದು, 20 ಬೋಗಿಗಳನ್ನು ಹೊಂದಿರುತ್ತದೆ.

ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/06588) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಈ ವಿಶೇಷ ರೈಲಿನಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರೈಲು ಸಂಖ್ಯೆ ಮತ್ತು ಸಮಯ
ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 25, 2025 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ.
ತಾಳಗುಪ್ಪದಿಂದ ಹಿಂದಿರುಗುವ ಸಮಯ ಹೀಗಿದೆ
ವಾಪಸ್ ಬರುವಾಗ, ರೈಲು ಸಂಖ್ಯೆ 06588 ತಾಳಗುಪ್ಪ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 26, 2025 ರಂದು ಬೆಳಿಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ.
20 ಬೋಗಿ ಹೊಂದಿರುವ ಎಕ್ಸ್‌ಪ್ರೆಸ್ ರೈಲು
ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಯಶವಂತಪುರದಿಂದ ತಾಳಗುಪ್ಪಕ್ಕಿರುವ ರೈಲುಗಳು
ಈ ವಿಶೇಷ ರೈಲು ಹೊರತುಪಡಿಸಿ ಯಶವಂತಪುರದಿಂದ ಮತ್ತೆರಡು ಎಕ್ಸ್‌ಪ್ರೆಸ್ ರೈಲುಗಳು ತಾಳಗುಪ್ಪಕ್ಕೆ ಸಂಚರಿಸುತ್ತವೆ.
1.SBC TLGP EXP (20651)
ಯಶವಂತರಪುದಿಂದ ಮಧ್ಯಾಹ್ನ 3.12ಕ್ಕೆ ಹೊರಟು ರಾತ್ರಿ 9.45ಕ್ಕೆ ತಲುಪುತ್ತದೆ. ವಾರದ ಎಲ್ಲಾ ದಿನವೂ ಈ ರೈಲು ಲಭ್ಯವಿದೆ.
ಹಿಂದಿರುಗುವಾಗ ರೈಲು ಸಂಖ್ಯೆ 20652 ಆಗಲಿದೆ. ತಾಳಗುಪ್ಪದಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಳಗ್ಗೆ 11.20ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ತಾಳಗುಪ್ಪಕ್ಕೆ ಮತ್ತೊಂದು ರೈಲು
2.MYS TLGP EXP (16227)
ಈ ರೈಲು ಯಶವಂತಪುರ ನಿಲ್ದಾಣದಿಂದ ರಾತ್ರಿ 11.28ಕ್ಕೆ ಹೊರಟು ಬೆಳಗ್ಗೆ 7.15ಕ್ಕೆ ತಲುಪಲಿದೆ. ವಾರದ ಎಲ್ಲಾ ದಿನ ಈ ರೈಲು ಸಂಚರಿಸುತ್ತದೆ.
ಹಿಂದಿರುಗುವಾಗ ರೈಲು ಸಂಖ್ಯೆ 16228 ಆಗುತ್ತದೆ. ತಾಳಗುಪ್ಪದಿಂದ ರಾತ್ರಿ 8.55ಕ್ಕೆ ಹೊರಟು ಬೆಳಗಿನ ಜಾವ 4.285ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.