MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ವಿದೇಶದಲ್ಲಿ 105 ಕೋಟಿ ರೂ ಬಾಚಿಕೊಂಡ ಯಶ್ ಮೂವಿ

ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ವಿದೇಶದಲ್ಲಿ 105 ಕೋಟಿ ರೂ ಬಾಚಿಕೊಂಡ ಯಶ್ ಮೂವಿ

ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ಕಳೆದ ತಿಂಗಳು ಟಾಕ್ಸಿಕ್ ಟ್ರೇಲರ್ ರಿಲೀಸ್ ಆಗಿತ್ತು. ಇಷ್ಟೇ ನೋಡಿ, ಇದೀಗ ಟಾಕ್ಸಿಕ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮಾತ್ರವಲ್ಲ, ಈಗಲೇ 105 ಕೋಟಿ ರೂಪಾಯಿ ಬಾಚಿಕೊಂಡಿದೆ. 

2 Min read
Author : Chethan Kumar
Published : Feb 11 2026, 06:28 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಕ್ಸಿಕ್ ಸಿನಿಮಾ ದಾಖಲೆ
Image Credit : stockPhoto

ಟಾಕ್ಸಿಕ್ ಸಿನಿಮಾ ದಾಖಲೆ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಟ್ರೇಲರ್ ರಿಲೀಸ್ ಆದ ಬಳಿಕ ಜನರ ಕುಹೂಲ ಹೆಚ್ಚಾಗಿದೆ. ಒಂದೊಂದು ಸೀನ್ ಕುರಿತು ಚರ್ಚೆಗಳಾಗಿದೆ. ಅದರಲ್ಲೂ ಕಾರಿನ ಸೀನ್ ಹಲವರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಸಿನಿಮಾ ರಿಲೀಸ್ ಆಗುತ್ತಿದೆ. ಕೆಜಿಎಫ್ ಬಳಿಕ ಯಶ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೌಂಟ್‌ಡೌನ್ ಶುರುಮಾಡಿದ್ದಾರೆ. ಈಗಾಗಲೇ ಕೆಲ ದಾಖಲೆ ಬರೆದಿರುವ ಟಾಕ್ಸಿಕ್ ಸಿನಿಮಾ ಇದೀಗ ಬಿಡುಗಡೆಗೂ ಮೊದಲೇ ದಾಖಲೆ ಆದಾಯ ಗಳಿಸಿದೆ.

26
105 ಕೋಟಿ ರೂಪಾಯಿ ಬಾಚಿಕೊಂಡ ಟಾಕ್ಸಿಕ್
Image Credit : stockPhoto

105 ಕೋಟಿ ರೂಪಾಯಿ ಬಾಚಿಕೊಂಡ ಟಾಕ್ಸಿಕ್

ಟಾಕ್ಸಿಕ್ ಸಿನಿಮಾ ಭಾರತದ ಭಾಷೆಗಳ ಜೊತೆಗೆ ಇಂಗ್ಲೀಷ್‌ನಲ್ಲೂ ಬಿಡುಗಡೆಯಾಗುತ್ತಿದೆ. ಇದೀಗ ಟಾಕ್ಸಿಕ್ ಸಿನಿಮಾ ವಿದೇಶಗಳ ಹಕ್ಕನ್ನು ಫರಸ್ ಫಿಲ್ಲ್ ಪಡೆದುಕೊಂಡಿದೆ. ಭಾರತೀಯ ಭಾಷೆಗಳ ಟಾಕ್ಸಿಕ್ ಸಿನಿಮಾ ವಿದೇಶದಲ್ಲಿ ಪ್ರದರ್ಶನದ ಹಕ್ಕು ಇದೀಗ ಫರಸ್ ಫಿಲ್ಮ್ ಪಾಲಾಗಿದೆ. ಇದಕ್ಕಾಗಿ ಈಗಾಗಲೇ 105 ಕೋಟಿ ರೂಪಾಯಿ ಫರಸ್ ಫಿಲ್ಮ್ ಡಿಸ್ಟ್ರಿಬ್ಯೂಶನ್ ಪಾವತಿ ಮಾಡಿದೆ. ಇನ್ನು ಬರವು ಲಾಭದಲ್ಲಿ ಪಾಲು ಹಂಚಿಕೊಳ್ಳುವ ಕುರಿತು ಮಾತುಕತೆಗಳು ನಡೆದಿದೆ.

Related Articles

Related image1
ಬಿಡುಗಡೆ ಹೊತ್ತಲ್ಲೇ Toxic ಸಿನಿಮಾಗೆ ಸಂಕಷ್ಟ; ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ, ಕ್ಷಮೆಗೆ ಒತ್ತಾಯ
Related image2
Yash ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; Toxic Movie ವಿರುದ್ಧ ವಕೀಲರಿಂದಲೇ ದೂರು ದಾಖಲು
36
ಟಾಕ್ಸಿಕ್ ಸಿನಿಮಾ ಇಂಗ್ಲೀಷ್ ಭಾಷೆ ಹಕ್ಕು
Image Credit : Youtube Screenshot@Toxic Teaser

ಟಾಕ್ಸಿಕ್ ಸಿನಿಮಾ ಇಂಗ್ಲೀಷ್ ಭಾಷೆ ಹಕ್ಕು

ಭಾರತದಲ್ಲಿ ಮಾತ್ರವಲ್ಲ ಟಾಕ್ಸಿಕ್ ಸಿನಿಮಾ ವಿದೇಶದಲ್ಲೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ವಿದೇಶದಲ್ಲಿ ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳ ಸಂಪೂರ್ಣ ಹಕ್ಕು ಫರಸ್ ಫಿಲ್ಮ್ ಭಾಗವಾಗಿದೆ. ಇತ್ತ ಟಾಕ್ಸಿಕ್ ಇಂಗ್ಲೀಷ್ ಭಾಷೆಯ ಸಿನಿಮಾ ಹಕ್ಕು ಮಾರಾಟದ ಮಾತುಕತೆಗಳು ನಡೆಯುತ್ತಿದೆ. ಈ ಮೊತ್ತ ಮತ್ತೊಂದು ದಾಖಲೆ ಬರೆಯಲಿದೆ

46
ಟಾಕ್ಸಿಕ್ ಸಿನಿಮಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆ
Image Credit : KVN Production

ಟಾಕ್ಸಿಕ್ ಸಿನಿಮಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆ

ಫರಸ್ ಫಿಲ್ಮ್ ಅತ್ಯುತ್ತಮ ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿತರಣೆ ಮಾಡುತ್ತದೆ. ಹಾಲಿವುಡ್ ಸೇರಿದಂತೆ ಹಲವು ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿತರಣೆ ಮಾಡುವ ಫರಸ್ ಇದೀಗ ಯಶ್ ಅಭಿಯನದ ಟಾಕ್ಸಿಕ್ ಸಿನಿಮಾ ವಿದೇಶಗಳಲ್ಲಿ ವಿತರಣೆ ಮಾಡಲಿದೆ.

56
ತೆಲುಗು ವಿತರಣೆಯಿಂದ 120 ಕೋಟಿ ರೂ
Image Credit : instagram

ತೆಲುಗು ವಿತರಣೆಯಿಂದ 120 ಕೋಟಿ ರೂ

ಟಾಕ್ಸಿಕ್ ಸಿನಿಮಾ ತೆಲುಗು ಭಾಷೆಯ ವಿತರಣೆ ಡೀಲ್ ಈಗಾಗಲೇ ದಾಖಲೆ ಬರೆದಿದೆ. ತೆಲುಗು ಭಾಷೆಯ ಸಿನಿಮಾ ವಿತರಣೆ ಹಕ್ಕಿಗಾಗಿ 120 ಕೋಟಿ ರೂಪಾಯಿ ಮೊತ್ತವನ್ನು ಟಾಕ್ಸಿಕ್ ಸಿನಿಮಾ ತಂಡಕ್ಕೆ ಪಾವತಿ ಮಾಡಲಾಗಿದೆ. ಶ್ರೀ ವೆಂಕಟೇಶ್ವರ ಕ್ರಿಯೇಶನ್ ತೆಲುಗು ವಿತರಣೆ ಹಕ್ಕು ಪಡೆದುಕೊಂಡಿದೆ. ತೆಲುಗು ಪ್ರಾಂತ್ಯದಲ್ಲಿ ತೆಲುಗು ಹೊರತಾದ ಸಿನಿಮಾ ಒಂದು ವಿತರಣೆ ಹಕ್ಕಿಗಾಗಿ 120 ಕೋಟಿ ರೂಪಾಯಿ ಒಪ್ಪಂದ ಕುದುರಿರುವುದು ಇದೇ ಮೊದಲು.

66
ವಿದೇಶದಲ್ಲಿ ಯಶ್ ಸಿನಿಮಾಗೆ ಭಾರಿ ಬೇಡಿಕೆ
Image Credit : kvn productions

ವಿದೇಶದಲ್ಲಿ ಯಶ್ ಸಿನಿಮಾಗೆ ಭಾರಿ ಬೇಡಿಕೆ

ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿದೇಶದಲ್ಲಿ ಮೋಡಿ ಮಾಡಿತ್ತು. ಇದರಿಂದ ಟಾಕ್ಸಿಕ್ ಸಿನಿಮಾಗೆ ವಿದೇಶದಲ್ಲಿ ಭಾರಿ ಬೇಡಿಕೆ ನಿರ್ಮಾಣವಾಗಿದೆ. ಪ್ರಮುಖವಾಗಿ ಯಶ್ ಸಿನಿಮಾಗೆ ಆಸ್ಟ್ರೇಲಿಯಾ, ಉತ್ತರ ಅಮೆರಿಕ ಹಾಗೂ ಯೂರೋಪ್‌ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಬಾರಿ ಟಾಕ್ಸಿಕ್ ಹಲವು ದಾಖಲೆ ಪುಡಿ ಮಾಡಲಿದೆ.

ವಿದೇಶದಲ್ಲಿ ಯಶ್ ಸಿನಿಮಾಗೆ ಭಾರಿ ಬೇಡಿಕೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಯಶ್
ಟಾಕ್ಸಿಕ್
ಸ್ಯಾಂಡಲ್‌ವುಡ್
ಸಿನಿಮಾ

Latest Videos
Recommended Stories
Recommended image1
ಲೈಂಗಿಕ ದೌರ್ಜನ್ಯ ಪ್ರಕರಣ: ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟ ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್
Recommended image2
Photos: ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ದಕ್ಷಿಣ ಭಾರತದ ನಟಿಯರು!
Recommended image3
ರೀಲ್ಸ್, ಫೋಟೋ ಹಾಕೋದಕ್ಕೇ ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ರಾ? ನಿವೇದಿತಾ ಗೌಡ ಹೇಳಿದ್ದೇನು ನೋಡಿ!
Related Stories
Recommended image1
ಬಿಡುಗಡೆ ಹೊತ್ತಲ್ಲೇ Toxic ಸಿನಿಮಾಗೆ ಸಂಕಷ್ಟ; ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ, ಕ್ಷಮೆಗೆ ಒತ್ತಾಯ
Recommended image2
Yash ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; Toxic Movie ವಿರುದ್ಧ ವಕೀಲರಿಂದಲೇ ದೂರು ದಾಖಲು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved