MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • KGF 2 : ಮಾತೃಪ್ರೇಮದ ಗಗನ ನೀ ಹಾಡಿಗೆ 2.6 ಮಿಲಿಯನ್‌ಗೂ ಅಧಿಕ ವೀಕ್ಷಣೆ

KGF 2 : ಮಾತೃಪ್ರೇಮದ ಗಗನ ನೀ ಹಾಡಿಗೆ 2.6 ಮಿಲಿಯನ್‌ಗೂ ಅಧಿಕ ವೀಕ್ಷಣೆ

‘ಕೆಜಿಎಫ್‌ 2’ ಚಿತ್ರದ ‘ಗಗನ ನೀ’ ಎಂಬ ಲಿರಿಕಲ್‌ ಆಡಿಯೋ ಬಿಡುಗಡೆಗೊಂಡಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಕನ್ನಡ ಒಂದರಲ್ಲೇ ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. 

1 Min read
Suvarna News
Published : Apr 07 2022, 09:36 AM IST
Share this Photo Gallery
  • FB
  • TW
  • Linkdin
  • Whatsapp
16

ಮಾತೃಪ್ರೇಮವನ್ನು ಸಾರುವ ಹಾಡು ಇದಾಗಿದ್ದು, ಅರ್ಚನಾ ಜೋಯಿಸ್‌ ನಿರ್ವಹಿಸಿರುವ ಯಶ್‌ ತಾಯಿಯ ಪಾತ್ರ ಹೈಲೈಟ್‌ ಆಗಿದೆ. ರವಿ ಬಸ್ರೂರು ಅವರ ಸಂಗೀತವಿರುವ ಈ ಹಾಡಿಗೆ ಕಿನ್ನಲ್‌ ರಾಜ್‌ ಅವರ ಸಾಹಿತ್ಯವಿದೆ. 

 

26

ಸುಚೇತಾ ಬಸ್ರೂರು ಹಾಡಿಗೆ ದನಿಯಾಗಿದ್ದಾರೆ. ಈ ಹಾಡಿನ ಹಿಂದಿ ವರ್ಶನ್‌ ‘ಫಲಕ್‌ ತು’ ಹಾಡನ್ನೂ ಸುಚೇತಾ ಅವರೇ ಹಾಡಿದ್ದು, 4.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. 

 

36

ತಮಿಳು ಹಾಡನ್ನು ಕನ್ನಡ ಗಾಯಕಿ ಅನನ್ಯಾ ಭಟ್‌ ಹಾಡಿದ್ದಾರೆ. ತೆಲುಗು, ಮಲಯಾಳಂ ವರ್ಶನ್‌ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದಿನ ‘ಕೆಜಿಎಫ್‌ ಚಾಪ್ಟರ್‌ 1’ರಲ್ಲೂ ತಾಯಿ ಸೆಂಟಿಮೆಂಟಿನ ಹಾಡಿತ್ತು. 

46

‘ಗರ್ಭದಿ ನನ್ನಿರಿಸಿ’ ಎಂಬ ಸಾಲುಗಳ ಈ ಹಾಡು ಗಮನಸೆಳೆದಿತ್ತು. ಯಶ್‌ ನಟನೆ, ಪ್ರಶಾಂತ್‌ ನೀಲ್‌ ನಿರ್ದೇಶನ, ವಿಜಯ್‌ ಕಿರಗಂದೂರು ನಿರ್ಮಾಣದ ‘ಕೆಜಿಎಫ್‌ 2’ ಚಿತ್ರ ಏಪ್ರಿಲ್‌ 14ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.

56

ಉತ್ತರ ಭಾರತದಲ್ಲಿ ಸಿನಿಮಾತಂಡ ಬೀಡಿಬಿಟ್ಟಿದ್ದು ಪ್ರಮೋಷನ್ ಅಬ್ಬರದ ಪ್ರಮೋಷನ್ ಮಾಡುತ್ತಿದೆ. ಈ ನಡುವೆ ಕೆಜಿಎಫ್-2 ಸಿನಿಮಾದ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. 

66

ವಿದೇಶಗಳಲ್ಲಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು ದಾಖಲೆಯ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಈ ಬಗ್ಗೆ ಸಿನಿಮಾತಂಡ ಮಾಹಿತಿ ಹಂಚಿಕೊಂಡಿತ್ತು. ಇದೀಗ ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದು ಈ​ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಿದೆ.

About the Author

SN
Suvarna News
ಸ್ಯಾಂಡಲ್‌ವುಡ್
ಯಶ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved