- Home
- Entertainment
- Sandalwood
- 'ಮರ್ಫಿ' ನಿರ್ದೇಶಕನ ಜೊತೆ ಕೈ ಜೋಡಿಸಿದ ವಿನಯ್ ರಾಜ್‌ಕುಮಾರ್: ಮಾಸ್ ಲುಕ್‌ನಲ್ಲಿ 'ಮಾಚಿಸ್'
'ಮರ್ಫಿ' ನಿರ್ದೇಶಕನ ಜೊತೆ ಕೈ ಜೋಡಿಸಿದ ವಿನಯ್ ರಾಜ್‌ಕುಮಾರ್: ಮಾಸ್ ಲುಕ್‌ನಲ್ಲಿ 'ಮಾಚಿಸ್'
ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ʻಮರ್ಫಿʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಬಿಎಸ್ ಪಿ ವರ್ಮ 'ಮಾಚಿಸ್' ಚಿತ್ರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಫಸ್ಟ್ ಲುಕ್ ರಿಲೀಸ್
ವಿನಯ್ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾ ಸೆಟ್ಟೇರುತ್ತಿದೆ. ವಿನಯ್ ಅವರ ಹುಟ್ಟುಹಬ್ಬದ ಅಂಗವಾಗಿ ಘೋಷಣೆ ಆಗಿರುವ ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದೆ.

ಮಾಸ್ ಲುಕ್‌ನಲ್ಲಿ ವಿನಯ್
‘ಮಾಚಿಸ್’ ಎಂಬುದು ಚಿತ್ರದ ಹೆಸರು. ಮಾಸ್ ಲುಕ್ಕಿನಲ್ಲಿರುವ ಈ ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆಯುತ್ತಿದೆ. ಮಾಸ್, ಆ್ಯಕ್ಷನ್, ಥ್ರಿಲ್ಲರ್ ನೆರಳಿನಲ್ಲಿ ಮೂಡಿ ಬರಲಿರುವ ಚಿತ್ರ ಇದಾಗಿದೆ.
ಬಿ.ಎಸ್.ಪಿ. ವರ್ಮಾ ಆಕ್ಷನ್ ಕಟ್
ಈ ಹಿಂದೆ ‘ಮರ್ಫಿ’ ಚಿತ್ರವನ್ನು ನಿರ್ದೇಶಿಸಿದ್ದ ಬಿ.ಎಸ್.ಪಿ. ವರ್ಮಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸುರೇಶ್ ಹೆಣ್ಣೂರು ಚಿತ್ರದ ನಿರ್ಮಾಪಕರು. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಶಿವುಗೌಡ ಇದ್ದಾರೆ.
ಜುಲೈಯಿಂದ ಚಿತ್ರದ ಚಿತ್ರೀಕರಣ ಆರಂಭ
ಚಿತ್ರದ ಛಾಯಾಗ್ರಾಹಕರಾಗಿ ಆದರ್ಶ ಆರ್, ಸಂಕಲನಕಾರರಾಗಿ ಕಿರಣ್, ಕಲಾ ನಿರ್ದೇಶಕರಾಗಿ ಗುಣ, ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಎನ್ ಮುನಿನಾರಾಯಣಪ್ಪ, ನಿರ್ವಹಣಾ ನಿರ್ಮಾಪಕರಾಗಿ ಸುರೇಶ್ ಮೈಸೂರು ಹಾಗೂ ಸಾಹಸ ಸಂಯೋಜನೆಯನ್ನ ಡಾ. ಕೆ. ರವಿ ವರ್ಮಾ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

