MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು

ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು

Kannada movies: ಕನ್ನಡ ಚಿತ್ರರಂಗದಲ್ಲಿ ಯಾರೂ ಊಹಿಸಿರದ ಕಥೆಯನ್ನು ನೀಡಿದ ಹಲವಾರು ಸಿನಿಮಾಗಳಿವೆ. ಕೆಲವು ಸಿನಿಮಾಗಳು ತಮ್ಮ ಕಾಲಘಟ್ಟಕ್ಕಿಂತಲೂ ಮುಂದಿನ ಕಥೆಯನ್ನು ಜನರಿಗೆ ತಿಳಿಸುವ ಮೂಲಕ ಅಚ್ಚರಿಯನ್ನು ಹುಟ್ಟು ಹಾಕಿತ್ತು. ಅಂತಹ ಸಿನಿಮಾಗಳು ಯಾವ್ಯಾವುವು ಅನ್ನೋದನ್ನು ನೋಡೋಣ. 

2 Min read
Author : Pavna Das
Published : Mar 25 2026, 06:28 PM IST
Share this Photo Gallery
  • FB
  • TW
  • Linkdin
  • Whatsapp
17
ಆಪರೇಷನ್ ಡೈಮಂಡ್ ರಾಕೆಟ್
Image Credit : social media

ಆಪರೇಷನ್ ಡೈಮಂಡ್ ರಾಕೆಟ್

ಕನ್ನಡ ಚಿತ್ರರಂಗವು ಸ್ಥಳೀಯ ಮತ್ತು ದೇಶಿಯ ಅಪರಾಧಗಳ ಬಗ್ಗೆ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ, ಡಾ. ರಾಜಕುಮಾರ್ ನಟಿಸಿರುವ ಈ ಸಿನಿಮಾ ಕನ್ನಡದ ಮೊದಲ ಸ್ಪೈ ಸಿನಿಮಾವಾಗಿ ಹೊರಬಂತು. ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೈಂ ನೆಟ್ವರ್ಕ್, ಸ್ಮಗ್ಲಿಂಗ್ ಮತ್ತು ಅಂಡರ್ ಕವರ್ ಆಪರೇಷನ್ ಬಗ್ಗೆ ಬೆಳಕು ಚೆಲ್ಲಿತ್ತು. ಈ ಸಿನಿಮಾವು ಯೂರೋಪ್ ದೇಶದಲ್ಲಿ ಶೂಟಿಂಗ್ ಮಾಡಲಾದ ಮೊದಲ ಕನ್ನಡ ಸಿನಿಮಾ.

27
ಸಿಂಗಾಪುರದಲ್ಲಿ ರಾಜ ಕುಳ್ಳ
Image Credit : social media

ಸಿಂಗಾಪುರದಲ್ಲಿ ರಾಜ ಕುಳ್ಳ

ಈ ಚಿತ್ರವು ಕನ್ನಡದಲ್ಲಿ ತೆರೆಕಂಡಂತಹ ವಿದೇಶದಲ್ಲಿ ಶೂಟಿಂಗ್ ಮಾಡಿದ ಮೊದಲ ಸಿನಿಮಾ. ಈ ಚಿತ್ರವನ್ನು ಪೂರ್ತಿಯಾಗಿ ಸಿಂಗಾಪುರದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರವು ಕನ್ನಡದ ಇತರ ಚಿತ್ರಗಳಂತಲ್ಲದೆ ನಾಯಕ ಸಿಂಗಾಪುರದಲ್ಲಿ ಯಾವ ರೀತಿಯಾಗಿ ಕ್ರೈಂ ಜಾಲವನ್ನು ಬಿಡಿಸುತ್ತಾ ಸಾಗುತ್ತಾನೆ ಅನ್ನೋದನ್ನ ಕಾಮಿಡಿ, ಆಕ್ಷನ್ ಮತ್ತು ಇಮೋಷನಲ್ ಮೂಲಕ ತೋರಿಸಿತ್ತು.

Related Articles

Related image1
Upcoming Kannada Movies: ಕಡಿಮೆ ಹಣದಿಂದ ಸಿನಿಮಾ ಯಶಸ್ಸು ಕಾಣಲು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೆ 10 ಸಲಹೆಗಳಿವು!
Related image2
Kannada Movies: ಈ ವಾರ ರಿಲೀಸ್‌ ಆಗಲಿದೆ ವೀಕ್ಷಕರ ಮನಸ್ಸು ಗೆದ್ದು ಕಾಡಿಸುವ ಸಿನಿಮಾಗಳು! ಯಾವುವು?
37
ಒಂದಾನೊಂದು ಕಾಲದಲ್ಲಿ
Image Credit : social media

ಒಂದಾನೊಂದು ಕಾಲದಲ್ಲಿ

ಶಂಕರ್ ನಾಗ್ ನಿರ್ದೇಶನ ಮಾಡಿದ್ದ ಈ ಚಿತ್ರ 1978ರಲ್ಲಿ ಬಿಡುಗಡೆಯಾಯಿತು. ಕನ್ನಡ ಸಿನಿಮಾ ಎಂದರೆ ಆಕ್ಷನ್ ಎಂದೆ ತಿಳಿದಿದ್ದ ಕಾಲಘಟ್ಟದಲ್ಲಿ, ಶಂಕರ್ ನಾಗ್ ಹಿಂಸೆಯಿಂದ ಉಂಟಾಗುವ ಪರಿಣಾಮಗಳನ್ನು ಒತ್ತಿ ಹೇಳಿದ್ದರು, ಇದು ಕನ್ನಡದಲ್ಲಿ ಬಂದಂತಹ ಹೊಸ ರೀತಿಯ ಸಿನಿಮಾ. ಆರಂಭದಲ್ಲಿ ಈ ಸಿನಿಮಾ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಸೋತಿತ್ತು. ಆದರೆ ನಂತರ ಆ ಚಿತ್ರದ ಇಂಪ್ಯಾಕ್ಟ್ ಜನರಿಗೆ ತಿಳಿದು ಬಂದಿತ್ತು.

47
ಸ್ವಸ್ತಿಕ್
Image Credit : social media

ಸ್ವಸ್ತಿಕ್

ಉಪೇಂದ್ರ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್ ವಿಭಿನ್ನ ಗೆಟಪ್ ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಕ್ರೈಂ, ಪಶ್ಚಾತ್ತಾಪ ಮತ್ತು ನೈತಿಕ ಸಂಘರ್ಷ ಯಾವ ರೀತಿ ಕೇವಲ ಕ್ರಿಮಿನಲ್ ಗಳಿಗೆ ಅಲ್ಲದೇ, ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರಿತ್ತು. ಅನ್ನೋದನ್ನು ತೋರಿಸಿದ ಸಿನಿಮಾ. ಈ ಸಿನಿಮಾ ಸ್ಲೋ ಆಗಿ ಸಾಗಿತ್ತು, ಹಾಗಾಗಿ ಆಗಿನ ಕಾಲದ ಜನರು ಇದನ್ನ ಇಷ್ಟಪಡಲಿಲ್ಲ. ಆದರೆ ನಂತರದ ದಿನಗಳಲ್ಲಿ ಸಿನಿಮಾ ನೋಡಿದ ಜನ ಇದನ್ನು ಹಿಡನ್ ಜೆಮ್ ಎಂದು ಕರೆದರು.

57
ಗುಲ್ಟು
Image Credit : social media

ಗುಲ್ಟು

ಕನ್ನಡ ಚಿತ್ರರಂಗವು ಸೈಬರ್ ಕ್ರೈಂ ಮತ್ತು ಡಾಟಾ ಪ್ರೈವಸಿ ಕುರಿತು ಚಿತ್ರಗಳನ್ನು ಮಾಡುವ ತುಂಬಾ ಹಿಂದೆಯೇ ಬಿಡುಗಡೆಯಾದ ಸಿನಿಮಾ ಇದು. ಈ ಸಿನಿಮಾದಿಂದಾಗಿ ಜನರಿಗೆ ತಮ್ಮ ಪರ್ಸನಲ್ ಮಾಹಿತಿ ಯಾವ ರೀತಿಯಲ್ಲಿ ಜಾಲತಾಣಗಳಲ್ಲಿ ಕಲೆ ಹಾಕಲಾಗುತ್ತದೆ ಮತ್ತು ಅದನ್ನು ಮಾರಾಟ ಮಾಡಲಾಗುತ್ತದೆ ಅನ್ನೋದು ತಿಳಿದು ಬಂದಿತ್ತು. ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಂದು ಬಿಡುಗಡೆಯಾದ ಗುಲ್ಟು ಚಿತ್ರ ಇಂದಿಗೆ ಪ್ರಸ್ತುತ ಎನಿಸುತ್ತಿದೆ

67
ಆ ದಿನಗಳು
Image Credit : social media

ಆ ದಿನಗಳು

ಈ ಚಿತ್ರ ಅಂಡರ್ ವರ್ಲ್ಡ್ ಗೆ ಸಂಬಂಧಪಟ್ಟ ಚಿತ್ರವಾಗಿದೆ, ಆದರೆ ಇದರಲ್ಲಿ ಗ್ಯಾಂಗ್ಸ್ಟರ್ ಗಳನ್ನು ಹಿಂಸೆಯನ್ನು ಹೊತ್ತು ಮೆರೆಸಲಿಲ್ಲ. ಬದಲಾಗಿ ಯಾವ ರೀತಿ ಭೂಗತ ಜಗತ್ತು ಕೆಲಸ ಮಾಡುತ್ತದೆ. ಅಲ್ಲಿನ ಜನರ ಕುರಿತು ಸತ್ಯಾ ಸತ್ಯತೆಯನ್ನು ಬಿಚ್ಚಿ ಹೇಳಿದ್ದು. ಸಿನಿಮಾದ ಸಾಂಗ್ ಗಳು ಸಹ ಹಿಟ್ ಆಗಿದ್ದವು.

77
ಮಠ
Image Credit : social media

ಮಠ

ಜಗ್ಗೇಶ್ ಅಭಿನಯಿಸಿರುವ, ಗುರುಪ್ರಸಾದ್ ನಿರ್ದೇಶನ ಮಾಡಿರುವ ‘ಮಠ’ ಸಿನಿಮಾ ಕುರುಡು ನಂಬಿಕೆಗಳ ಬಗ್ಗೆ ಹಾಗೂ ಪವಿತ್ರ ಸಂಸ್ಥೆಗಳಲ್ಲಿ ತಮ್ಮ ಅಧಿಕಾರ, ಅಂತಸ್ತು, ಧರ್ಮವನ್ನ ಬಳಸಿಕೊಂಡು ಏನೇನು ಮಾಡಲಾಗುತ್ತದೆ ಅನ್ನೋದನ್ನ ಹಾಸ್ಯದ ಮೂಲಕ ತೋರಿಸಿದ ಸಿನಿಮಾ. ಅದಕ್ಕೂ ಮುನ್ನ ಯಾವುದೇ ಕನ್ನಡ ಸಿನಿಮಾ ಈ ರೀತಿಯ ಕಥೆಗಳನ್ನು ಹೊರ ತಂದಿಲ್ಲವಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಕನ್ನಡ ಚಲನಚಿತ್ರಗಳು
Latest Videos
Recommended Stories
Recommended image1
ಕನ್ನಡ ಕಲಾವಿದರಿಗೆ ಪ್ರಶಸ್ತಿ ಕೊಟ್ಟು ಗೌರವ ಕೊಡದ ಫಿಲ್ಮ್‌ಫೇರ್? ನಟ ಶ್ರೀಮುರಳಿ ಬೇಸರ
Recommended image2
Puttakkana Makkalu ನಟಿ ಸಂಜನಾ ಬುರ್ಲಿ ಮದುವೆ ಸಂಭ್ರಮ: ರಿಸೆಪ್ಷನ್​ ಫೋಟೋಸ್​ ಇಲ್ಲಿವೆ
Recommended image3
‘ಕಾಂತಾರ’ ವಿವಾದಕ್ಕೆ ಬಿಗ್ ಟ್ವಿಸ್ಟ್: ನಟ ರಣವೀರ್ ಸಿಂಗ್ ಚಾವುಂಡಿ ದೈವಕ್ಕೆ ಬಂದು ಕ್ಷಮೆ ಕೇಳಲಿದ್ದಾರೆ-ಹೈಕೋರ್ಟ್
Related Stories
Recommended image1
Upcoming Kannada Movies: ಕಡಿಮೆ ಹಣದಿಂದ ಸಿನಿಮಾ ಯಶಸ್ಸು ಕಾಣಲು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೆ 10 ಸಲಹೆಗಳಿವು!
Recommended image2
Kannada Movies: ಈ ವಾರ ರಿಲೀಸ್‌ ಆಗಲಿದೆ ವೀಕ್ಷಕರ ಮನಸ್ಸು ಗೆದ್ದು ಕಾಡಿಸುವ ಸಿನಿಮಾಗಳು! ಯಾವುವು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved