- Home
- Entertainment
- Sandalwood
- Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್
Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್
ನಟ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಅವರು ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿದ್ದಾರೆ. ದರ್ಶನ್ ಅವರ ಹೆಸರನ್ನು ಉಗುರಿನ ಮೇಲೆ ಬರೆದುಕೊಂಡು, ಅವರ ಶೀಘ್ರ ಬಿಡುಗಡೆಗಾಗಿ ಹಾರೈಸಿದ್ದಾರೆ.

ದರ್ಶನ್ ಹುಟ್ಟುಹಬ್ಬ
ಇಂದು ನಟ ದರ್ಶನ್ (Darshan Birthday) ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇದಾಗಲೇ ಇಂದು ಹಲವಾರು ರೀತಿಯಲ್ಲಿ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಇರುವ ಹಿನ್ನೆಲೆಯಲ್ಲಿ, ಅವರ ಅನುಪಸ್ಥಿತಿಯಲ್ಲಿಯೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ.
ತನಿಷಾ ಕುಪ್ಪಂಡ
ಇದೀಗ ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅವರು ಕೂಡ ದರ್ಶನ್ ಅವರ ಅಭಿಮಾನಿ. ಅವರ ಬಿಡುಗಡೆಗಾಗಿ ಹಾರೈಸುತ್ತಿದ್ದಾರೆ. ಇಂದು ದರ್ಶನ್ ಅವರ ಹುಟ್ಟುಹಬ್ಬದ ನಿಮಿತ್ತ ತನಿಷಾ ಕುಪ್ಪಂಡ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಪೂಜೆ, ಅನ್ನ ಸಂತರ್ಪಣೆ
ಪೂಜೆಯ ಬಳಿಕ, ತನಿಷಾ (Bigg Boss Tanisha Kuppanda) ಅವರು ದರ್ಶನ್ ಅವರ ಹೆಸರಿನಲ್ಲಿ ಅನ್ನಸಂತರ್ಪಣೆಯನ್ನೂ ಮಾಡುವ ಮೂಲಕ, ದರ್ಶನ್ ಅವರು ಆದಷ್ಟು ಬೇಗ ಜೈಲಿನಲ್ಲಿ ಬಿಡುಗಡೆಯಾಗಲಿ ಎಂದು ಆಶಿಸುತ್ತಿದ್ದಾರೆ.
ಉಗುರಿನಲ್ಲಿ ದರ್ಶನ್
ಇದೇ ವೇಳೆ ಕುತೂಹಲದ ಪೋಸ್ಟ್ ಒಂದನ್ನು ಅವರು ಶೇರ್ ಮಾಡಿದ್ದಾರೆ. ಅದರಲ್ಲಿ ಉಗುರಿನ ಮೇಲೆ ಅವರು ದರ್ಶನ್ ಎಂದು ಬರೆದಿರುವುದನ್ನು ಕಾಣಬಹುದು. ಆ ಬಳಿಕ ಅವರು ವಿಶೇಷವಾಗಿ ದರ್ಶನ್ ಅವರಿಗೆ ವಿಷ್ ಮಾಡಿದ್ದಾರೆ.
ದರ್ಶನ್ ಕುರಿತು ನಟಿ
ಈ ಹಿಂದೆ ದರ್ಶನ್ ಅವರ ಕುರಿತು ಮಾತನಾಡಿದ್ದ ನಟಿ ತನಿಷಾ, ಮಾಧ್ಯಮಗಳಲ್ಲಿ ಏನೇನೋ ಒಂದಿಷ್ಟು ನೋಡ್ತಾ ಇರ್ತೀವಿ, ನೋಡಿದ್ಮೇಲೆ ಹೌದಂತೆ, ಇರ್ಬಹುದಂತೆ, ಇಲ್ವಂತೆ ಅನ್ನೋ ವಿಚಾರಾನಾ ಅಂತೆ, ಕಂತೆನಲ್ಲಿ ನಾವು ಕೇಳ್ತಾ ಇರ್ತೀವಿ... ಅವ್ರೇನು ತೋರಿಸ್ತೀರ್ತಾರೋ ಅದನ್ನೆಲ್ಲಾ ನಾವು ನೋಡ್ತಾ ಇರ್ತೀವಿ.. ಕೆಲವೊಂದು ಸಾರಿ ಏನಾಗುತ್ತೆ ಅಂದ್ರೆ, ಸ್ವಲ್ಪ ಓವರ್ ಆಗಿ ತೋರಿಸ್ತಿದೀರ ಅನ್ಸಿಬಿಡುತ್ತೆ ಎಂದಿದ್ದರು.
ಜಾಸ್ತಿ ಹೈಲೈಟ್ ಆಯ್ತು
ಈ ಕೇಸಲ್ಲಿ, ಅವ್ರೆಲ್ಲೋ ಅಪರಾಧ ಮಾಡಿರ್ಬಹುದು ಅನ್ನೋದು ಸ್ವಲ್ಪ ಜಾಸ್ತಿ ಹೈಲೈಟ್ ಆಯ್ತು.. ಈ ವ್ಯಕ್ತಿ, ರೇಣುಕಾಸ್ವಾಮಿ ಮಾಡಿದ್ದು ತಪ್ಪು ಅನ್ನೋದನ್ನ ಯಾರೂ ಮಾತಾಡ್ಲಿಲ್ಲ ಅನ್ನೋದು ನನ್ನ ಒಂದು ಪರ್ಸನಲ್ ಫೀಲಿಂಗ್' ಎಂದು ನೋವು ತೋಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

