- Home
- Entertainment
- Sandalwood
- Sudharani Birthday: ಬಿಸ್ಕೆಟ್ ಜಾಹೀರಾತಲ್ಲಿ ನಟಿಸಿದ್ದ 3 ವರ್ಷದ ಪುಟಾಣಿ ನಟಿಯ ರೋಚಕ ಪಯಣ...
Sudharani Birthday: ಬಿಸ್ಕೆಟ್ ಜಾಹೀರಾತಲ್ಲಿ ನಟಿಸಿದ್ದ 3 ವರ್ಷದ ಪುಟಾಣಿ ನಟಿಯ ರೋಚಕ ಪಯಣ...
ಕೇವಲ ಮೂರು ವರ್ಷ ಇದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಇಂದಿಗೂ ಮನೆಮಾತಾಗಿರುವ, ತುಳಸಿ ಪಾತ್ರದ ಮೂಲಕ ಶ್ರೀಮಸ್ತು ಶುಭಮಸ್ತು ಸೀರಿಯಲ್ನಲ್ಲಿ ರಂಜಿಸ್ತಿರೋ ನಟಿ ಸುಧಾರಾಣಿಯ ರೋಚಕ ಪಯಣ ಇಲ್ಲಿದೆ...

ಶ್ರೀಮಸ್ತು ಶುಭಮಸ್ತು ಸೀರಿಯಲ್ ಮೂಲಕ ತುಳಸಿ
ಶ್ರೀಮಸ್ತು ಶುಭಮಸ್ತು ಸೀರಿಯಲ್ ಮೂಲಕ ತುಳಸಿ ಅಮ್ಮನಾಗಿ ಕಾಣಿಸಿಕೊಂಡು ದಿನನಿತ್ಯವೂ ನಿಮ್ಮ ಮನೆ ಬಾಗಿಲಿಗೆ ಬರ್ತಿರೋ ಎವರ್ಗ್ರೀನ್ ತಾರೆ ಸುಧಾರಾಣಿಗೆ ಇಂದು (ಆಗಸ್ಟ್ 14) ಹುಟ್ಟುಹಬ್ಬದ ಸಂಭ್ರಮ. 1973ರಲ್ಲಿ ಹುಟ್ಟಿರೋ ಸುಧಾರಾಣಿಯವರಿಗೆ ಇದೀಗ 52ರ ಹರೆಯ. 2 ವರ್ಷದ ಪುಟಾಣಿಯಾಗಿ ಬಿಸ್ಕೆಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿಯವರು, ಹಾಗೆ ನೋಡಿದ್ರೆ ಬಣ್ಣದ ಲೋಕಕ್ಕೆ ಕಾಲಿಟ್ಟು 50 ವರ್ಷಗಳೇ ಸಂದಿವೆ. ಇಂದು ಹುಟ್ಟುಹಬ್ಬದ ನಿಮಿತ್ತ ಜೀ ಕನ್ನಡ ವಾಹಿನಿ ಅವರ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ.
ಬಾಲಕಿಯಾಗಿದ್ದಾಗಲೇ ನಟನೆ
ಇನ್ನೂ 3 ವರ್ಷ ಆಗುವ ಮುಂಚೆಯೇ, ಬಾರಿಗೆ ಕ್ಯಾಮೆರಾ ಎದುರಿಸಿದ್ದು ಕ್ವಾಲಿಟಿ ಬಿಸ್ಕೆಟ್ ಜಾಹೀರಾತಿಗೆ! ಮುಂದೆ ಸೋಪ್, ಬ್ರೆಡ್, ಕುಕ್ಕಿಂಗ್ ಆಯಿಲ್ ಸೇರಿದಂತೆ ಏಳೆಂಟು ಜಾಹೀರಾತುಗಳಿಗೆ ಮಾಡೆಲ್ ಆಗಿದ್ದರು ಸುಧಾರಾಣಿ. ಸುಮಾರು ಹತ್ತು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 'ಕಿಲಾಡಿ ಕಿಟ್ಟು' (1978), 'ಕುಳ್ಳ ಕುಳ್ಳಿ', 'ರಂಗನಾಯಕಿ', 'ಅನುಪಮ', 'ಭಾಗ್ಯವಂತ', 'ಬಾಡದ ಹೂ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಆನಂದ್ ಚಿತ್ರದ ಮೂಲಕ ನಾಯಕಿ
ಕೊನೆಗೆ ಪಾರ್ವತಮ್ಮ ಅವರ ಕಣ್ಣಿಗೆ ಬಿದ್ದು, ಶಿವರಾಜ್‌ಕುಮಾರ್ ಜೊತೆ ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಆಗ ಕುತೂಹಲ ಎಂದರೆ ಸುಧಾರಾಣಿಗೆ ಇನ್ನೂ 13 ವರ್ಷ ವಯಸ್ಸು. 52ನೇ ವಯಸ್ಸಿನಲ್ಲಿಯೂ ನಟಿ ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳ ಮೂಲಕ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ.
ಕ್ಯಾಮೆರಾ ಅನುಭವ ಹೇಳಿದ ಸುಧಾರಾಣಿ
ಈ ಹಿಂದೆ ಸುಧಾರಾಣಿ ಅವರು ತಮ್ಮ ಕ್ಯಾಮೆರಾ ಅನುಭವವನ್ನು ತೆರೆದಿಟ್ಟಿದ್ದರು. 'ಕ್ಯಾಮೆರಾಗಳು ಸುತ್ತ ಬೆಳೆದ ಕಾರಣ ಅದನ್ನು ಎದುರಿಸಲು ನನಗೆ ಏನೋ ಹೊಸತು ಅನಿಸಲಿಲ್ಲ. ನನ್ನ ಪಕ್ಕ ಕಲ್ಲಿನಂತೆ ನಿಂತಿದು ಧೈರ್ಯ ಕೊಟ್ಟಿದ್ದು ನನ್ನ ತಾಯಿ. ಇಂದು ನಾನು ಏನೇ ಆಗಿದ್ದರು ಅದು ನನ್ನ ತಾಯಿಗೆ ಸೇರಬೇಕಿರುವ ಕ್ರೆಡಿಟ್. ಪುಟ್ಟ ಮಗುವಾಗಿದ್ದಾಗ ಕ್ಯಾಮೆರಾ ಎದುರಿಸಲು ಶುರು ಮಾಡಿದೆ ಅಲ್ಲಿಂದ ಅವಕಾಶಗಳು ಹುಡುಕಿ ಬಂದಿತ್ತು. ಅಲ್ಲಿಂದ ತಾಯಿ ಏನೇ ಹೇಳಿದ್ದರೂ ಕೇಳಬೇಕು ಅನ್ನೋ ಆಲೋಚನೆ ಶುರುವಾಗಿತ್ತು, ಇದು ಭಯದಿಂದ ಅಲ್ಲ ನಂಬಿಕೆಯಿಂದ ಎಂದಿದ್ದರುಉ.
ಸಿನಿಮಾ ಕುರಿತು ನಟಿ
'ನಾನು ಆಯ್ಕೆ ಮಾಡಿಕೊಂಡಿರುವ ಸಿನಿಮಾಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕೆಲವೊಂದು ಸಿನಿಮಾಗಳನ್ನು ಸ್ನೇಹಕ್ಕಾಗಿ ಒಪ್ಪಿಕೊಂಡು ಮಾಡಿರುವೆ. ಹಲವು ಕಥೆಗಳನ್ನು ಪಾತ್ರದಿಂದ ರಿಜೆಕ್ಟ್ ಮಾಡಿದ್ದೀನಿ. ಕಲಾವಿದರಾಗಿ ನಮ್ಮ ಪಾತ್ರ ಟ್ರಾಸಿಷನ್ ಆಗುವುದು ಗೊತ್ತಾಗುತ್ತದೆ ಆದರೆ ನನ್ನ ಪಾತ್ರಗಳ ಬದಲಾವಣೆ ಆಗಿದ್ದು ಗೊತ್ತೇ ಆಗಿಲ್ಲ. ಕೆಲವೊಂದು ಸಮಯಲ್ಲಿ ನಾನೇ ಪ್ರಮುಖ ಪಾತ್ರಧಾರಿ ಎಂದು ಹೇಳಿ ಕಥೆಯನ್ನು ಬದಲಾಯಿಸಿದ್ದು ಇದೆ, ಆಗ ನಾನು ಪ್ರಶ್ನೆಗಳು ಮೂಡುತ್ತಿದ್ದವು ಆದರೆ ತುಂಬಾ ತಡವಾಗಿರುತ್ತಿತ್ತು. ಅಲ್ಲಿಂದ ಅರ್ಥವಾಗಿದ್ದು ಸ್ನೇಹಕ್ಕಾಗಿ ಸಿನಿಮಾಗಳನ್ನು ಸಹಿ ಮಾಡಬಾರದು. ಅದು ನನಗೆ ಆಗುವ ಮೋಸ ಮಾತ್ರವಲ್ಲ ದೊಡ್ಡ ಪಾಠವಾಗಿ ಉಳಿದು ಬಿಡುತ್ತದೆ' ಎಂದಿದ್ದರು.
ಸುಧಾರಾಣಿ ನೋವಿನ ಕಥೆ...
ಇನ್ನು ನಟಿ ಜೀವನದಲ್ಲಿ ಸಾಕಷ್ಟು ನೋವನ್ನುಂಡವರು. 1999ರಲ್ಲಿ ಮದುವೆಯಾಗುವ ಮೂಲಕ ಬಣ್ಣದ ಬದುಕಿನಿಂದ ಸುಧಾರಾಣಿಯವರು ಮೊದಲ ಬಾರಿಗೆ ದೂರವಾದರು. ಆದರೆ, ಮದುವೆ ಅವರ ಪಾಲಿಗೆ ವರವಾಗುವ ಬದಲು ಶಾಫವಾಯಿತು. ಅಮೆರಿಕಾದಲ್ಲಿ ಅನಸ್ತೇಷಿಯಾ ಸ್ಪೆಷಲಿಸ್ಟ್ ಆಗಿದ್ದ ಗಂಡ ಡಾ ಸಂಜಯ್, ಯಾವುದೋ ರಹಸ್ಯ ಕೆಮಿಕಲ್ಸ್ ನೀಡಿ ಸುಧಾರಾಣಿಯವರನ್ನು ಮುಗಿಸಲು ಕೂಡ ಪ್ಲಾನ್ ಮಾಡಿದ್ದರಂತೆ. ಜತೆಗೆ, ಮದುವೆಯಾದ ಸ್ವಲ್ಪ ದಿನಗಳ ಬಳಿಕ ಸುಧಾರಾಣಿಯವರಿಗೆ ಇನ್ನಿಲ್ಲದ ಟಾರ್ಚರ್ ಕೊಡಲು ಶುರು ಮಾಡಿದ್ದರಂತೆ.
ಸುಧಾರಾಣಿ ನೋವಿನ ಕಥೆ...
ಒಟ್ಟಿನಲ್ಲಿ, ಡಾ ಸಂಜಯ್ ಮೂಲಕ ಅಮೇರಿಕಾದಲ್ಲಿ ಸುಧಾರಾಣಿ ವೈವಾಹಿಕ ಬದುಕು ನರಕವಾಯಿತು. ಗಂಡನಿಂದ ತಪ್ಪಿಸಿಕೊಂಡು ಬಂದು ಗೆಳತಿ ಮನೆಯಲ್ಲಿ ರಹಸ್ಯವಾಗಿ ಆಶ್ರಯ ಪಡೆದು, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಷ್ ಸಹಾಯದಿಂದ ಅಮೆರಿಕಾದಿಂದ ತಪ್ಪಿಸಿಕೊಂಡು ಬಂದು ಸುಧಾರಾಣಿಯವರು ಬೆಂಗಳೂರಿನ ತವರುಮನೆ ಸೇರಿಕೊಂಡರು ಎನ್ನಲಾಗಿದೆ. ಅಂದು ಸುಧಾರಾಣಿಯವರು ಖಿನ್ನತೆಗೆ ಕೂಡ ಜಾರಿದ್ದರಂತೆ.
ಗೋವರ್ಧನ್ ಜತೆ ಮದುವೆ
ಬಳಿಕ, 2001ರಲ್ಲಿ ಕುಟುಂಬದ ಹತ್ತಿರದ ಸಂಬಂಧಿ ಗೋವರ್ಧನ್ ಜತೆ ಸುಧಾರಾಣಿಯವರ ಮದುವೆಯಾಯಿತು. ಅವರಿಗೆ ಸ್ವಾತಿ (ನಿಧಿ) ಹೆಸರಿನ ಮಗಳೊಬ್ಬಳಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಮನೆಯವರು ಅಳೆದುತೂಗಿ ಮಾಡಿದ ಮದುವೆ ಸುಧಾರಾಣಿಗೆ ಮುಳುವಾಯಿತು. ಅದೇ ಮನೆಯವರು ಮಾಡಿದ ಇನ್ನೊಂದು ಮದುವೆ ವರವಾಯಿತು. ಇಂದು ಸುಧಾರಾಣಿ ಗಂಡ ಗೋವರ್ಧನ್ ಹಾಗೂ ಮಗಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.
ಸುಧಾರಾಣಿಯ ವೈಯಕ್ತಿಕ ಬದುಕು
ಬೇರೆ ಕೆಲವು ನಟಿಯರಂತೆ, ಸುಧಾರಾಣಿಗೆ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾಗ ಅಥವಾ ಬಳಿಕ ಕೂಡ ಯಾವುದೇ ವಾದ-ವಿವಾದಗಳು ಅಂಟಿಕೊಳ್ಳಲಿಲ್ಲ. ಯಾರನ್ನೋ ಲವ್ ಮಾಡಿ ಓಡಿ ಹೋಗಲಿಲ್ಲ, ಲವ್ ಮಾಡಿ ಮದುವೆ ಕೂಡ ಆಗಲಿಲ್ಲ. ಆದರೂ ವಿಧಿ ಲಿಖಿತ ಎಂಬಂತೆ ಮೊದಲ ಗಂಡನ ಜತೆಯ ವೈವಾಹಿಕ ಜೀವನ ಸುಧಾರಾಣಿಯವರ ಪಾಲಿಗೆ ನರಕವಾಯಿತು. ಇಂದು ಸುಧಾರಾಣಿ ಪೋಷಕ ನಟಿಯಾಗಿ ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ.
ಬಾಲಕಿಯಾಗಿ ಸುಧಾರಾಣಿ
ಅಂದಹಾಗೆ, ಈ ಫೋಟೋ 'ಚೈಲ್ಡ್ ಈಸ್ ಹಿಯರ್' ಕಿರುಚಿತ್ರದ್ದು. ಬೆಂಗಳೂರು ಮತ್ತಿಕೆರೆಯಲ್ಲಿ ಶಾಲಾ ಮಗುವೊಂದು ಜನಜಂಗುಳಿಯಲ್ಲಿ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತು ಪಟ್ಟಿರುತ್ತದೆ. ಈ ಘಟನೆಯನ್ನು ಆಧರಿಸಿ 'ಆನ್ವೇಷಕರು' ತಂಡದಿಂದ ಈ ಕಿರುಚಿತ್ರ ತಯಾರಾಗಿತ್ತು. ಸುಧಾರಾಣಿ ಅವರ ಹಿರಿಯ ಸಹೋದರ ಅರುಣ್ ಇದನ್ನು ನಿರ್ದೇಶಿಸಿದ್ದರು.