- Home
- Entertainment
- Sandalwood
- ಮದ್ವೆ ನಂತ್ರ ಗಣೇಶ್ ಫ್ಯಾನ್ಸ್ ರಾತ್ರಿಯೆಲ್ಲಾ ಏನೇನೋ ಮಾಡಿದ್ರು, ಹೇಳೋಕು ಭಯ ಆಗತ್ತೆ ಎಂದ ಪತ್ನಿ ಶಿಲ್ಪಾ
ಮದ್ವೆ ನಂತ್ರ ಗಣೇಶ್ ಫ್ಯಾನ್ಸ್ ರಾತ್ರಿಯೆಲ್ಲಾ ಏನೇನೋ ಮಾಡಿದ್ರು, ಹೇಳೋಕು ಭಯ ಆಗತ್ತೆ ಎಂದ ಪತ್ನಿ ಶಿಲ್ಪಾ
ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್, ತಮ್ಮ ಮದುವೆಯಾದ ಹೊಸತರಲ್ಲಿ 'ಮುಂಗಾರು ಮಳೆ' ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳಿಂದಾದ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಾತ್ರಿ ವೇಳೆ ಅಭಿಮಾನಿಗಳು ಮನೆಯ ಬಾಗಿಲು ಬಡಿಯುತ್ತಿದ್ದಂತಹ ಭಯಾನಕ ಘಟನೆಗಳನ್ನು ನೆನೆದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್
ಮುಂಗಾರು ಮಳೆ ರಿಲೀಸ್ ಆದ್ಮೇಲೆ ಗಣೇಶ್ ಅವರು ಗೋಲ್ಡನ್ ಸ್ಟಾರ್ ಆಗಿಬಿಟ್ಟರು. ರಾತ್ರೋರಾತ್ರಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಬಿಟ್ಟಿದ್ದರು. ಅದರಲ್ಲಿಯೂ ಬಹುತೇಕ ಹುಡುಗಿಯರಿಗಂತೂ ಗಣೇಶ್ ಹುಚ್ಚು ಹಿಡಿಸಿಬಿಟ್ಟಿದ್ದರು. ಅವರ ನೋಟಕ್ಕೆ ಫಿದಾ ಆಗಿಬಿಟ್ಟಿದ್ದರು. ಅಷ್ಟಕ್ಕೂ ಅಭಿಮಾನಿಗಳು ಎಂದರೆ ಸುಮ್ಮನೇನೂ ಅಲ್ಲ, ಒಂದು ಸಾರಿ ಯಾರಾದರೂ ಫೇಮಸ್ ಆಗಿಬಿಟ್ಟರು ಎಂದರೆ, ಅವರ ಅಭಿಮಾನಿಗಳ ಹುಚ್ಚಾಟಕ್ಕೂ ಮಿತಿ ಇರುವುದಿಲ್ಲ. ಹಾಗೆಲ್ಲಾ ಘಟನೆಗಳು ಸಂಭವಿಸುತ್ತವೆ.
ಹಿನ್ನೆಲೆ ಗಾಯಕಿಯಾಗಿ ಎಂಟ್ರಿ
ಇದೀಗ ಅಂಥದ್ದೇ ಶಾಕಿಂಗ್ ಘಟನೆಗಳ ಬಗ್ಗೆ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ರಿವೀಲ್ ಮಾಡಿದ್ದಾರೆ. ಸದ್ಯ ಶಿಲ್ಪಾ ಅವರು, ನಿರ್ಮಾಪಕಿಯಾಗಿದ್ದು, ಸದ್ಯ ʻಪಿಚ್ಚರ್ʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಿನ್ನೆಲೆ ಗಾಯಕಿಯಾಗಿ ಹೊಸ ಪಯಣಕ್ಕೆ ಕಾಲಿಟ್ಟಿದ್ದಾರೆ. ʻಪಿಚ್ಚರ್ʼ ಎಂಬ ಕನ್ನಡ ಮತ್ತು ತುಳು ದ್ವಿಭಾಷಾ ಸಿನಿಮಾದ ʻಗೋಕುಲದ ರಾಧೆ..ʼ ಹಾಡಿಗೆ ದನಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ.
2008ರಲ್ಲಿ ಮದುವೆ
ಗಣೇಶ್ ಮತ್ತು ಶಿಲ್ಪಾ ಅವರ ಮದುವೆಯಾದದ್ದು 2008ರಲ್ಲಿ. ಆಗ ತಾನೇ ಮುಂಗಾರು ಮಳೆಯ ಕ್ರೇಜ್ ಇನ್ನೂ ನಿಂತಿರಲಿಲ್ಲ. ಅದರಲ್ಲಿಯೂ ಅವರ ಒಂದು ನೋಟಕ್ಕಾಗಿ ಹಲವು ಯುವತಿಯರು ಜೀವ ಬಿಡುವುದಕ್ಕೂ ರೆಡಿಯಾಗಿದ್ದರು. ಅಂಥ ಸಂದರ್ಭದಲ್ಲಿ ಗಣೇಶ್ ಮದುವೆಯಾದಾಗ, ಹಲವರ ಹಾರ್ಟ್ ಬ್ರೇಕ್ ಆಗಿ ಹೋಗಿತ್ತು.
ಹೇಳಿಕೊಳ್ಳದ ಘಟನೆಗಳೂ ನಡೆದಿವೆ
ಈ ಬಗ್ಗೆ ಹೇಳಿರುವ ಶಿಲ್ಪಾ ಅವರು, ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳಲೂ ಆಗುವುದಿಲ್ಲ. ಮದ್ವೆಯಾದ ಮೇಲೆ ರಾತ್ರಿಯೆಲ್ಲಾ ಬಂದು ಬಾಗಿಲು ಬಡಿಯುತ್ತಿದ್ದರು. ಹಲವು ಶಾಕಿಂಗ್ ಎನ್ನುವಂಥ ಘಟನೆಗಳು ಆಗಿವೆ. ಅದನ್ನೆಲ್ಲಾ ಇಲ್ಲಿ ಹೇಳಿಕೊಳ್ಳಲು ಆಗದಷ್ಟು ಶಾಕಿಂಗ್ ಆಗಿವೆ ಎಂದಿದ್ದಾರೆ.
ಶಾಕ್ ಆಗಿಬಿಟ್ಟೆ
ಸಾಧಾರಣವಾಗಿ ಸಿನಿಮಾ ತಾರೆಯರಿಗೆ ಫ್ಯಾನ್ಸ್ ಇರ್ತಾರೆ ಎನ್ನೋದು ಗೊತ್ತಿತ್ತು. ಆದರೆ ಗಣೇಶ್ ಅವರ ಅಭಿಮಾನಿಗಳ ವರ್ತನೆ ನೋಡಿ ಶಾಕ್ ಆಗಿಬಿಟ್ಟಿದ್ದೆ ಎಂದಿದ್ದಾರೆ.
ಭಯ ಆಗೋಯ್ತು
ಮೊದಲಿಗೆ ಖುಷಿಯಾಗಿತ್ತು. ಆದರೆ ಆಮೇಲೆ ಆಗಿದ್ದೇ ಬೇರೆ, ಭಯ ಆಗೋಯ್ತು ಎಂದು ಶಿಲ್ಪಾ ಆ ದಿನಗಳನ್ನು ನೆನೆದರು. ಮೊದಮೊದಲು ನನಗೆ ಏನು ಆಗ್ತಿದೆ ಎಂದೇ ಅರ್ಥ ಆಗ್ತಿರ್ಲಿಲ್ಲ. ಅಷ್ಟೆಲ್ಲಾ ಘಟನೆಗಳು ನಡೆದುಬಿಟ್ಟಿವೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

