- Home
- Entertainment
- Sandalwood
- ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ? ಅಮ್ಮ ಶಿಲ್ಪಾ ಹೇಳಿದ್ದೇನು
ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ? ಅಮ್ಮ ಶಿಲ್ಪಾ ಹೇಳಿದ್ದೇನು
ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ ಚಾರಿತ್ರ್ಯ ಅವರ ಸಿನಿಮಾ ಪ್ರವೇಶದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿದ ಅವರ ತಾಯಿ ಶಿಲ್ಪಾ ಗಣೇಶ್, ಚಾರಿತ್ರ್ಯಾಗೆ ನಟಿಸುವ ಎಲ್ಲಾ ಪ್ರತಿಭೆ ಇದ್ದು, 'ಚಮಕ್' ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾಳೆ,

ಗೋಲ್ಡನ್ ಸ್ಟಾರ್ ಪುತ್ರಿ
ಗೋಲ್ಡರ್ ಸ್ಟಾರ್ ಎಂದೇ ಫೇಮಸ್ ಆಗಿರೋ ನಟ ಗಣೇಶ್ ಮತ್ತು ಶಿಲ್ಪಾ ದಂಪತಿಗೆ ಚಾರಿತ್ರ್ಯ ಎನ್ನುವ ಮಗಳಿದ್ದು, ಈಚೆಗೆ 17ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, 18ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಯರ ಮಕ್ಕಳು ಸಿನಿಮಾಕ್ಕೆ ಬರುತ್ತಾರೆ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಹೊಸಬರಿಗೆ ಹೋಲಿಸಿದರೆ ಸ್ಟಾರ್ ನಟ-ನಟಿಯರ ಮಕ್ಕಳಿಗೆ ಇದು ಸುಲಭದ ದಾರಿಯೂ ಹೌದು.
ಪುತ್ರಿ ಬರ್‍ತಾರಾ?
ಅದೇ ರೀತಿ ಚಾರಿತ್ರ್ಯ ಅವರೂ ಸಿನಿಮಾಕ್ಕೆ ಬರುತ್ತಾರೆಯೇ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದಕ್ಕೆ ಖುದ್ದು ಇದೀಗ ಗಣೇಶ್ ಅವರ ಪತ್ನಿ, ನಿರ್ಮಾಪಕಿಯೂ ಆಗಿರುವ ಶಿಲ್ಪಾ ಮಾತನಾಡಿದ್ದಾರೆ.
ಬಾಲನಟಿಯಾಗಿ ಎಂಟ್ರಿ
ಅಂದಹಾಗೆ ಚಾರಿತ್ರ್ಯ ಗಣೇಶ್ ಇದಾಗಲೇ ಸ್ಯಾಂಡಲ್ವುಡ್ಗೂ ಎಂಟ್ರಿಕೊಟ್ಟಿದ್ದು, 'ಚಮಕ್' ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದಾರೆ. ಆದರೆ ನಾಯಕಿಯಾಗಿ ಅವರು ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವ ಕಾತರ ಇದ್ದು, ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಶಿಲ್ಪಾ ಈ ಬಗ್ಗೆ ಮಾತನಾಡಿದ್ದಾರೆ.
ಡಿಸೈಡ್ ಮಾಡಲಿಲ್ಲ
ಚಾರಿತ್ರ್ಯ ಇನ್ನೂ ಈ ಬಗ್ಗೆ ಡಿಸೈಡ್ ಮಾಡಲಿಲ್ಲ. ಅವಳು ಬಂದರೂ ಬರಬಹುದು. ನಾವು ಅವಳಿಗೆ ಫೋರ್ಸ್ ಏನೂ ಮಾಡುವುದಿಲ್ಲ. ಅವಳಿಗೆ ಏನು ಆಯ್ಕೆ ಮಾಡಿಕೊಳ್ಳಬೇಕು ಎನ್ನಿಸುತ್ತದೆಯೋ ಮಾಡಿಕೊಳ್ಳಲಿ. ಆದರೆ ಆಕೆ ಸಿನಿಮಾಕ್ಕೆ ಬಂದರೂ ಅಚ್ಚರಿ ಏನಿಲ್ಲ ಎಂದಿದ್ದಾರೆ.
ಎಲ್ಲಾ ರೀತಿಯ ಟ್ಯಾಲೆಂಟ್ ಇದೆ
ಅವಳಿಗೆ ಸಿನಿಮಾಕ್ಕೆ ಬರಲು ಎಲ್ಲಾ ರೀತಿಯ ಟ್ಯಾಲೆಂಟ್ ಇದೆ. ಆದರೆ ಆಕೆಯ ಅಪ್ಪನಿಗೆ ದೊಡ್ಡ ಹೆಸರು ಇರುವ ಹಿನ್ನೆಲೆಯಲ್ಲಿ, ಅದನ್ನು ಉಳಿಸಿಕೊಂಡು ಹೋಗಲು ಸಿನಿಮಾಕ್ಕೆ ಬರುವ ಮೊದಲು ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದನ್ನು ಅವಳಿಗೆ ನಾವು ಹೇಳಬೇಕೆಂದೇನೂ ಇಲ್ಲ. ಅವಳು ಅದನ್ನೆಲ್ಲಾ ಚೆನ್ನಾಗಿ ನಿಭಾಯಿಸುತ್ತಾಳೆ ಎನ್ನುವುದು ಗೊತ್ತಿದೆ ಎಂದಿದ್ದಾರೆ.
ಮಗ ವಿಹಾನ್ ಕುರಿತು
ಅಷ್ಟಕ್ಕೂ ಅವಳಿಗಾಗಲೀ ಅಥವಾ ಮಗ ವಿಹಾನ್ಗಾಗಲೀ ಸಿನಿಮಾ ಕ್ಷೇತ್ರ ಆಯ್ದುಕೊಳ್ಳುವಂತೆ ಅಥವಾ ಇನ್ನೇನೋ ಆಯ್ಕೆ ಮಾಡಿಕೊಳ್ಳುವಂತೆ ನಾವು ಫೋರ್ಸ್ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಷಯ ಎಂದಿದ್ದಾರೆ ಶಿಲ್ಪ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

