- Home
- Entertainment
- Sandalwood
- Ayogya 2 Movie: ಎಂಟು ವರ್ಷದ ಬಳಿಕ ಹಾಡು ರಿಲೀಸ್ ಮಾಡಿ, ತೆರೆ ಕಾಣಲು ಸಜ್ಜಾದ ಅಯೋಗ್ಯ 2 ಸಿನಿಮಾ
Ayogya 2 Movie: ಎಂಟು ವರ್ಷದ ಬಳಿಕ ಹಾಡು ರಿಲೀಸ್ ಮಾಡಿ, ತೆರೆ ಕಾಣಲು ಸಜ್ಜಾದ ಅಯೋಗ್ಯ 2 ಸಿನಿಮಾ
Ayogya 2 Movie: ಸತೀಶ್ ನಿನಾಸಂ, ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ನಟ ಸತೀಶ್ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ. ರಚಿತಾ, ಸತೀಶ್ ಇಬ್ಬರು ಒಟ್ಟಿಗೆ ಮತ್ತೆ ‘ಅಯೋಗ್ಯ 2’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಅಯೋಗ್ಯ 2 ಸಿನಿಮಾ ರಿಲೀಸ್‌ಗೆ ರೆಡಿ
ಅಯೋಗ್ಯ 2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಚಿತ್ರತಂಡ ಮೊದಲಿಗೆ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಶುರು ಮಾಡಿದೆ.
ಇಂದು ಅಯೋಗ್ಯ 2 ಸಿನಿಮಾದ ಪುಟ್ ಲಕ್ಷ್ಮೀ ಹಾಡನ್ನು ವಿಶೇಷವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಿಡುಗಡೆ ಮಾಡಿದ್ರು...ಹಾಡು ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್ ಜನ್ಯ ಈ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಹಾಡೋಂದನ್ನ ಗೆಸ್ಟ್ ಆಗಿ ಬಿಡುಗಡೆ ಮಾಡ್ತಿರೋದು ಎಂದರು..ಹಾಡು ಹಾಡಿರೋ ಪೃಥ್ವಿ ಭಟ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂಟು ವರ್ಷದ ಹಿಂದೆ ಅಯೋಗ್ಯ ಸಿನಿಮಾಗೆ ಹಾಡು ಕಂಪೋಸ್ ಮಾಡುವಾಗ ಹೇಗಿತ್ತು ಅನ್ನೋ ಹಳೆಯ ದಿನಗಳನ್ನ ನೆನಪು ಮಾಡಿಕೊಂಡರು.
ದೊಡ್ಡ ತಾರಾ ಬಳಗ
ಇನ್ನು ಚಿತ್ರಕ್ಕೆ ಸಂಬಾಷಣೆ ಬರೆದಿರೋ ಮಾಸ್ತಿ ಮಾತನಾಡಿ ಅಯೋಗ್ಯ 2 ಸಿನಿಮಾದ ಡೈಲಾಗ್ಸ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಈ ತಂಡದ ಜೊತೆ ಕೆಲಸ ಮಾಡೋದೇ ಖುಷಿ ಎಂದರು. ಸಿನಿಮಾದಲ್ಲಿ ಅಭಿನಯಿಸಿರೋ ಶಿವರಾಜ್ ಕೆಆರ್ ಪೇಟೆ , ಮಂಜು ಪಾವಗಡ ಹಾಗೂ ಕಿರಣ್ ನಾಯ್ಕ್ ಅಯೋಗ್ಯ 2 ಸಿನಿಮಾ ಅವಕಾಶ ಸಿಕ್ಕಿದ್ದು ಖುಷಿ ಇದೇ ಹೆಚ್ಚು ಕಲಾವಿದರು ಇರೋದ್ರಿಂದ ಎಂಟರ್‌ಟೇನ್‌ಮೆಂಟ್ ಕೂಡ ಹೆಚ್ಚಾಗಿರುತ್ತೆ ಅಂದ್ರು...
ನಿರ್ದೇಶಕ ಮಹೇಶ್ ಏನಂದ್ರು?
ಇನ್ನು ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ ಇಡೀ ತಂಡದ ಸಹಕಾರದ ಬಗ್ಗೆ ಮಾತನಾಡಿದ್ರು. ಎಂಟು ವರ್ಷದ ನಂತರ ಬರ್ತಿದ್ದೀವಿ ಈ ಹಾಡು ನಿಮ್ಮೆಲ್ಲರಿಗೂ ಖುಷಿ ಕೊಡುತ್ತೆ.ಶೂಟ್ ಸಮಯದಲ್ಲಿ ನಡೆದ ಘಟನೆಗಳನ್ನ ಮೆಲುಕು ಹಾಕಿದ್ರು.. ಅಯೋಗ್ಯ ಸಿನಿಮಾಗಿಂತಲೂ ಅಯೋಗ್ಯ 2 ಸಿನಿಮಾದಲ್ಲಿ ಹೆಚ್ಚು ಎಂಟರ್‌ಟೇನ್‌ಮೆಂಟ್ ಇದೆ ಎಂದರು.
ಆನಂದ್ ಆಡಿಯೋ ಹಕ್ಕು ಖರೀದಿ
ನಟ ಸತೀಶ್ ನಿನಾಸಂ ಹಾಗೂ ನಟಿ ರಚಿತಾ ರಾಮ್ ಇಬ್ಬರು ಒಟ್ಟಿಗೆ ವೇದಿಕೆಗೆ ಬಂದು ಹಾಡನ್ನ ಬರೆದಿರುವ ಚೇತನ್ ಕುಮಾರ್, ಹಾಡಿರೋ ಸಿದ್ ಶ್ರೀರಾಮ್ ಪೃಥ್ವಿ ಭಟ್ ಅವರಿಗೆ ಥ್ಯಾಂಕ್ಸ್ ಹೇಳಿದ್ರು. ಜೊತೆಯಲ್ಲಿ ನಟಿಸಿದ್ದಕ್ಕಾಗಿ ಇಬ್ಬರು ಪರಸ್ಪರ ಧನ್ಯವಾದ ತಿಳಿಸಿದ್ರು . ಅಯೋಗ್ಯ 2 ಸಿನಿಮಾವನ್ನ ಮುನೇಗೌಡರು ನಿರ್ಮಾಣ ಮಾಡುತ್ತಿದ್ದು ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕನ್ನು ರೂ.2 ಕೋಟಿ ಕೊಟ್ಟು ಆನಂದ್ ಆಡಿಯೋ ಖರೀದಿಸಿದೆ .
ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಸಿನಿಮಾದ ಪ್ರಚಾರ ಕೆಲಸ ಶುರುವಾಗಿದ್ದು ಆಗಸ್ಟ್ 14 ರಂದು ಸಿನಿಮಾ ಬಿಡುಗಡೆ ಆಗಲಿದೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

