ಸಿ.ಟಿ. ರವಿ ಕೇಸ್: ನಿಮ್ಮದು ಅಯೋಗ್ಯ ಸರ್ಕಾರ, ರಾಜೀನಾಮೆ ನೀಡಿ, ಗೋವಿಂದ ಕಾರಜೋಳ ಕಿಡಿ
ತಪ್ಪು ಮಾತಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಿ.ಟಿ. ರವಿ ವಿರುದ್ಧದ ಆರೋಪ ಸಾಬೀತಾದರೆ ಕ್ರಮ ಆಗಲಿ ಎಂದು ತಿಳಿಸಿದ ಸಂಸದ ಗೋವಿಂದ ಕಾರಜೋಳ
ಚಿತ್ರದುರ್ಗ(ಡಿ.25): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನ ಬಂಧಿಸಿ ಠಾಣೆಯಲ್ಲಿಡಬಹದಿತ್ತು, ಕೋರ್ಟ್‌ಗೆ ಹಾಜರು ಪಡಿಸಬಹುದಿತ್ತು. ಠಾಣೆಯಲ್ಲಿ ರಕ್ಷಣೆ ನೀಡಲಾಗದೆಂದರೆ ಏನು ಅರ್ಥ. ಪೊಲೀಸ್ ಅಧೀನದಲ್ಲಿದ್ದ ಶಾಸಕನ ಕೊಲೆ ಆಗುತ್ತದೆಯೇ?. ನಿಮ್ಮ ಸರ್ಕಾರ ಅಷ್ಟೊಂದು ಹೇಡಿ ಆಗಿದೆಯೇ?. ಹಾಗಿದ್ದರೆ ನಿಮ್ಮ ಸರ್ಕಾರ ಅಯೋಗ್ಯವಿದೆ, ರಾಜೀನಾಮೆ ನೀಡಿ ಹೋಗಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ. ರವಿ ರಕ್ಷಣೆ ದೃಷ್ಟಿಯಿಂದ ಬಂಧಿಸಿ ರಾತ್ರಿ ಅಲೆದಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಅವರು, ತಪ್ಪು ಮಾತಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಿ.ಟಿ. ರವಿ ವಿರುದ್ಧದ ಆರೋಪ ಸಾಬೀತಾದರೆ ಕ್ರಮ ಆಗಲಿ ಎಂದು ತಿಳಿಸಿದ್ದಾರೆ.
ಹೆಬ್ಬಾಳ್ಕರ್ ಆಣೆ ಪ್ರಮಾಣದ ಸವಾಲು: ಸವದತ್ತಿ ಯಲ್ಲಮನ ಬಳಿ ಹರಕೆ ಹೊತ್ತಿದ್ದೇನೆ, ಸಿ.ಟಿ ರವಿ
ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ ಏಕೆ ಜಾಗ ಕೊಡಲಿಲ್ಲ. ದೆಹಲಿಯ ರಾಜಘಾಟ್ ನಲ್ಲಿ ಜಾಗ ಏಕೆ ಕೊಡಲಿಲ್ಲ. ನೆಹರು ಮನೆತನಕ್ಕೆ ನೂರಾರು ಎಕರೆಯಿಟ್ಟುಕೊಂಡಿದ್ದೀರಿ. ನಿಮ್ಮ ಪಿತ್ರಾರ್ಜಿತ ಆಸ್ತಿ ಎಂದು ನೀವು ಜಾಗವಿಟ್ಟುಕೊಂಡಿದ್ದೀರಿ. ಗಾಂಧೀಜಿ ಸ್ಮಾರಕ ಪಕ್ಕದಲ್ಲೇ ಅಂಬೇಡ್ಕರ್ ಸಮಾಧಿ ಮಾಡಲಿಲ್ಲ. ದೇಶ, ವಿದೇಶದ ಜನ ಬಂದು ದರ್ಶನ ಮಾಡುತ್ತಿದ್ದರು. ದುರುದ್ದೇಶದಿಂದ ಕಾಂಗ್ರೆಸ್‌ನವರು ಅಂಬೇಡ್ಕರ್ ಸಮಾಧಿಗೆ ಜಾಗ ಕೊಡಲಿಲ್ಲ. ಬಾಬಾಸಾಹೇಬರ ಗದ್ದುಗೆಗೆ ನಮಸ್ಕಾರಿಸಬಾರದೆಂಬ ನೀಚ ಬುದ್ದಿ. ಏಕೆ ಜಾಗ ಕೊಡಲಿಲ್ಲ, ನೆಹರು ಅಜ್ಜನ ಆಸ್ತಿಯೇ ಅದು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.
ಸಿ.ಟಿ.ರವಿ ಪ್ರಕರಣ: ಸಿಐಡಿ ತನಿಖೆಗೆ ಇಲ್ಲ ಎನ್ನಲಾಗದು: ಬಸವರಾಜ ಹೊರಟ್ಟಿ
ಹುಬ್ಬಳ್ಳಿ : ‘ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ರಾಜ್ಯ ಸರ್ಕಾರದ ನಿರ್ಧಾರ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸ್ಥಳ ಮಹಜರಿಗೆ ಪರಿಷತ್ ಅವಕಾಶ ಕೊಡುವ ಕುರಿತು ಚರ್ಚೆ ನಡೆಸಿದ್ದೇವೆ. ಅಂಥ ವಾತಾವರಣ ನಿರ್ಮಾಣ ಆದರೆ ಅವಕಾಶ ನೀಡಬೇಕಾಗುತ್ತದೆ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸಿಐಡಿಗೆ ಕೊಟ್ಟಿರುವುದಾಗಿ ಗೃಹ ಸಚಿವರು ಈಗಷ್ಟೇ ಹೇಳಿದರು. ಸಿಐಡಿಗೆ ಕೊಡುವ ಬಗ್ಗೆ ನಮ್ಮನ್ನು ಕೇಳುವುದಕ್ಕೆ ಬರುವುದಿಲ್ಲ.
ಲಕ್ಷ್ಮೀ ಪಂಥಾಹ್ವಾನ, ಕೆಸರಿನ ಕಥೆ ಹೇಳಿದ ಕೇಸರಿಕಲಿ! ಸಿ.ಟಿ ರವಿಗೆ ಸಚಿವೆ ಆತ್ಮಸಾಕ್ಷಿಯ ಸವಾಲ್!
ಸ್ಥಳ ಮಹಜರಿಗೆ ಸಂಬಂಧಪಟ್ಟಂತೆ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಎಜಿ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಆ ತರಹದ ವಾತಾವರಣ ನಿರ್ಮಾಣವಾದರೆ ಅವಕಾಶ ಕೊಡಬೇಕಾಗುತ್ತದೆ. ನಮ್ಮ ಕಾರ್ಯದರ್ಶಿ, ಕಾನೂನು ತಜ್ಞರು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ’ ಎಂದರು. ‘ನಮಗೆ ಕೊಟ್ಟಿರುವ 2 ದೂರುಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಸಿಐಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ನಿಯಮನೇ ಬೇರೆ, ರಾಜ್ಯ ಸರ್ಕಾರದ ನಿಯಮಗಳು ಬೇರೆ. ನಾವು ನಮ್ಮ ನಿಯಮ ಬಿಟ್ಟು ಏನು ಮಾಡಲೂ ಬರುವುದಿಲ್ಲ. ಮಾಡುವುದೂ ಇಲ್ಲ’ ಎಂದರು.
‘ಇದು ಮುಗಿದು ಹೋದ ಅಧ್ಯಾಯ ಎಂದು ನಾವು ತೀರ್ಮಾನ ಮಾಡಿದ್ದು ನಮ್ಮ ನಿಯಮದ ಪ್ರಕಾರ. ನಾವು ರೂಲಿಂಗ್ ಕೊಟ್ಟ ಮೇಲೆ ಮುಗಿಯಿತು. ಅದನ್ನೇ ನಾನು ಹೇಳಿದ್ದು’ ಎಂದರು. ‘ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವಾಗ ನಾನು ಕೇಳುವುದಕ್ಕೆ ಬರುವುದಿಲ್ಲ. ಸಿಐಡಿಗೆ ರೆಫರೆನ್ಸ್ ಕೊಡುವಾಗ ವಿಧಾನಪರಿಷತ್ ಎಂದು ಬರೆದಿರುವುದೇ ತಪ್ಪು. ಹೀಗೆ ಪೊಲೀಸರು ಬರೆಯಬಾರದಿತ್ತು. ನಾವು ರೂಲಿಂಗ್ ಕೊಟ್ಟು ಪ್ರಕರಣವನ್ನು ಕ್ಲೋಸ್ ಮಾಡಿದ್ದೀವಿ. ನನ್ನ ಮೇಲೆ ಯಾರೂ ಒತ್ತಡ ಹಾಕುವುದಕ್ಕೆ ಸಾಧ್ಯವಿಲ್ಲ. ಪ್ರಕರಣದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದರು ಕೊಟ್ಟಿದ್ದೇನೆ’ ಎಂದು ಸ್ಪಷ್ಟಪಡಿಸಿದರು.