MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕಿಚ್ಚ ಸುದೀಪ್ ಮಗಳು ಗಾಯಕಿ ಸಾನ್ವಿ ಬೆನ್ನೇರಿದ ವಿನಾಯಕ! ಸನಾತನಿಗಳಿಂದ ಬಂತು ಶುಭ ಹಾರೈಕೆ!

ಕಿಚ್ಚ ಸುದೀಪ್ ಮಗಳು ಗಾಯಕಿ ಸಾನ್ವಿ ಬೆನ್ನೇರಿದ ವಿನಾಯಕ! ಸನಾತನಿಗಳಿಂದ ಬಂತು ಶುಭ ಹಾರೈಕೆ!

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್, ಬೆನ್ನಿನ ಮೇಲೆ ಗಣೇಶನ ಟ್ಯಾಟೋ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ. ಹೈದರಾಬಾದಿನ 'ಏಲಿಯನ್ ಟ್ಯಾಟೋ'ದಲ್ಲಿ 8 ಗಂಟೆಗಳ ಕಾಲ ವ್ಯಯಿಸಿ ಮೂಡಿಸಿದ ಈ ಕಲಾಕೃತಿಯ ವಿಡಿಯೋ ವೈರಲ್ ಆಗಿದ್ದು, ಫ್ಯಾಷನ್ ಮತ್ತು ಭಕ್ತಿಯ ಸಮ್ಮಿಲನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

2 Min read
Author : Sathish Kumar KH
Published : May 10 2026, 08:15 PM IST
Share this Photo Gallery
  • FB
  • TW
  • Linkdin
  • Whatsapp
18
ಸಾನ್ವಿ ಸುದೀಪ್‌ ಬೆನ್ನಲ್ಲಿ ಗಣೇಶ
Image Credit : Instagram

ಸಾನ್ವಿ ಸುದೀಪ್‌ ಬೆನ್ನಲ್ಲಿ ಗಣೇಶ

ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಗಾಯಕಿಯಾಗಿ ಈಗಾಗಲೇ ಗುರುತಿಸಿಕೊಂಡಿರುವ ಸಾನ್ವಿ, ಈಗ ತಮ್ಮ ಹೊಸ ಟ್ಯಾಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಹೌದು, ಸಾನ್ವಿ ಸುದೀಪ್ ಅವರು ತಮ್ಮ ಬೆನ್ನಿನ ಮೇಲೆ ಗಣಪತಿಯ ಭವ್ಯವಾದ ಟ್ಯಾಟೋವನ್ನು ಹಾಕಿಸಿಕೊಂಡಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred
28
ಏಲಿಯನ್ ಟ್ಯಾಟೋ
Image Credit : Instagram

ಏಲಿಯನ್ ಟ್ಯಾಟೋ

ಸಾನ್ವಿ ಸುದೀಪ್ ಅವರು ದೇಶದ ಅತ್ಯಂತ ಪ್ರತಿಷ್ಠಿತ ಟ್ಯಾಟೋ ಸ್ಟುಡಿಯೋಗಳಲ್ಲಿ ಒಂದಾದ ಹೈದರಾಬಾದಿನ 'ಏಲಿಯನ್ ಟ್ಯಾಟೋ'ಗೆ (Aliens Tattoo) ಭೇಟಿ ನೀಡಿ ಈ ಸುಂದರ ಕಲಾಕೃತಿಯನ್ನು ಮೈಮೇಲೆ ಮೂಡಿಸಿಕೊಂಡಿದ್ದಾರೆ.

Related Articles

Related image1
ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ: ಖಡಕ್‌ ಆಗಿ ಹೇಳಿದ Kiccha Sudeep ಮಗಳು ಸಾನ್ವಿ
Related image2
ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
38
8 ಗಂಟೆಗಳ ಕಲಾಕೃತಿ!
Image Credit : Instagram

8 ಗಂಟೆಗಳ ಕಲಾಕೃತಿ!

ವಿಶೇಷವೆಂದರೆ, ಈ ಒಂದು ಟ್ಯಾಟೋ ಹಾಕಿಸಿಕೊಳ್ಳಲು ಸಾನ್ವಿ ಬರೋಬ್ಬರಿ 8 ಗಂಟೆಗಳ ಕಾಲ ಸಮಯ ವ್ಯಯಿಸಿದ್ದಾರೆ. ತಮ್ಮ ಕನಸಿನ ವಿನ್ಯಾಸವನ್ನು ಅದ್ಭುತವಾಗಿ ರೂಪಿಸಿದ ಕಲಾವಿದ ದೀಪ್ ಅವರಿಗೆ ಸಾನ್ವಿ ಧನ್ಯವಾದ ಅರ್ಪಿಸಿದ್ದಾರೆ.

48
ಬೆನ್ನಿಗೆ ನಿಂತು ಕಾಯುವ ವಿನಾಯಕ
Image Credit : Instagram

ಬೆನ್ನಿಗೆ ನಿಂತು ಕಾಯುವ ವಿನಾಯಕ

ಸಾನ್ವಿ ಅವರು ಹಂಚಿಕೊಂಡಿರುವ ಈ ಟ್ಯಾಟೋ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಣೇಶನ ಈ ವಿನ್ಯಾಸ ಕೇವಲ ಫ್ಯಾಷನ್ ಮಾತ್ರವಲ್ಲದೆ, ಅದರ ಹಿಂದೆ ಆಧ್ಯಾತ್ಮಿಕ ಅರ್ಥವೂ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

58
ಗಣೇಶನ ಕಾವಲು
Image Credit : Instagram

ಗಣೇಶನ ಕಾವಲು

'ಗಣೇಶನ ಟ್ಯಾಟೋವನ್ನು ಬೆನ್ನಿನ ಮೇಲ್ಭಾಗದಲ್ಲಿ ಅಥವಾ ಭುಜಗಳ ಮಧ್ಯೆ ಹಾಕಿಸಿಕೊಳ್ಳುವುದು ಅತ್ಯಂತ ಸೂಕ್ತ. ಇದರರ್ಥ ಭಗವಾನ್ ಗಣೇಶ ನಮಗೆ ಕಾವಲಾಗಿದ್ದಾನೆ ಮತ್ತು ನಮ್ಮನ್ನು ಬೆಂಬಲಿಸುತ್ತಿದ್ದಾನೆ (Guarding your back) ಎಂಬುದಾಗಿದೆ' ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

68
ಟ್ವಿಟರ್‌ನಲ್ಲಿ 'ಸನಾತನ' ಪ್ರಶಂಸೆ
Image Credit : Instagram

ಟ್ವಿಟರ್‌ನಲ್ಲಿ 'ಸನಾತನ' ಪ್ರಶಂಸೆ

ಸಾನ್ವಿ ಅವರ ಈ ಭಕ್ತಿ ಮತ್ತು ನಿರ್ಧಾರವನ್ನು ಕಂಡ 'ಸನಾತನ' ಟ್ವಿಟರ್ ಖಾತೆಯು ವಿಡಿಯೋವನ್ನು ಮರುಹಂಚಿಕೊಂಡಿದೆ. 'ಸುದೀಪ್ ಅವರ ಕುಟುಂಬದಲ್ಲಿ ಭಗವಾನ್ ಗಣೇಶನ ಆಶೀರ್ವಾದ ಮುಂದುವರಿದಿದೆ. ಸುದೀಪ್ ಅವರ ಮಗಳು ಸಾನ್ವಿ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೋವನ್ನು ಸುಂದರವಾಗಿ ಕೆತ್ತಿಸಿಕೊಂಡಿದ್ದಾರೆ. ಮುಂದಿನ ಪೀಳಿಗೆಯಿಂದ ನಿಜವಾದ ಭಕ್ತಿ ಪ್ರದರ್ಶನವಾಗಿದೆ' ಎಂದು ಶ್ಲಾಘಿಸಿದೆ.

78
ಕಿಚ್ಚನ ಕುಟುಂಬದ ಸಂಪ್ರದಾಯ
Image Credit : Instagram

ಕಿಚ್ಚನ ಕುಟುಂಬದ ಸಂಪ್ರದಾಯ

ನಟ ಸುದೀಪ್ ಅವರು ಕೂಡ ದೈವ ಭಕ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಮಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸಾನ್ವಿ ಸುದೀಪ್ ಅವರ ಈ ಕಲಾತ್ಮಕ ಹೆಜ್ಜೆ ಕೇವಲ ವಿನ್ಯಾಸಕ್ಕಷ್ಟೇ ಸೀಮಿತವಾಗದೆ, ಯುವ ಪೀಳಿಗೆಯಲ್ಲಿ ಸಂಸ್ಕೃತಿ ಮತ್ತು ಆಧ್ಯಾತ್ಮದ ಮೇಲಿರುವ ಗೌರವವನ್ನು ಎತ್ತಿ ಹಿಡಿದಿದೆ.

88
ಫ್ಯಾಷನ್ ಮತ್ತು ಭಕ್ತಿಯ ಸಮ್ಮಿಲನ
Image Credit : Instagram

ಫ್ಯಾಷನ್ ಮತ್ತು ಭಕ್ತಿಯ ಸಮ್ಮಿಲನ

ಸದ್ಯ ಸಾನ್ವಿ ಅವರ ಈ ಟ್ಯಾಟೋ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಲೈಕ್ಸ್‌ಗಳನ್ನು ಬಾಚಿಕೊಳ್ಳುತ್ತಿದೆ. ಫ್ಯಾಷನ್ ಮತ್ತು ಭಕ್ತಿಯ ಸಮ್ಮಿಲನದಂತಿರುವ ಈ ಟ್ಯಾಟೋ ನಿಜಕ್ಕೂ ಕಣ್ಮನ ಸೆಳೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್
ಸಿನಿಮಾ
ಫ್ಯಾಷನ್

Latest Videos
Recommended Stories
Recommended image1
ಅವರಿಗೆ ಮಗಳಾಗಿ, ಇವರಿಗೆ ತಾಯಿಯಾಗಿರಲು ನಾನು ನಿಜಕ್ಕೂ ಅದೃಷ್ಟವಂತೆ; ರಾಧಿಕಾ ಪಂಡಿತ್ ಪೋಸ್ಟ್ ವೈರಲ್!
Recommended image2
ಅಪ್ಪು 'ಜೇಮ್ಸ್' ಪ್ರೊಡ್ಯೂಸರ್ ಭರ್ಜರಿ ಕಂಬ್ಯಾಕ್; ಭಾರೀ ಮೊತ್ತಕ್ಕೆ 'ಪೆದ್ದಿ' ಡಿಸ್ಟ್ರಿಬ್ಯೂಷನ್ ರೈಟ್ಸ್!
Recommended image3
'ಗೋಲ್ಡನ್ ಮೂವೀಸ್'ನಿಂದ ಸಿಹಿ ಸುದ್ದಿ; ಕೇವಲ ನಿರ್ಮಾಪಕಿಯಲ್ಲ, ಈಗ ಗಾಯಕಿಯೂ ಆದ ಶಿಲ್ಪಾ ಗಣೇಶ್!
Related Stories
Recommended image1
ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ: ಖಡಕ್‌ ಆಗಿ ಹೇಳಿದ Kiccha Sudeep ಮಗಳು ಸಾನ್ವಿ
Recommended image2
ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved