ಗೋಲ್ಡನ್ ಕಲರ್ ಸೀರೆಯುಟ್ಟು ಮಿಂಚಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್
ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್ ದಂಪತಿಯ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾನ್ವಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಹಾಗೂ ಅವರ ಪತಿ ಪಿಂಕ್ ಕುರ್ತಾದಲ್ಲಿ ಮಿಂಚಿದ್ದಾರೆ.

ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್ ದಂಪತಿಯ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾನ್ವಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಹಾಗೂ ಪತಿ ಪಿಂಕ್ ಕುರ್ತಾದಲ್ಲಿ ಮಿಂಚಿದ್ದಾರೆ.
ಮಾನ್ವಿತಾ ಲುಕ್ ನೋಡಿದ ಅಭಿಮಾನಿಗಳು, ಬ್ಯೂಟಿಫುಲ್, ಗಾರ್ಜಿಯಸ್, ಪ್ರೆಟ್ಟೀ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ.
2015ರಲ್ಲಿ ಕೆಂಡಸಂಪಿಗೆ ಸೀರಿಯಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಚೌಕಾ, ಕನಕಾ, ಟಗರು,ತಾರಕಸೂರ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಮಾನ್ವಿತಾ.
ಮೇ 1, 2024ರಂದು ಹುಟ್ಟೂರು ಕಳಸದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೋಷಕರು ಆಯ್ಕೆ ಮಾಡಿ ಹುಡುಗನ್ನು ಮದುವೆ ಮಾಡಿಕೊಂಡರು
ಮಾನ್ವಿತಾ ಕೈ ಹಿಡಿದಿರುವ ಹುಡುಗ ಖ್ಯಾತ ಸಂಗೀತಾ ನಿರ್ಮಾಪಕ ಅರುಣ್. ಇವರಿಬ್ಬರ ಮದುವೆ ಕೊಂಕಣಿ ಸಂಪ್ರದಾಯದಲ್ಲಿ ನಡೆದಿದೆ
ಮದುವೆ ನಂತರ ಮಾನ್ವಿತಾ ಅಪ್ಲೋಡ್ ಮಾಡಿರುವ ಮೊದಲ ಜೋಡಿ ಫೋಟೋದಲ್ಲಿ ಹಸಿರು ಮತ್ತು ಹಳದಿ ಕಾಂಬಿನೇಷನ್ ಸೀರೆ ಧರಿಸಿದ್ದರು.
'ಗಂಡ ಕೊಡಿಸುವ ಮೊದಲ ಸೀರೆ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುತ್ತದೆ, ವಿಶೇಷ ಜಾಗ ಪಡೆಯುತ್ತದೆ' ಎಂದು ಮಾನ್ವಿತಾ ಬರೆದುಕೊಂಡಿದ್ದರು.
ಸೀರೆಯಲ್ಲಿ ಹೂಗಳ ಡಿಸೈನ್ ಇರುವ ಕಾರಣ ಬ್ಲೌಸ್‌ನಲ್ಲಿ ಮರದ ಡಿಸೈನ್ ಮಾಡಲಾಗಿದೆ. ಇದಕ್ಕೆ ಸಂಪೂರ್ಣವಾಗಿ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.