- Home
- Entertainment
- Sandalwood
- 'ಬೆಳದಿಂಗಳ ಬಾಲೆ' ನಿವೇದಿತಾ ಗೌಡಗೆ ಮತ್ತೆಮತ್ತೆ ನೆಟ್ಟಿಗರು ಕೇಳೋ ಪ್ರಶ್ನೆ ಇದು.. ಉತ್ತರ ಕೊಡ್ತಾರಾ?
'ಬೆಳದಿಂಗಳ ಬಾಲೆ' ನಿವೇದಿತಾ ಗೌಡಗೆ ಮತ್ತೆಮತ್ತೆ ನೆಟ್ಟಿಗರು ಕೇಳೋ ಪ್ರಶ್ನೆ ಇದು.. ಉತ್ತರ ಕೊಡ್ತಾರಾ?
ಟೈಮ್ ಸಿಕ್ಕಾಗಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ತಮ್ಮ ಅಭಿಮಾನಿಗಳಿಗೆ ಕಚಗುಳಿ ಇಡೋದನ್ನು ಮರೆಯೋದಿಲ್ಲ ನಿವೇದಿತಾ. ಅವರ ಫ್ಯಾನ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಆ ಪ್ರಶ್ನೆಗೆ ಉತ್ತರ ಸಿಕ್ಕಿತಾ?

ನಿವೇದಿತಾ ಗೌಡ ಫೋಟೋಸ್!
ನಟಿ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಅನ್ನೊದು ಬಹಳಷ್ಟು ಜನಕ್ಕೆ ಗೊತ್ತು ಹೇಳಿಕೊಳ್ಳೋದಕ್ಕೆ ಭಾರೀ ದೊಡ್ದ ಹೀರೋಯನ್ ಅಲ್ಲ ಅಂದರೂ ಅವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ.
ನಿವೇದಿತಾ ಗೌಡ ಫೋಟೋಸ್!
ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುವಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಿವೇದಿತಾ ಗೌಡ ಅವರು ಕುಳಿತರೂ ನಿಂತರೂ ಸುದ್ದಿಯಾಗೋದು ನಿಶ್ಚಿತ..
ನಿವೇದಿತಾ ಗೌಡ ಫೋಟೋಸ್!
ಅದರಲ್ಲಿ ಅವರ ಒಂದು ಫೋಟೋ ನೋಡಿದರೂ ಸಾಕು, ಸುಮ್ಮನಿರಲಾರದೇ ಕಾಮೆಂಟ್ ಮಾಡೋರ ಸಂಖ್ಯೆ ದೊಡ್ಡದಿದೆ.
ನಿವೇದಿತಾ ಗೌಡ ಫೋಟೋಸ್!
ಮಾಡೆಲಿಂಗ್, ನಟನೆ ಹಾಗೂ ಬಿಗ್ ಬಾಸ್ ಶೋಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಿವೇದಿತಾ ಗೌಡ ಅವರು ಇತ್ತೀಚೆಗೆ ವಿಡಿಯೋ ಸಾಂಗ್ ಹಾಗೂ ಸಿನಿಮಾ ನಟನೆಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ನಿವೇದಿತಾ ಗೌಡ ಫೋಟೋಸ್!
ಆದರೆ, ಟೈಮ್ ಸಿಕ್ಕಾಗಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ತಮ್ಮ ಅಭಿಮಾನಿಗಳಿಗೆ ಕಚಗುಳಿ ಇಡೋದನ್ನು ಮರೆಯೋದಿಲ್ಲ ನಿವೇದಿತಾ.ಇದರಿಂದಲೋ ಏನೋ ಎನ್ನುವಂತೆ ಅವರ ಫ್ಯಾನ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ನಿವೇದಿತಾ ಗೌಡ ಫೋಟೋಸ್!
ಬಿಗ್ ಬಾಸ್ ವೇಳೆ ಚಂದನ್ ಶೆಟ್ಟಿ ಅವರನ್ನು ಲವ್ ಮಾಡಿ ಆ ಬಳಿಕ ಗ್ರಾಂಡ್ ಎಂಗೇಜ್‌ಮೆಂಟ್ ಹಾಗೂ ಮದುವೆ ಮಾಡಿಕೊಂಡಿದ್ದ ನಿವೇದಿತಾ ಗೌಡ ಅವರು ಬಳಿಕ ಡಿವೋರ್ಸ್ ಮಾಡಿದ್ದಾರೆ. ಈಗ ಅವರು ಸಿಂಗಲ್ ಆಗಿದ್ದಾರೆ. ಆದರೆ, ಜನಸಾಮಾನ್ಯರಿಗೆ ಅವರ ಮದುವೆಯ ಬಗ್ಗೆಯೇ ಚಿಂತೆ ಹೆಚ್ಚಾಗಿದೆ.
ನಿವೇದಿತಾ ಗೌಡ ಫೋಟೋಸ್!
ಸೋಷಿಯಲ್ ಮೀಡಯಾಗಳಲ್ಲಿ ನಿವೇದಿತಾ ಗೌಡ ಅವರಿಗೆ ಕಾಮೆಂಟ್ ಮಾಡುವ ಬಹಳಷ್ಟು ಮಂದಿ 'ನೀವು ಮತ್ತೆ ಮದುವೆಯಾಗುವುದು ಯಾವಾಗ?' ಎಂದೇ ಕೇಳುತ್ತಾರೆ.
ನಿವೇದಿತಾ ಗೌಡ ಫೋಟೋಸ್!
ಆದರೆ ಅಂಥ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತ ಕುಳಿತುಕೊಳ್ಳುವುದಿಲ್ಲ ನಿವಿ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದುಬಿಡುತ್ತಾರೆ ನಿವೇದಿತಾ ಗೌಡ.
ನಿವೇದಿತಾ ಗೌಡ ಫೋಟೋಸ್!
ಸದ್ಯಕ್ಕೆ ಅವರು ಮತ್ತೆ ಮದುವೆ ಮಾಡಿಕೊಳ್ಳುವ ಬಗ್ಗೆ ಯಾರಿಗೂ ಯಾವುದೇ ಕನ್ಫರ್ಮೇಶನ್ ಕೊಟ್ಟಿಲ್ಲ. ಮುಂದಿನದು ಮುಂದೆ ನೋಡಿಕೊಂಡರಾಯಿತು ಎಂಬಂತೆ ಇದ್ದಾರೆ.
ನಿವೇದಿತಾ ಗೌಡ ಫೋಟೋಸ್!
ಆದರೆ, ಅವರ ಅಭಿಮಾನಿಗಳ ತಲೆಯಲ್ಲಿ ಮಾತ್ರ ಅದೇ ಚಿಂತೆ.. 'ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ.. ಆಟ ಆಡೋರು ಯಾರು?' ಎಂದು ಹಾಡುತ್ತಲೇ ಇದ್ದಾರೆ. ಉತ್ತರ ಸದ್ಯಕ್ಕಂತೂ ಸಿಕ್ಕಿಲ್ಲ!