ನಟ ದರ್ಶನ್ಗೆ ಜೈಲು ಅದೃಷ್ಟ ಕೈ ಕೊಟ್ಟಿದೆ. ದಾಸ ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದೆ. ಅಷ್ಟೆ ಅಲ್ಲ ಜೈಲಿನಲ್ಲೂ ದಾಸ ಆಟಾಟೋಪ ನಡೀತಾ ಇಲ್ಲ. ಹಾಗಾದ್ರೆ ದಾಸನಿಗಿದ್ದ ಆ ಅದೃಷ್ಟ ಯಾವ್ದು..? ದಚ್ಚು ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದ್ದು ಏನು..?
ನಟ ದರ್ಶನ್ಗೆ ಜೈಲು ಅದೃಷ್ಟ ಕೈ ಕೊಟ್ಟಿದೆ. ದಾಸ ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದೆ. ಅಷ್ಟೆ ಅಲ್ಲ ಜೈಲಿನಲ್ಲೂ ದಾಸ ಆಟಾಟೋಪ ನಡೀತಾ ಇಲ್ಲ. ಹಾಗಾದ್ರೆ ದಾಸನಿಗಿದ್ದ ಆ ಅದೃಷ್ಟ ಯಾವ್ದು..? ದಚ್ಚು ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದ್ದು ಏನು..? ನಟ ದರ್ಶನ್ ಜೈಲಿನಿಂದ ಹೊರಗೆ ಇದ್ದಿದ್ರೆ ಇವತ್ತು ಥಿಯೇಟರ್ ನಲ್ಲಿ ಸಂಭ್ರಮದ ಹೊಳೆಯೇ ಹರಿಯುತಿತ್ತು. ಫ್ಯಾನ್ಸ್ ಕಾಲರ್ ಎತ್ತೋದು ಹೆಚ್ಚಾಗ್ತಿತ್ತು. ಯಾಕಂದ್ರೆ ನಟ ದರ್ಶನ್ಗೆ ಅವರ ಫ್ಯಾನ್ಸ್ಗೆ ಇದ್ದ ಒಂದೇ ಒಂದು ನಂಬಿಕೆ ಡೆವಿಲ್.. ಆದ್ರೆ ಡೆವಿಲ್ ನಿರೀಕ್ಷೆ ಸುಳ್ಳಾಗಿದೆ. ನಂಬಿಕೆ ಬಾಡಿ ಹೋಗಿದೆ. ದಚ್ಚು ಮಂದಹಾಸ ಕಣ್ಮರೆ ಆಗಿದೆ.
ಡೆವಿಲ್ ಗೆ ನಿರೀಕ್ಷೆತ ಗೆಲುವು ಮರೀಚಿಕೆಯಾಗಿದೆ. ನಟ ದರ್ಶನ್ ಬಾಕ್ಸಾಫೀಸ್ ಸುಲ್ತಾನ್ ಅನ್ನೋದು ನಿಜ. ಆದ್ರೆ ಅದು ಎಲ್ಲಾ ಸಿನಿಮಾದಲ್ಲಲ್ಲ ಅನ್ನೋದು ಅಷ್ಟೇ ಸತ್ಯ. ಡೆವಿಲ್ ಮೇಲೆ ದಚ್ಚುಗೆ ಭಾರಿ ನಿರೀಕ್ಷೆ ಇತ್ತು. ನಾನು ಜೈಲಲ್ಲಿದ್ರೆ ಏನು ನನ್ನ ಸೆಲೆಬ್ರೆಟೀಸ್ ಸೇರಿಕೊಂಡು ಸಿನಿಮಾ ಗೆಲ್ಲಿಸ್ತಾರೆ ಅಂತ ಬಲವಾಗಿ ನಂಬಿದ್ರು. ಆದ್ರೆ ಅದು 100 ಪರ್ಸೆಂಟ್ ಸಾಧ್ಯ ವಾಗಿಲ್ಲ. ಎರಡೇ ದಿನಕ್ಕೆ ಡೆವಿಲ್ ಜಾತ್ರೆ ಮುಗಿದೆ. ಹೀಗಾಗಿ ಈ ಸಿನಿಮಾ ಗೆಲ್ಲಿಸೋ ಹೊಣೆ ಹೊತ್ತಿರೋ ದಾಸನ ಪತ್ನಿ ವಿಜಯಲಕ್ಷ್ಮಿ ತನ್ನ ಕೈಲಾದಷ್ಟು ಥಿಯೇಟರ್ ತುಂಬಿಸೋಕೆ ಅಂತ ಯಾತ್ರೆ ಹೊರಟಿದ್ದಾರೆ.
ಮಂಡ್ಯ ದಾವಣಗೆರೆಗೆ ದಾಸನ ಪತ್ನಿ ಎಂಟ್ರಿ ಕೊಡುತ್ತಿದ್ದಾರೆ. ದರ್ಶನ್ ಸಾರಥಿ ಟೈಮ್ನಲ್ಲಿ 21 ದಿನ ಜೈಲಿನಲ್ಲಿದ್ರು. ಹೆಂಡತಿ ಮೇಲೆ ಹಲ್ಲೆ ಮಾಡಿದ್ದಕ್ಕೆ ದಾಸ ಕಾರಾಗೃಹ ಸೇರಿದ್ರು. ಅಂದು ದಚ್ಚು ಖರಿಯರ್ ಖತಂ ಅಂತ ಎಲ್ಲರೂ ಮಾತಾಡಿದ್ರು. ಆದ್ರೆ ಜೈಲಿನಲ್ಲಿರುವಾಗ್ಲೆ ಬಂದಿದ್ದ ಸಾರಥಿ ದಾಸನಿಗೆ ಮರು ಹುಟ್ಟು ಕೊಟ್ಟಿತ್ತು. ಆದ್ರೆ ಡೆವಿಲ್ ಆ ಮ್ಯಾಜಿಕ್ ಮಾಡ್ಲೇ ಇಲ್ಲ. ಅಷ್ಟೆ ಅಲ್ಲ ಸಾರಥಿ ಸಿನಿಮಾ ಬಿಡುಗಡೆ ಆಗಿ ಒಂದೇ ವಾರಕ್ಕೆ ದರ್ಶನ್ ಜೈಲಿನಿಂದ ಹೊರ ಬಂದಿದ್ರು. ಹೀಗಾಗಿ ಸಿನಿಮಾದ ಕ್ರೇಜ್ ಕೂಡ ಜಾಸ್ತಿ ಆಗಿತ್ತು. ಇದು ಸಾರಥಿ ಗೆಲುವಿಗೆ ಕಾರಣ ಆಗಿತ್ತು.
ಆದ್ರೆ ಸಾರಥಿಯ ಹಿಸ್ಟ್ರಿ ರಿಪೀಟ್ ಆಗ್ಲಿಲ್ಲ. ಡೆವಿಲ್ ಆ ಸಾಹಸ ಮಾಡಲಿಲ್ಲ. ಡೆವಿಲ್ ಮೂವಿ ಬಂದು ಒಂದು ವಾರವಾದ್ರು ದರ್ಶನ್ ಜೈಲಿನಿಂದ ಹೊರ ಬರಲಾಗಿಲ್ಲ. ಬದಲಾಗಿ ಖಡಕ್ ಖಾಕಿ ಕೋಟೆಯಲ್ಲಿ ಕಣ್ಗಾವಲಿನಲ್ಲಿ ದರ್ಶನ್ ಇದ್ದಾರೆ. ಯಾಕಂದ್ರೆ ದಾಸನ ಪ್ರತಿ ಹೆಜ್ಜೆ ಮೇಲೆ ಈಗ ಕಣ್ಣಿಟ್ಟಿರೋದು ಖಡಕ್ ಪೊಲೀಸ್ ಆಫೀಸರ್ ಅಲೋಕ್ ಕುಮಾರ್.. ಜೈಲಿನಲ್ಲಿ ದರ್ಶನ್ ಚಲನ ವಲನದ ಬಗ್ಗೆ ಕರ್ನಾಟಕ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಖುದ್ದು ಕಣ್ಣಿಟ್ಟಿದ್ದಾರೆ. ಹೀಗಾಗಿ ದಾಸ ಫ್ರೀಡಂಗಾಗಿ ಮಿಸುಕಾಡಂಗೇ ಇಲ್ಲ..
ಪವಿತ್ರಾಗೂ ಸಿಕ್ತು ದಾಸನಿಗೆ ಸಿಕ್ಕ ಟಿವಿ ಭಾಗ್ಯ..!
ನಟ ದರ್ಶನ್ ಫ್ಯಾನ್ಸ್ ಮಾಡಿರೋ ಡೆವಿಲ್ ಸೆಲೆಬ್ರೇಷನ್ಅನ್ನ ಜೈಲಿನಲ್ಲೇ ಕೂತು ನೋಡಿದ್ದಾರೆ. ಡೆವಿಲ್ ಬಿಡುಗಡೆ ಟೈಮ್ನಲ್ಲೇ ದರ್ಶನ್ಗೆ ಟಿವಿ ವ್ಯವಸ್ಥೆಯನ್ನ ಕೊಡಲಾಗಿತ್ತು. ಈಗ ಆ ಟಿವಿ ಭಾಗ್ಯ ಗೆಳತಿ ಪವಿತ್ರಾ ಗೌಡಗೂ ಸಿಕ್ಕಿದೆ. ಪರಪ್ಪನ ಅಗ್ರಹಾರದಲ್ಲಿ ಟೈಮ್ ಪಾಸ್ ಆಗ್ತಿಲ್ಲ ಅಂತದ್ದ ಈ ಕಿಲಾಡಿ ಜೋಡಿ ಇನ್ಮುಂದೆ ಟಿವಿ ನೋಡಿಕೊಂಡು ಒಂದಷ್ಟು ಜಗತ್ತಿನ ಅಪ್ಡ್ಟೇಟ್ಸ್ಗಳನ್ನ ತಿಳಿದುಕೊಳ್ಳಬಹುದು.


