ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ "ಮ್ಯಾಂಗೋ ಪಚ್ಚ" ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್.. 

ದಾವಣಗೆರೆ (ಮೇ.25): ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ "ಮ್ಯಾಂಗೋ ಪಚ್ಚ" ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್ ಹಾಗೂ ತಂಡವು ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿತು. ಹೊಂಡದ ಸರ್ಕಲ್‌ನ ರಾಜವೀರ ಮದಕರಿ ನಾಯಕ ವೃತ್ತಕ್ಕೆ ತೆರಳಿ ಮದಕರಿ ನಾಯಕ ಪುತ್ಥಳಿ ಸೇರಿದಂತೆ ವಿವಿಧ ವೃತ್ತಗಳಲ್ಲಿನ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಂತರ ತ್ರಿಶೂಲ್ ಚಿತ್ರಮಂದಿರದಲ್ಲಿ ನಟ ಸಂಚಿತ್ ಸಂಜೀವ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ದಾವಣಗೆರೆಗೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಎಲ್ಲೆಡೆ ಸಿನಿಮಾ ಪ್ರಚಾರ ಮಾಡಿ ಬಂದಿದ್ದೇನೆ. ಆದರೆ, ದಾವಣಗೆರೆ ಜನತೆ ನನಗೆ ಬಹಳ ತುಂಬಾನೆ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹ ನೀಡುತ್ತಿದ್ದೀರಿ. ನಾನು ಈಗ ತಾನೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇನೆ. ಈಗಾಗಲೇ ನನ್ನ ಭಾವ ಕಿಚ್ಚ ಸುದೀಪ್ ಅವರನ್ನು ಬೆಳೆಸಿ ಅಂತರ ರಾಷ್ಟ್ರಿಯಮಟ್ಟಕ್ಕೆ ಕಳುಹಿಸಿದ್ದೀರಿ. ಅದರಂತೆಯೇ ನನಗೂ ಆರ್ಶೀರ್ವದಿಸಿ ಬೆಳೆಸಿ, ಹಾಗೆಯೇ ನಮ್ಮ ಚಿತ್ರತಂಡಕ್ಕೂ ಸಹಾ ಪ್ರೋತ್ಸಾಹ ನೀಡಿರಿ ಎಂದು ಮನವಿ ಮಾಡಿದರು.

ಚಿತ್ರದ ಮತ್ತೊಬ್ಬ ನಟ, ಜೈ ಮಾತನಾಡಿ, ನಿಮ್ಮ ಪ್ರೋತ್ಸಾಹ ನೋಡಿ ನನಗೆ ಬಹಳ ತುಂಬಾ ಖುಷಿ ಆಗುತ್ತಿದೆ. ನನ್ನ ಪ್ರಕಾರ ಜೂ.5 ರಿಂದ ನಮ್ಮ ಚಿತ್ರಕ್ಕೆ ಇದೇ ರೀತಿ ಪ್ರೋತ್ಸಾಹ ಸಿಗುತ್ತೆ ಅನಿಸುತ್ತಿದೆ. ಅಂದಿನಿಂದ ನಮ್ಮ ಸಿನಿಮಾದ ಹಬ್ಬ ಶುರು. ಎಲ್ಲರೂ ಸಿನಿಮಾ ನೋಡಿ ಹಬ್ಬದಂತೆ ಸಂಭ್ರಮಿಸೋಣ ಎಂದರು.

ಮಾಸ್ ಹೀರೋ ಆಗಿ ಬೆಳಗುತ್ತಾರೆ

ನಟ, ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮಾತನಾಡಿ, ಜೂನ್ 5ರಂದು ಬಿಡುಗಡೆಯಾಗುವ ನಮ್ಮ ಸಿನಿಮಾ "ಮ್ಯಾಂಗೋ ಪಚ್ಚ" ಹಿಟ್ ಆಗುವುದು ಪಕ್ಕಾ ಗ್ಯಾರಂಟಿ. ಉತ್ತರ ಕರ್ನಾಟಕದಿಂದ ಹಿಡಿದು ಇಲ್ಲಿಯವರೆಗೂ ಅಭಿಮಾನಿಗಳು ತುಂಬಾನೇ ಪ್ರೋತ್ಸಾಹ ನೀಡಿದ್ದಾರೆ. ಚಿತ್ರದ ನಾಯಕ ಸಂಚಿತ್ ಅವರು ಚಿಕ್ಕವರಿದ್ದಾಗಿನಿಂದಲೂ ಕೂಡ ಸುದೀಪ್ ಅವರ ಅಭಿನಯ ನೋಡಿಕೊಂಡು ಬೆಳೆದಿದ್ದಾರೆ. ಅವರಂತೆಯೇ ಇವರೂ ಮಾಸ್ ಹೀರೋ ಆಗಿ ಬೆಳಗುತ್ತಾರೆ ಎಂದರು.