ಕಡಲ ತೀರದಲ್ಲಿ ಕುಣಿದು ಕುಪ್ಪಳಿಸಿದ ಸ್ವೀಟಿ ರಾಧಿಕಾ ಕುಮಾರಸ್ವಾಮಿ; ಹಾಡು ಕೇಳಿ ಶಾಕ್ ಆಗ್ಬೇಡಿ..!
ನಟಿ ರಾಧಿಕಾ ಕುಮಾರಸ್ವಾಮಿ ಬೀಚ್‌ನಲ್ಲಿ ಸಂಭ್ರಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಳಸಿರುವ ಹಾಡು ಮತ್ತು ರಾಧಿಕಾ ಅವರ ಸೌಂದರ್ಯಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರನ್ನು ಟ್ರೋಲ್ ಮಾಡಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ರಾಧಿಕಾ ಕುಮಾರಸ್ವಾಮಿ ಜಾಲಿ ಮೂಡ್‌ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎರಡು ದಿನದ ಹಿಂದೆ ಅವರು ಬೀಚ್‌ನಲ್ಲಿ ತಾವು ಸಂಭ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ 1.7 ಮಿಲಿಯನ್ ವೀವ್ಸ್ ಕಂಡಿದ್ದು, ಹೆಚ್ಚಿನವರು ರಾಧಿಕಾ ಕುಮಾರಸ್ವಾಮಿಯ ಅವರ ಬ್ಯೂಟಿಯನ್ನು ಹೊಗಳಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ನಿಮ್ಮನ್ನು ಹೇಗೆ ನೋಡಿದ್ದೆನೋ, ಈಗಲೂ ಕೂಡ ಅದೇ ರೀತಿಯಲ್ಲಿದ್ದೀರಿ ಎಂದಿದ್ದಾರೆ.
ಇನ್ನೂ ಕೆಲವರು ರಾಧಿಕಾ ಕುಮಾರಸ್ವಾಮಿ ಈ ವಿಡಿಯೋಗೆ ಬಳಸಿರುವ ಹಾಡನ್ನು ಕೇಳಿ ಸಖತ್ ಟ್ರೋಲ್ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ 'ಕಡಲನು..' ಹಾಡನ್ನು ಅವರು ವಿಡಿಯೋಗೆ ಬಳಸಿಕೊಂಡಿದ್ದಾರೆ.
ನೀವು ಪುಟ್ಟಿಯಾದರೆ, ನಿಮ್ಮ ಯಜಮಾನರು ಎಚ್‌ಡಿ ಕುಮಾರಸ್ವಾಮಿ 'ಮನು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಚನ್ನಪಟ್ಟಣದಲ್ಲಿ ನೀವೇನಾದರೂ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡಿದ್ರೆ ಖಂಡಿತಾ ಗೆಲ್ತಿದ್ರಿ ಎಂದು ಹೇಳಿದ್ದಾರೆ.
ಇನ್ನೂ ಕೆಲವರು ನಿಮ್ಮಂಥ ಬ್ಯೂಟಿ ಎಚ್‌ಡಿ ಕುಮಾರಸ್ವಾಮಿಗೆ ಸೂಟ್ ಆಗೋದಿಲ್ಲ. ಅವರಿಗೆ ಡೈವೋರ್ಸ್ ಕೊಟ್ಟು ಯಾವುದಾದರೂ ಮುದ್ದಾದ ಹುಡುಗ ಮದುವೆಯಾಗಿ ಎಂದು ಬಿಟ್ಟಿ ಸಲಹೆ ಕೂಡ ಕಾಮೆಂಟ್ ಮಾಡಿದ್ದಾರೆ.
ಯಾಕೋ ಈ ವಿಡಿಯೋದ ಕ್ಯಾಮೆರಾಮೆನ್ ನಮ್ಮ ಕುಮಾರಣ್ಣನೇ ಆಗಿರೋ ಸಾಧ್ಯತೆ ಇದೆ ಎಂದು ಅಭಿಮಾನಿಯೊಬ್ಬರು ವಿಡಿಯೋಗೆ ಕಾಲೆಳೆದಿದ್ದಾರೆ.
ರಾಧಿಕಾ ಕರಿಯ ಅಂದ್ರೆ ಖುಷಿ, ಜಮೀರ್ ಹೇಳಿದ್ರೆ ಟೀಕೆ ಯಾಕೆ ಎಂದ ತೇಜಸ್ವಿನಿ ಗೌಡ
ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದರಲ್ಲಿ ಅವರು ಹಾಗೂ ಆಕೆಯ ಪ್ರೀತಿಯ ನಾಯಿಯ ಹೊರತಾಗಿ ಮತ್ಯಾರೂ ಇದ್ದಿರಲಿಲ್ಲ. ರಾಧಿಕಾ ಕುಮಾರಸ್ವಾಮಿ ಈಗ ಏಕಾಂಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು.