- Home
- Entertainment
- Sandalwood
- Niveditha Gowda: ಈ ಫೋಟೋಗಳೇ ನೂರು ಕಥೆಯಾ ಹೇಳಿವೆ.. ಡಿವೋರ್ಸ್ ಬಳಿಕ ಗಟ್ಟಿಗಿತ್ತಿಯಾದ್ರಾ ನಿವೇದಿತಾ ಗೌಡ?
Niveditha Gowda: ಈ ಫೋಟೋಗಳೇ ನೂರು ಕಥೆಯಾ ಹೇಳಿವೆ.. ಡಿವೋರ್ಸ್ ಬಳಿಕ ಗಟ್ಟಿಗಿತ್ತಿಯಾದ್ರಾ ನಿವೇದಿತಾ ಗೌಡ?
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಯಾವಾಗಲೂ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ವಿವ್ ಆಗಿಯೇ ಇರುತ್ತಾರೆ. ಮದುವೆ-ಡಿವೋರ್ಸ್ ಬಳಿಕ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರಾ ನಿವೇದಿತಾ ಗೌಡ? ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ!

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಯಾವಾಗಲೂ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ವಿವ್ ಆಗಿಯೇ ಇರುತ್ತಾರೆ. ಮೊದಲು ರೀಲ್ಸ್, ಆಮೇಲೆ ಬಿಗ್ ಬಾಸ್, ರಿಯಾಲಿಟಿ ಶೋಸ್, ನಂತರ ಸಿನಿಮಾಗಳ ಮೂಲಕ ಕರ್ನಾಟಕದಲ್ಲಿ ಫೇಮಸ್ ಆದವರು ನಿವೇದಿತಾ ಗೌಡ. ಮದುವೆ-ಡಿವೋರ್ಸ್ ಬಳಿಕ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರಾ ನಿವೇದಿತಾ ಗೌಡ? ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ!
ನಿವೇದಿತಾ ಗೌಡ ಅವರಿಗೆ ರೀಲ್ಸ್ ಕ್ರೇಜ್ ಜಾಸ್ತಿ ಎಂಬುದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ಅದೇ ದಾರಿಯಲ್ಲಿ ಬಂದು ಅವರು ಬಿಗ್ ಬಾಸ್ ಶೋಗೆ ಕೂಡ ಆಯ್ಕೆಯಾಗಿ ಮಿಂಚಿದವರು. ರೀಲ್ಸ್ ಮೂಲಕವೇ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡವರು.
ಬಿಗ್ ಬಾಸ್ ಕನ್ನಡ 10ರ ಸೀಸನ್‌ನಲ್ಲಿ ಸಹ-ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿ ಅವರ ಜೊತೆ ಲವ್ ಆಗಿ, ಬಳಿಕ ಮದುವೆ ಆಗಿ, ಆ ಬಳಿಕ ಡಿವೋರ್ಸ್ ಆಗಿದ್ದು ಈಗ ಇತಿಹಾಸ. ಆದರೆ, ಆ ಬಳಿಕ ಮನಸ್ಸಿನಲ್ಲಿ ಅದೆಷ್ಟೋ ನೋವು ತುಂಬಿಕೊಂಡಿದ್ದರೂ ಅದಕ್ಕಾಗಿ ಕೊರಗದೇ ತಮ್ಮ ದೈನಂದಿನ ಹಾಗೂ ನಟನಾವೃತ್ತಿಯಲ್ಲಿ ಸಕ್ರಿಯರಾಗಿ ಸೂಪರ್ ಎಂಬಂತೆ ಲಯಪ್ ಲೀಡ್ ಮಾಡುತ್ತಿದ್ದಾರೆ.
ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರು ತೆಲುಗು ವಿಡಿಯೋ ಸಾಂಗ್ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಅವರ ಜೊತೆ ಡಿವೋರ್ಸ್ ಆದ ಬಳಿಕ ಕೂಡ ಅದಕ್ಕೂ ಮೊದಲು ಕಮಿಟ್ ಆಗಿದ್ದಂತೆ ಶೂಟಿಂಗ್‌ಗೆ ಬಂದು ವೃತ್ತಿಪರತೆ ಮೆರೆದಿದ್ದಾರೆ. ಆ ಮೂಲಕ ವೃತ್ತಿ ಹಾಗೂ ಪ್ರವೃತ್ತಿ ಎರಡನ್ನೂ ಚೆನ್ನಾಗಿ ನಿಭಾಯಿಸಿ ವೃತ್ತಿಪರತೆ ಮೆರೆದಿದ್ದಾರೆ.
ಡಿವೋರ್ಸ್ ಬಳಿಕ ಎಲ್ಲೂ ಕೂಡ ಚಂದನ್ ಶೆಟ್ಟಿ ಬಗ್ಗೆ ಕೆಟ್ಟದಾಗಿ ಮಾತನ್ನಾಡುವುದು, ಬ್ಲೇಮ್ ಗೇಮ್ ಮಾಡುವುದು ಏನನ್ನೂ ಮಾಡದೇ, ‘ಆಗಿದ್ದು ಆಗಿ ಹೋಯ್ತು. ಜೊತೆಗಿದ್ದರೆ ಇಬ್ಬರ ಜೀವನ, ಒಂಟಿಯಾಗಿದ್ದರೆ ಒಬ್ಬರ ಜೀವನ’ ಎಂಬಂತೆ ಪ್ರೌಢತೆ ಪ್ರದರ್ಶಿಸಿದ್ದಾರೆ. ಅತ್ತ ಚಂದನ್ ಶೆಟ್ಟಿಯವರು ಕೂಡ ತಮ್ಮ ಕೆಲಸದಲ್ಲಿ ಬ್ಯೂಸಿ ಆಗಿ ವೃತ್ತಿಪರತೆ ಮೆರೆಯುತ್ತಿದ್ದಾರೆ. ಅವರದ್ದೂ ಕೂಡ ನೋ ಬ್ಲೇಮ್ ಗೇಮ್!
ಹೌದು, ನಿವೇದಿತಾ ಗೌಡ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಕೂಡ ಅದೆಷ್ಟೋ ಹಿರಿಯರು ಕೂಡ ‘ಇದು ಮಾದರಿ’ ಎಂಬಂತೆ ತಮ್ಮ ಡಿವೋರ್ಸ್ ಘಟನೆಯನ್ನು ಹ್ಯಾಂಡಲ್ ಮಾಡಿದ್ದಾರೆ. ಮದುವೆ, ಸಂಸಾರವೇ ಎಲ್ಲವೂ ಅಲ್ಲ… ಜೀವನ ಎಂದರೆ ಅದನ್ನೂ ಮೀರಿದ್ದು ಎಂಬುದನ್ನು ನಿರೂಪಿಸಿದ್ದಾರೆ ಎನ್ನಬಹುದು.
ಸದ್ಯಕ್ಕೆ ನಿವೇದಿತಾ ಗೌಡ ಅವರು ಎಂದಿನಂತೆ ತಮ್ಮ ಸುತ್ತಾಟ, ಸೋಷಿಯಲ್ ಮೀಡಿಯಾ ಆಕ್ಟಿವಿಟಿ ಸೇರಿದಂತೆ ನಟನೆಯನ್ನು ಮುಂದುವರೆಸಿದ್ದಾರೆ. ಅವರ ಇತ್ತೀಚೆಗಿನ ಫೋಟೋ ನೋಡಿದರೆ, ನಿವೇದಿತಾ ಗೌಡ ಅವರು 'ಲೈಫಲ್ಲಿ ಬಂದಿದ್ದನ್ನು ಬಂದಂತೆ ಸ್ವೀಕರಿಸುವ ಗಟ್ಟಿಗಿತ್ತಿ ಎಂಬುದನ್ನು ನಿರೂಪಿಸಿದ್ದಾರೆ ಎನ್ನಬಹುದು. ಒಂಟಿ ಲೈಫ್ ಕೂಡ ಸಮಸ್ಯೆಯಲ್ಲ ಎಂಬ ಸಂದೇಶವನ್ನು ನಿವೇದಿತಾ ಗೌಡ ಅವರು ಸಮಾಜಕ್ಕೆ ಸಾರಿದ್ದಾರೆ ಎನ್ನಬಹುದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

