- Home
- Entertainment
- Sandalwood
- Nishvika Naidu's Fitness: ಸ್ಯಾಂಡಲ್’ವುಡ್ ಸುಂದ್ರಿ ನಿಶ್ವಿಕಾ ಆಬ್ಸ್ ನೋಡಿ ಹೊಟ್ಟೆಕಿಚ್ಚು ಪಡ್ತಿದ್ದಾರೆ ಹುಡುಗರು
Nishvika Naidu's Fitness: ಸ್ಯಾಂಡಲ್’ವುಡ್ ಸುಂದ್ರಿ ನಿಶ್ವಿಕಾ ಆಬ್ಸ್ ನೋಡಿ ಹೊಟ್ಟೆಕಿಚ್ಚು ಪಡ್ತಿದ್ದಾರೆ ಹುಡುಗರು
ಕನ್ನಡ ಚಿತ್ರರಂಗದ ಬ್ಯೂಟಿ ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು ಮತ್ತೊಮ್ಮೆ ತಮ್ಮ ಆಬ್ಸ್ ಪ್ರದರ್ಶಿಸುತ್ತಾ, ತಾವು ಯಾವ ಹುಡುಗರಿಗೆ ಕಮ್ಮಿ ಇಲ್ಲ ಅನ್ನೋದನ್ನು ಸಾಬೀತುಪಡಿಸಿದ್ದಾರೆ.

ಚಂದನವನದ ಸುಂದರಿ ನಿಶ್ವಿಕಾ ನಾಯ್ಡು (Nishvika Naidu) ಸಿಕ್ಸ್ ಪ್ಯಾಕ್ ಸುಂದರಿ ಅಂತಾನೆ ಫೇಮಸ್. ಅವರ ಫಿಟ್ ದೇಹ ಸಿರಿ, ಆಬ್ಸ್, ಸಿಕ್ಸ್ ಪ್ಯಾಕ್ ಎಲ್ಲವನ್ನೂ ನೋಡಿದ್ರೆ, ಹುಡುಗರೇ ವಾರೆ ವಾವ್ ಎನ್ನುತ್ತಿದ್ದಾರೆ. ಇದೀಗ ಮತ್ತೊಂದು ಫೋಟೊ ಮೂಲಕ ತಮ್ಮ ಸಿಕ್ಸ್ ಪ್ಯಾಕ್ ಜಲಕ್ ತೋರಿಸಿದ್ದಾರೆ.
ಅಂದ ಹಾಗೆ ನಿಶ್ವಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಬೇಬಿ ಪಿಂಕ್ ಮತ್ತು ಪಿಂಕ್ ಬಣ್ಣದ ಲಾಂಗ್ ಸ್ಕರ್ಟ್ ಮತ್ತು ಬ್ಲೌಸ್ ಧರಿಸಿದ್ದು ಅದಕ್ಕೆ ಕ್ಯಾಪ್ಶನ್ ಆಗಿ twirling through lifeeeee ಎಂದು ಬರೆದಿದ್ದಾರೆ ನಟಿ.
ಈ ಸ್ಕರ್ಟ್ ಬ್ಲೌಸಲ್ಲಿ ನಟಿಯ ಆಬ್ಸ್ ಎದ್ದು ಕಾಣುತ್ತಿದ್ದು, ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಸುಂದರಿ, ಸಿಕ್ಸ್ ಪ್ಯಾಕ್ ಬ್ಯೂಟಿ (six pack beauty), ಕ್ವೀನ್, ನಿಮ್ಮ ಫೋಟೊ ನೋಡಿದ್ರೆ ವೈ ಓನ್ಲಿ ಬಾಯ್ಸ್ ಹಾವ್ ಆಲ್ ಫನ್ ಎನ್ನುವಂತಿದೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದು, ಅದಕ್ಕೆ ನಿಶ್ವಿಕಾ, ಹೌದು ನಿಜಾ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ನಿಶ್ವಿಕಾ ನಾಯ್ಡು, ತೆಲುಗು ಫ್ಯಾಮಿಲಿ ಹುಡುಗಿ. ಚಿರಂಜೀವಿ ಸರ್ಜಾ ಜೊತೆ ಅಮ್ಮ ಐ ಲವ್ ಯೂ (Amma I love You)ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ವಾಸು ನಾ ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜೆಂಟಲ್ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದರು.
ಇದಿಷ್ಟೇ ಅಲ್ಲದೇ ರಾಮಾರ್ಜುನ, ಸಖತ್, ಗುರುಶಿಷ್ಯರು, ದಿಲ್ ಪಸಂದ್, ಕರಟಕ ದಮನಕ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಗಾಳಿಪಟ ೨ ಸಿನಿಮಾದಲ್ಲಿ ವಿಶೇಷ ಅತಿಥಿಯಾಗಿ, ಹಾಗೂ ಗರಡಿ ಸಿನಿಮಾದಲ್ಲಿ ಹೊಡಿರಲಿ ಹಲಗಿ ಹಾಡಿಗೆ ಹೆಜ್ಜೆ ಹಾಕಿದ್ದರು.
ಕರಟಕ ದಮನಕ ಸಿನಿಮಾದಲ್ಲಿ ನಟ ಪ್ರಭುದೇವ ಜೊತೆ ಹಿತಲಕ ಕರಿಬ್ಯಾಡ ಮಾವ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈ ಹಾಡು ಇಡೀ ಕರ್ನಾಟಕವನ್ನೇ ಕುಣಿಯುವಂತೆ ಮಾಡಿತ್ತು. ಅದೇ ಹಾಡನ್ನು ನೋಡಿ ಇದೀಗ ತೆಲುಗಿನಲ್ಲಿ ಚಿರಂಜೀವಿ ಅವರ ವಿಶ್ವಂಭರ ಸಿನಿಮಾದಲ್ಲೂ ಐಟಂ ಹಾಡಿಗೆ ಹೆಜ್ಜೆ ಹಾಕಲು ಚಾನ್ಸ್ ಸಿಕ್ಕಿದೆ.
ಸದ್ಯ ನಿಶ್ವಿಕಾ ನಾಯ್ಡು ಝೀ ಕನ್ನಡದ ಮಹಾನಟಿ ಸೀಸನ್ ೨ನಲ್ಲಿ ತೀರ್ಪುಗಾರರಾಗಿದ್ದಾರೆ. ಮೊದಲ ಸೀಸನ್ ನಲ್ಲೂ ಸಹ ತೀರ್ಪುಗಾರರಾಗಿದ್ದರು. ಇವರ ಜೊತೆ ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುಧೀರ್ ಕೂಡ ತೀರ್ಪುಗಾರರಾಗಿದ್ದಾರೆ. ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ.