MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ 'ಚೀತಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ತಮ್ಮ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಮಸ್ಕರಿಸುವ ಮೂಲಕ ಅವರು ತೋರಿದ ವಿನಯವಂತಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1 Min read
Author : Suchethana D
Published : Feb 14 2026, 10:34 PM IST
Share this Photo Gallery
  • FB
  • TW
  • Linkdin
  • Whatsapp
16
ಜೊತೆಜೊತೆಯಲಿ ಖ್ಯಾತಿಯ ಅನು
Image Credit : Instagram

ಜೊತೆಜೊತೆಯಲಿ ಖ್ಯಾತಿಯ ಅನು

ಜೊತೆಜೊತೆಯಲಿ ಸೀರಿಯಲ್​ನಲ್ಲಿ ಅನು ಪಾತ್ರದ ಮೂಲಕ, ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ (Megha Shetty) ಇದೀಗ 'ಚೀತಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೊರಿಯೋಗ್ರಫರ್‌ ರಾಜಾ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ 'ಚೀತಾ' ಆಗಿದ್ದು, ಇದಕ್ಕೆ ಪ್ರಜ್ವಲ್ ದೇವರಾಜ್ ನಾಯಕ ಆಗಿದ್ದಾರೆ.

26
ಚೀತಾಕ್ಕೆ ನಾಯಕಿ
Image Credit : Instagram

ಚೀತಾಕ್ಕೆ ನಾಯಕಿ

ಇದಾಗಲೇ ನಟಿ ಮೇಘಾ ಶೆಟ್ಟಿ ಸೀರಿಯಲ್​ ಬಳಿಕ, 'ಥ್ರಿಬಲ್ ರೈಡಿಂಗ್', 'ಗ್ರಾಮಾಯಣ', 'ದಿಲ್ ಪಸಂದ್' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಚೀತಾದಲ್ಲಿ ನಾಯಕಿ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡೊಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗಿತ್ತು. ಪ್ರಜ್ವಲ್ ದೇವರಾಜ್ ಜೊತೆ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ ಮೇಘಾ ಶೆಟ್ಟಿ.

Related Articles

Related image1
ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ
Related image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
36
ಸ್ಲಿಪ್ಪರ್ ಬದಲು
Image Credit : Instagram

ಸ್ಲಿಪ್ಪರ್ ಬದಲು

ಇದೀಗ ನಟಿಯ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ನಟ-ನಟಿಯರಿಗೆ ಡ್ರೆಸ್​ ಸೇರಿದಂತೆ ಅವರ ವೇಷ ಭೂಷಣಗಳನ್ನು ಆಗಾಗ್ಗೆ ಬದಲಿಸುತ್ತಿರಲು ಸಹಾಯಕರು ಇರುತ್ತಾರೆ. ಅದೇ ರೀತಿ, ಮೇಘಾ ಶೆಟ್ಟಿ (Megha Shetty) ಅವರು ಶೂಟಿಂಗ್​ನಲ್ಲಿ ಇದ್ದ ಸಮಯದಲ್ಲಿ, ಅವರ ಸಹಾಯಕರೊಬ್ಬರು ಸ್ಲಿಪ್ಪರ್​ ಅನ್ನು ಬದಲಿಸಿದ್ದಾರೆ.

46
ನಟಿ ಮಾಡಿದ್ದೇನು?
Image Credit : Instagram

ನಟಿ ಮಾಡಿದ್ದೇನು?

ಆ ಸಮಯದಲ್ಲಿ ನಟಿ ನಡೆದುಕೊಂಡಿರುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟಕ್ಕೂ ನಟಿ, ಚಪ್ಪಲಿ ಬದಲಿಸಿದ ಬಳಿಕ, ಆ ಸಿಬ್ಬಂದಿಗೆ ನಮಸ್ಕರಿಸಿದ್ದಾರೆ. ಸಾಮಾನ್ಯವಾಗಿ ಕಾಲು ಟಚ್​ ಆದರೆ, ಭಾರತೀಯ ಸಂಪ್ರದಾಯದಲ್ಲಿ ಕೈ ಮುಗಿಯುತ್ತೇವೆ. ಅದರಂತೆ ನಟಿ ನಡೆದುಕೊಂಡಿರುವುದಕ್ಕೆ ಹಲವರು ನಟಿಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

56
ಸಿನಿಮಾ ಕುರಿತು
Image Credit : Instagram

ಸಿನಿಮಾ ಕುರಿತು

ಇನ್ನು 'ಚೀತಾ' ಸಿನಿಮಾದ ಕುರಿತು ಹೇಳುವುದಾದರೆ, ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಇದು ಮೂಡಿ ಬರುತ್ತಿದೆ. ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.

66
ಅದ್ಧೂರಿ ಸೆಟ್‌ನಲ್ಲಿ ಸಾಂಗ್ ಶೂಟಿಂಗ್
Image Credit : Instagram: Megha Shetty

ಅದ್ಧೂರಿ ಸೆಟ್‌ನಲ್ಲಿ ಸಾಂಗ್ ಶೂಟಿಂಗ್

ಇತ್ತೀಚೆಗಷ್ಟೇ ಸಿನಿಮಾದ ಹಾಡೊಂದು ವೈರಲ್​ ಆಗಿತ್ತು. ಇದಕ್ಕಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗಿತ್ತು. ಈ ಹಾಡಿನಲ್ಲಿ ಮೇಘಾ ಮತ್ತು ಪ್ರಜ್ವಲ್​ ಅವರ ಕಾಂಬಿನೇಷನ್​ ನೋಡಿ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಇವರ ಕೆಮೆಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಇನ್‌ಸ್ಟಾಗ್ರಾಂ
ನಟಿ

Latest Videos
Recommended Stories
Recommended image1
ಒಂದು ಸಿನಿಮಾ ಮಾಡಿ ಎಂಗೇಜ್‌ ಆದ 'ಗತವೈಭವ' ಹೀರೋ; ತುಮಕೂರು ರಾಜಕಾರಣದಲ್ಲಿ ಬೀಗರಾದ ಅಪ್ಪಂದಿರು!
Recommended image2
ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!
Recommended image3
ಅಣ್ಣನ ಮಾತು ಕೇಳದೇ ಬಣ್ಣ ಹಚ್ಚಿ 4 ಕೋಟಿ ಕಳೆದುಕೊಂಡ ತಮ್ಮ.. ಗೋಲ್ಡನ್ ಸ್ಟಾರ್ ತಮ್ಮ ಮಹೇಶನ ಗೋಲ್ ಮಾಲ್!
Related Stories
Recommended image1
ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ
Recommended image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved