- Home
- Entertainment
- Sandalwood
- ಹೀರೋಯಿನ್ಸ್‌ಗೂ ಹೀಗೆ ಮಾಡಿದ್ರಾ? ತಮಿಳುನಾಡಿನಲ್ಲಿ ಯುಟ್ಯೂಬರ್ ಪ್ರಶ್ನೆ; ರೇಷ್ಮೆ ಶಾಲಿನಲ್ಲಿ ಸುತ್ತಿ Kiccha Sudeep ಉತ್ತರ
ಹೀರೋಯಿನ್ಸ್‌ಗೂ ಹೀಗೆ ಮಾಡಿದ್ರಾ? ತಮಿಳುನಾಡಿನಲ್ಲಿ ಯುಟ್ಯೂಬರ್ ಪ್ರಶ್ನೆ; ರೇಷ್ಮೆ ಶಾಲಿನಲ್ಲಿ ಸುತ್ತಿ Kiccha Sudeep ಉತ್ತರ
Actor Kiccha Sudeep: ಡಿಸೆಂಬರ್ 25 ರಂದು ‘ಮಾರ್ಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಚೆನ್ನೈನಲ್ಲಿ ನಡೆದ ‘ಮಾರ್ಕ್’ ಇವೆಂಟ್‌ನಲ್ಲಿ ಭಾಗವಹಿಸಿದ್ದರು. ಆ ವೇಳೆ ಪತ್ರಕರ್ತರೋ ಅಥವಾ ಯುಟ್ಯೂಬರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಯುಟ್ಯೂಬರ್ ಕೇಳಿದ ಪ್ರಶ್ನೆ ಏನು?
ಸಿನಿಮಾದಲ್ಲಿ ಮಾಸ್ ಡೈಲಾಗ್‌ಗಳಿವೆ. ಇಲ್ಲಿ ನೀವು ಹೀರೋಯಿನ್‌ಗಳನ್ನು ಸೈಡ್‌ನಲ್ಲಿ ಕೂರಿಸಿದ ಹಾಗೆ ಮಾರ್ಕ್ ಸಿನಿಮಾದಲ್ಲಿಯೂ ಹೀರೋಯಿನ್‌ಗಳಿಗೆ ಇದೇ ರೀತಿ ಡೈಲಾಗ್‌ಗಳನ್ನು ಕಡಿಮೆ ಮಾಡಿದ್ದೀರಾ? ಎಂದು ಪ್ರಶ್ನೆ ಕೇಳಲಾಗಿತ್ತು.
ಸೆಟ್‌ನಲ್ಲಿ ಈ ರೀತಿ ಪ್ರಶ್ನೆ ಕೇಳಲಿಲ್ಲ
ಕಿಚ್ಚ ಸುದೀಪ್ ಅವರು, “ನೀವು ಕೇಳಿದಂತೆ ಯಾರೂ ಕೂಡ ನಮ್ಮ ಸೆಟ್‌ನಲ್ಲಿ ಈ ರೀತಿ ಒಂದೂ ಪ್ರಶ್ನೆಗಳನ್ನು ಕೇಳಲಿಲ್ಲ. ಅವರನ್ನು ಯಾಕೆ ಕೊನೆಯದಾಗಿ ಕರೆಯುತ್ತಾರೆ ಎಂದು ಕೇಳಲಿಲ್ಲ. ಹೀಗಾಗಿ ನಮ್ಮ ಸಿನಿಮಾ ಚೆನ್ನಾಗಿ ಬಂದಿದೆ” ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ಏನು ಮಾಡಿದ್ರು?
ಅದಾದ ಬಳಿಕ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಕೊನೆಯ ಕುರ್ಚಿಯಲ್ಲಿ ಅಥವಾ ಸೈಡ್‌ನಲ್ಲಿ ಕೂತಿದ್ದ ಇಬ್ಬರು ನಟಿಯರನ್ನು ಎಬ್ಬಿಸಿ, ವೇದಿಕೆಯ ಕೇಂದ್ರದಲ್ಲಿ ಕೂರಿಸಿದ್ದಾರೆ. ಕಿಚ್ಚ ಸುದೀಪ್ ನಡೆಗೆ ಅಲ್ಲಿದ್ದವರು ಚಪ್ಪಾಳೆ ತಟ್ಟಿದ್ದಾರೆ.
ಸುದೀಪ್ ನೀಡಿದ ಸ್ಪಷ್ಟನೆ ಏನು?
“ಉದ್ದೇಶಪೂರ್ವಕವಾಗಿ ನಾವು ನಟಿಯರನ್ನು ಕೊನೆಯಲ್ಲಿ ಕೂರಿಸಿಲ್ಲ, ಇದು ಆಗಿದೆ ಅಷ್ಟೇ. ನಾವು ಸೆಲೆಬ್ರೇಶನ್‌ಗೆ ಬಂದಿದ್ದೇವೆ ಎಂದರೆ ಸೆಲೆಬ್ರೇಶನ್ ಮಾಡಬೇಕು, ಲವ್ ಅಂದಾಗ ಲವ್ ಮಾಡಬೇಕು, ಪರಿಶ್ರಮ ಎಂದಾಗ ಪರಿಶ್ರಮ ಹಾಕಬೇಕು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಹೀಗೆಲ್ಲ ಮಾಡಬಾರದು
“ಯಾರ ಮೈಂಡ್‌ನಲ್ಲಿ ಅನ್‌ಕಂಫರ್ಟೇಬಲ್ ಫೀಲ್ ಇಲ್ಲ. ನಮ್ಮ ಸೆಟ್‌ನಲ್ಲಿ 1% ಯಾರೂ ಕೂಡ ಏನಾಯ್ತು ಗೊತ್ತಾ ಅಂತ ಮಾತನಾಡಲಿಲ್ಲ. ಈ ಥರ ಮಾಡಲೂಬಾರದು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

