ಮಾಸ್ ಹಾಡು, ಐಟಂ ಸಾಂಗ್ ಅಂದ್ರೆ ಈ ಲೆವಲ್ಲಿಗೂ ಇರುತ್ತಾ? ಅಥವಾ ಇಂಥ ಶಾಕಿಂಗ್ ಲಿರಿಕ್ಸ್ ಕೂಡ ಇರಬಹುದಾ? ಅಂತೆಲ್ಲಾ ನೀವು ಯೋಚಿಸದಿರಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ಶ್ರೀಲೀಲಾ-ರವಿತೇಜ ಸಾಂಗ್ ಶಾಕ್ ಹಾಗೂ ನಗು ಎರಡನ್ನೂ ಸ್ವಲ್ಪ ಸಮಯದಲ್ಲಿಯೇ ಕಟ್ಟಿಕೊಡುತ್ತದೆ. ಒಮ್ಮೆ ನೋಡಿ ಈ ಹಾಡು..!
ಇಂಥ ಸಾಹಿತ್ಯವೇ? ದೇವರೇ..!
ಕನ್ನಡದ ನಟಿ ಶ್ರೀಲೀಲಾ (Sreeleela) ಹಾಗೂ ತೆಲುಗಿನ ನಟ, 'ಮಾಸ್ ಮಹಾರಾಜ' ಖ್ಯಾತಿಯ ರವಿತೇಜ (Ravi Teja) ನಟನೆಯ 'ಮಾಸ್ ಜಾಥರಾ' ಸಿನಿಮಾದ (Mass Jathara) ಹಾಡೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಹಾಡು ಹಾಟ್ ಫೆವರೆಟ್ ಎನ್ನುವಂತಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾನೇ ಟ್ರೆಂಡಿಂಗ್‌ನಲ್ಲಿದೆ. ಆದರೆ, ಇದು ತೆಲುಗು ಸಿನಿಮಾವೊಂದರ ಹಾಡನ್ನು ಕನ್ನಡಕ್ಕೆ ಡಬ್ ಮಾಡಿದಾಗ ಆಗಿರೋ ಅಭಾಸ ಎಂಥದ್ದು ಎಂಬುದಕ್ಕೆ ಉದಾಹರಣೆ ಎನ್ನಬಹುದೇನೋ! ಆ ಲಿರಿಕ್ಸ್, ಹಾಡಿನ ಧಾಟಿ, ನಟನೆ ಹಾಗೂ ಅಲ್ಲಿನ ಸನ್ನಿವೇಶ ನೋಡಿದವರು ಬಿದ್ದುಬಿದ್ದೂ ನಗುವಂತಾಗಿದೆ. ಹಾಗಿದ್ದರೆ ಆಗಿರೋದೇನು?
ಬಿದ್ದೂ ಬಿದ್ದೂ ನಗುವಂತೆ ಆಗಿದೆ
ಹೌದು, ತೆಲುಗಿನ 'ಮಾಸ್ ಜಾಥರಾ' ಸಿನಿಮಾದ ಈ ಹಾಡನ್ನು ಕೇಳಿದವರು ಬಿದ್ದೂ ಬಿದ್ದೂ ನಗುವಂತೆ ಆಗಿದೆ. ಶ್ರೀಲೀಲಾ ಜೊತೆ ನಟ ರವಿತೇಜ ನಟನೆಯ ಈ ರೊಮ್ಯಾಂಟಿಕ್ ಸಾಂಗ್ ನೋಡಿದವರು 'ಯಾರು ಗುರೂ ಇದೂ..? ಈ ಲೆವಲ್ಲಿಗೆ ಲಿರಿಕ್ಸ್ ಬರೆಯೋದಾ?' ಅಂತ ಪ್ರಶ್ನೆ ಮಾಡ್ತಿದ್ದಾರೆ. ಆ ಹಾಡನ್ನು ನೋಡಿದರೆ ಅದೇನೋ ಮಾಸೋ, ಆಭಾಸವೋ ಒಂದೂ ಅರ್ಥ ಆಗೋದಿಲ್ಲ.. ಅಷ್ಟರಮಟ್ಟಿಗೆ ಕೇಳುಗರನ್ನು ಶಾಕ್ ಆಗಿಸುತ್ತಿದೆ. 'ಒಮ್ಮೆ ಯಾರಾದ್ರೂ ಕೇಳಲು ಶುರು ಮಾಡಿದರೆ, ಕೊನೆಯವರೆಗೂ ಕೇಳದೇ ಇರಲು ಸಾಧ್ಯವೇ ಇಲ್ಲ, ಹಾಡಿನ ವಿಡಿಯೋದ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ನೋಡಿ ಯಾರೂ ಕೂಡ ನಗದೇ ಇರಲು ಸಾಧ್ಯವೂ ಇಲ್ಲ. ನೀವೂ ಒಮ್ಮೆ ಕೇಳಿ ನೋಡಿ..
ಐಟಂ ಸಾಂಗ್ ಅಂದ್ರೆ ಈ ಲೆವಲ್ಲಿಗೂ ಇರುತ್ತಾ?
ಹೌದು, ಮಾಸ್ ಹಾಡು, ಐಟಂ ಸಾಂಗ್ ಅಂದ್ರೆ ಈ ಲೆವಲ್ಲಿಗೂ ಇರುತ್ತಾ? ಅಥವಾ ಇಂಥ ಶಾಕಿಂಗ್ ಲಿರಿಕ್ಸ್ ಕೂಡ ಇರಬಹುದಾ? ಅಂತೆಲ್ಲಾ ನೀವು ಯೋಚಿಸದಿರಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ಶ್ರೀಲೀಲಾ-ರವಿತೇಜ ಸಾಂಗ್ ಶಾಕ್ ಹಾಗೂ ನಗು ಎರಡನ್ನೂ ಸ್ವಲ್ಪ ಸಮಯದಲ್ಲಿ ಕಟ್ಟಿಕೊಡುತ್ತದೆ. ಹಾಗಿದ್ದರೆ ಯಾಕೆ ಅಷ್ಟು ವೈರಲ್ ಆಗ್ತಿದೆ? ಯಾಕೆ ಅಷ್ಟೊಂದು ಟ್ರೆಂಡಿಂಗ್ ಆಗ್ತಿದೆ? ಅಷ್ಟು ಆಭಾಸ ಎನ್ನಿಸಲು ಕಾರಣವೇನು ಅಂತ ಹುಡುಕುತ್ತಾ ಹೋದ್ರೆ..
ಆ ಹಾಡಿನ ಲಿರಿಕ್ಸ್, ಟ್ಯೂನ್, ನಟರ ಅಭಿನಯ ಹಾಗೈ ಎಲ್ಲಕ್ಕಿಂತ ಹೆಚ್ಚಾಗಿ ಬಳಿಸಿರುವ ಪದಗಳು ಎನ್ನಲೇಬೇಕು. ಆದರೆ, ಯಾರೇ ಆದರೂ.. ಇಂಥದ್ದೊಂದು ಹಾಡು ಬೇಕಿತ್ತಾ? ತೆಲುಗಿನಲ್ಲಿ ಮಾಸ್ ನಟ ರವಿತೇಜಾಗೆ ಇಂಥ ಹಾಡು ಓಕೆ ಎಂದರೂ ಕನ್ನಡದಲ್ಲಿ ಅದನ್ನು ಬಳಸುವಾಗ ಸ್ವಲ್ಪ ಸೆನ್ಸೆಟಿವ್ ಆಗಿ ಬಳಸಬಾರದೇ?' ಎನ್ನುವವಪ್ರಶ್ನೆ ಮೂಡದಿರಲು ಸಾಧ್ಯವೇ ಇಲ್ಲ..!


