MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ವೀಕ್ಷಕರ ತಲೆಗೆ ಹುಳು ಬಿಟ್ಟು 50 ಲಕ್ಷಕ್ಕೆ 10 ಕೋಟಿ ಬಾಚಿಕೊಂಡ ಕನ್ನಡದ ಸಿನಿಮಾ; ಸದೃಢ ಮನಸ್ಸಿನಿಂದ ಮೂವಿ ನೋಡಿ

ವೀಕ್ಷಕರ ತಲೆಗೆ ಹುಳು ಬಿಟ್ಟು 50 ಲಕ್ಷಕ್ಕೆ 10 ಕೋಟಿ ಬಾಚಿಕೊಂಡ ಕನ್ನಡದ ಸಿನಿಮಾ; ಸದೃಢ ಮನಸ್ಸಿನಿಂದ ಮೂವಿ ನೋಡಿ

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಜನರು ಮನ್ನಣೆ ನೀಡುತ್ತಾರೆ ಎಂಬುದನ್ನು ಸಾಬೀತುಪಡಿಸಿತು. ಈ ಚಿತ್ರವು ಕೆಳ ಮಧ್ಯಮ ವರ್ಗದ ಯುವಕನ ಕನಸುಗಳು ಮತ್ತು ವಾಸ್ತವತೆಯ ನಡುವಿನ ಗೊಂದಲವನ್ನು ಚಿತ್ರಿಸುತ್ತದೆ.

2 Min read
Mahmad Rafik
Published : May 13 2025, 12:23 PM IST
Share this Photo Gallery
  • FB
  • TW
  • Linkdin
  • Whatsapp
16

2013ರಲ್ಲಿ ಬಿಡುಗಡೆಯಾದ ಕನ್ನಡದ ಸಿನಿಮಾ, ಚಂದನವನದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಅವಕಾಶವಿದೆ ಮತ್ತು ಜನರು ಅದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಸಾಬೀತು ಮಾಡಿತ್ತು. ಏಳರಿಂದ ಎಂಟು ಪಾತ್ರಗಳ ಸುತ್ತ ಸಾಗುವ ಈ ಸಿನಿಮಾ ನಿಮ್ಮ ಮಾನಸಿಕ ಶಕ್ತಿಗೆ ಹಲವು ಸವಾಲುಗಳನ್ನು ನೀಡುತ್ತದೆ. 

26

ಚಿತ್ರದ ಕಥಾ ನಾಯಕನ ಸಹಜ ನಟನೆ ಮತ್ತು ಆತನ ಆಸೆಗಳು ವೀಕ್ಷಕರಲ್ಲಿ ಈತನು ನಮ್ಮಲ್ಲಿ ಒಬ್ಬ ಎಂಬ ಭಾವನೆಯನ್ನು ಮೂಡಿಸಲು ಯಶಸ್ವಿಯಾಗುತ್ತದೆ. ಕೆಳ  ಮಧ್ಯಮ ವರ್ಗದ ಯುವಕನೋರ್ವನ ಕನಸುಗಳನ್ನ ಬಿಚ್ಚಿಡುವ ಪ್ರಯತ್ನವನ್ನು ಸಿನಿಮಾ ನಿರ್ದೇಶಕರು ಮಾಡಿದ್ದಾರೆ. ನಿರ್ದೇಶಕರ ಪ್ರತಿಯೊಂದು ಕಲ್ಪನೆಗಳು ನಿಮ್ಮೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. 

Related Articles

Related image1
ಟ್ರಾಫಿಕ್ ನಿಯಮ ಹೇಳಿ ಕೋಟಿ ಕೋಟಿ ಬಾಚಿದ ಕನ್ನಡದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ
Related image2
1.5 ಕೋಟಿ ಸಿನಿಮಾಗೆ ಸಿಕ್ಕಿದ್ದು 43 ಕೋಟಿ: ಹೊಸಬರ ಚಿತ್ರವನ್ನು ಅಪ್ಪಿ ಮುದ್ದಾಡಿದ್ರು ಕನ್ನಡಿಗರು!
36
Lucia

Lucia

ಕನ್ನಡದ ಅದ್ಭುತ ಪ್ರತಿಭೆ ಪವನ್ ಕುಮಾರ್ ಎಂಬ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವೇ ಲೂಸಿಯಾ. 2013ರಲ್ಲಿ ಬಿಡುಗಡೆಯಾದ ಲೂಸಿಯಾ ಕಲಾವಿದರಾದ ನೀನಾಸಂ ಸತೀಶ್, ಶೃತಿ ಹರಿಹರನ್ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪರಿಚಯವನ್ನು ತಂದುಕೊಟ್ಟಿತ್ತು. ಕೇವಲ 50 ಲಕ್ಷದಲ್ಲಿ ನಿರ್ಮಾಣದ ಲೂಸಿಯಾ ಬಾಕ್ಸ್ ಆಫಿಸ್‌ನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. 

46

ಥಿಯೇಟರ್‌ನಲ್ಲಿ ಟಾರ್ಚ್ ಬಿಡುವ ಯುವಕನ ಪಾತ್ರದಲ್ಲಿ ನೀನಾಸಂ ಸತೀಶ್ ನಟಿಸಿದ್ದಾರೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಬೆಳಕು ತೋರಿಸುವ ಯುವಕನ ಮುಖವನ್ನು ಯಾರು ನೋಡುವುದಿಲ್ಲ. ಒಂದು ವೇಳೆ ನೋಡಿದ್ರೂ ಯಾರು ಆತನ ಮುಖವನ್ನು ನೆನಪಿಟ್ಟುಕೊಳ್ಳಲ್ಲ. ಹೀಗೆ ಚಿತ್ರದ ಕಥೆ ಸಾಗುತ್ತದೆ. ಹಳ್ಳಿ ಹುಡುಗ ಟಾರ್ಚ್ ಬಾಯ್ ನಿಖಿಲ್ ಕಾಣುವ ಕನಸುಗಳು ನಿಮ್ಮನ್ನು ಚಕಿತಗೊಳಿಸುತ್ತದೆ. 

56

ಲೂಸಿಯಾ ಸಿನಿಮಾ ನೋಡುತ್ತಾ ಹೋದಂತೆ ನಿಖಿಲ್ ನಿಜ ಜೀವನ ಮತ್ತು ಕನಸಿನ ಜೀವನ ಯಾವುದು ಎಂಬುದರ ಬಗ್ಗೆ ವೀಕ್ಷಕರಲ್ಲಿ ಗೊಂದಲವುಂಟಾಗುತ್ತದೆ. ಆದ್ದರಿಂದ ಈ ಸಿನಿಮಾವನ್ನು ಸದೃಢ ಮನಸ್ಸು ಮತ್ತು ಏಕಾಗ್ರತೆಯಿಂದ ವೀಕ್ಷಿಸಬೇಕು. ಪ್ರತಿ ಬಾರಿ ಸಿನಿಮಾ ವೀಕ್ಷಿಸಿದಾಗ ನಿಮಗೆ ಲೂಸಿಯಾದಲ್ಲಿ ಹೊಸತನ ಕಾಣಿಸುತ್ತದೆ. ಇನ್ನು ನಿಖಿಲ್ ಪ್ರೇಯಸಿ ಶ್ವೇತಾ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದಾರೆ. 

66

ಇನ್ನುಳಿದಂತೆ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಿಷಬ್ ಶೆಟ್ಟಿ, ಪ್ರಶಾಂತ್ ಸಿದ್ದಿ, ಹಾರ್ದಿಕ್ ಶೆಟ್ಟಿ, ಬಾಲಾಜಿ ಮನೋಹರ್, ರಾಮ್ ಮನಜ್ಜೋನಾಥ್ ಸೇರಿದಂತೆ ಹಲವು ಕಲಾವಿದರು ಲೂಸಿಯಾ ಚಿತ್ರದ ಭಾಗವಾಗಿದ್ದಾರೆ.  ಚಿತ್ರದ ತಿನ್ನಬೇಡಕಮ್ಮಿ ಮತ್ತು ಜಮ್ಮಾ ಜಮ್ಮಾ ಹಾಡು ಸಹ ನಿಮಗೆ ಇಷ್ಟವಾಗುತ್ತದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು,  ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನವಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಕನ್ನಡ ಚಲನಚಿತ್ರಗಳು
ಸಿನಿಮಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved