- Home
- Entertainment
- Sandalwood
- 1.5 ಕೋಟಿ ಸಿನಿಮಾಗೆ ಸಿಕ್ಕಿದ್ದು 43 ಕೋಟಿ: ಹೊಸಬರ ಚಿತ್ರವನ್ನು ಅಪ್ಪಿ ಮುದ್ದಾಡಿದ್ರು ಕನ್ನಡಿಗರು!
1.5 ಕೋಟಿ ಸಿನಿಮಾಗೆ ಸಿಕ್ಕಿದ್ದು 43 ಕೋಟಿ: ಹೊಸಬರ ಚಿತ್ರವನ್ನು ಅಪ್ಪಿ ಮುದ್ದಾಡಿದ್ರು ಕನ್ನಡಿಗರು!
Kannada Hit Cinema: 2015 ರಲ್ಲಿ ಬಿಡುಗಡೆಯಾದ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತು. ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿಗೆ ಟಕ್ಕರ್ ನೀಡಿದ ಈ ಚಿತ್ರ ಹೊಸಬರ ತಂಡವನ್ನು ಒಳಗೊಂಡಿತ್ತು.

ಕನ್ನಡಿಗರು ಎಂದಿಗೂ ಹೊಸ ಕಥೆಯನ್ನು ಕೈ ಬಿಡಲ್ಲ ಎಂಬುದಕ್ಕೆ ಈ ಸಿನಿಮಾ ಅತಿದೊಡ್ಡ ಉದಾಹರಣೆ. ಪಕ್ಕದ ಟಾಲಿವುಡ್ ಅಂಗಳದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಇಡೀ ವಿಶ್ವದಲ್ಲಿಯೇ ಸದ್ದು ಮಾಡುತ್ತಿತ್ತು. ಕರ್ನಾಟಕದಲ್ಲಿ ರಿಲೀಸ್ ಆದ ಈ ಹೊಸಬರ ಚಿತ್ರ ಹಂತಹಂತವಾಗಿ ವೀಕ್ಷಕರನ್ನು ಮನಗೆದ್ದು, ಪ್ಯಾನ್ ಇಂಡಿಯಾ ಸಿನಿಮಾಗೆ ತೀವ್ರ ಸ್ಪರ್ಧೆಯನ್ನು ನೀಡಿತ್ತು.
2015ರಲ್ಲಿ ಬಿಡುಗಡೆಯಾದ ಈ ಸಿನಿಮಾ ರಾಜಮೌಳಿ ನಿರ್ದೇಶನದ ಬಾಹುಬಲಿ; ದಿ ಬಿಗ್‌ನಿಂಗ್‌ಗೆ ಕರ್ನಾಟಕದಲ್ಲಿ ಟಕ್ಕರ್ ನೀಡಿತ್ತು. ನೂರಾರು ಕೋಟಿ ಬಜೆಟ್, ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಸುದೀಪ್, ರಮ್ಯಾಕೃಷ್ಣ ಸೇರಿದಂತೆ ಸ್ಟಾರ್ ಕಲಾವಿದರನ್ನು ಬಾಹುಬಲಿ ಬಂದಿತ್ತು. ಈ ಪ್ಯಾನ್ ಇಂಡಿಯಾ ಸಿನಿಮಾಗೆ 1.5 ಕೋಟಿ ಬಜೆಟ್ ಸಿನಿಮಾ ತೀವ್ರ ಸ್ಪರ್ಧೆಯನ್ನು ನೀಡಿತ್ತು. ಚಿತ್ರದ ಕಲಾವಿದರು ಸೇರಿದಂತೆ ಹೊಸಬರ ತಂಡವನ್ನು ಈ ಸಿನಿಮಾ ಹೊಂದಿತ್ತು.
ಅನೂಪ್ ಭಂಡಾರಿ ನಿರ್ದೇಶನದ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಆವಂತಿಕಾ ಶೆಟ್ಟಿ ನಟನೆಯ ರಂಗಿತರಂಗ ಸಿನಿಮಾವನ್ನು ಕನ್ನಡಿಗರು ಅಪ್ಪಿ ಮುದ್ದಾಡೋದರ ಜೊತೆಯಲ್ಲಿ ಗೆಲ್ಲಿಸಿದ್ದರು. ಈ ಹೊಸಬರ ತಂಡಕ್ಕೆ ಸಾಯಿ ಕುಮಾರ್ ಸಾಥ್ ನೀಡಿದ್ದರು. ಈ ಸಿನಿಮಾ ಬಿಡುಗಡೆಯಾದ ಹೊಸಬರೆಲ್ಲರೂ ಇಂದು ಸ್ಟಾರ್ ಕಲಾವಿದರಾಗಿದ್ದಾರೆ.
Rangitaranga
ಅಜನೀಶ್ ಲೋಕನಾಥ್ ಅವರ ಚಿತ್ರದ ಯಶಸ್ಸಿಗೆ ಕಾರಣವಾಗಿತ್ತು. ವರದಿಗಳ ಪ್ರಕಾರ, ರಂಗಿತರಂಗ 1.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಈ ಸಿನಿಮಾ 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರದ ಹಾಡುಗಳು ಎವರ್‌ಗ್ರೀನ್ ಸಾಲಿಗೆ ಸೇರ್ಪಡೆಯಾಗಿವೆ.
ಪ್ರಾದೇಶಿಕತಯನ್ನು ಹೊದ್ದುಕೊಂಡ ಈ ಸಿನಿಮಾ, ಹಲವು ವಿಶೇಷ ಕಾರಣಗಳಿಗೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಪ್ರತಿಕ್ಷಣದಲ್ಲಿ ರೋಚಕ ತಿರುವನ್ನು ಹೊಂದಿದ್ದ ರಂಗಿತರಂಗದ ಕ್ಲೈಮ್ಯಾಕ್ಸ್ ಎಲ್ಲರನ್ನು ಅಚ್ಚರಿಯನ್ನುಂಟು ಮಾಡಿತ್ತು. ಹೊಸ ನಿರ್ದೇಶಕರ ವಿಭಾಗದಲ್ಲಿ 2015ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ರಂಗಿತರಂಗ ಪಡೆದುಕೊಂಡಿದೆ.