ಇಟಲಿಯಲ್ಲಿ ರಾಧಿಕಾ-ಯಶ್; ಎಂಜಾಯ್ ಎಂದ ಸಂಸದೆ ಸುಮಲತಾ ಅಂಬರೀಶ್!
ಪತಿ ಜೊತೆ ಜಾಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಸುಮಲತಾ...

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸದ್ಯ ಜಾಲಿ ಮೋಡ್‌ನಲ್ಲಿದ್ದಾರೆ, ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ವಿದೇಶ ಪ್ರಯಾಣ ಮಾಡುತ್ತಿರುವ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್ ಸ್ಥಳದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ ಆದರೆ ಸ್ಥಳ ಯಾವುದು ಎಂದು ರಿವೀಲ್ ಮಾಡಿಲ್ಲ.
'ಚೀಸ್ ಮತ್ತು ಜಿಲಾಟೋ ಅತಿ ಹೆಚ್ಚಿರುವ ಸ್ಥಳವಿದು.....ಇಲ್ಲಿ ಸೂರ್ಯ ತುಂಬಾ ತಡವಾಗಿ ಹೊರ ಬರುತ್ತಾನೆ. ನಾವು ಸದ್ಯಕ್ಕೆ ನಾಟ್ ರೀಚಬಲ್..ನಮ್ಮ ರಾಜ್ಯದಿಂದ ತುಂಬಾ ದೂರದಲ್ಲಿದ್ದೀವಿ'ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ರಾಧಿಕಾ ಪೋಸ್ಟ್‌ಗೆ 'ಇಟಲಿ!! ನೀವಿಬ್ಬರೂ ಲಕ್ಕಿ.... ಸಖತ್ ಮಜಾ ಮಾಡಿ ಎಂಜಾಯ್'ಎಂದು ಸಂಸದೆ ಸುಮಲತಾ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಸ್ಥಳ ಯಾವುದು ಎಂದು ರಿವೀಲ್ ಆಯ್ತು.
ಇಟಲಿ ಕಲರ್‌ಫುಲ್ ರಸ್ತೆಗಳನ್ನು ನಿಂತುಕೊಂಡು ರಾಧಿಕಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಫ್ಲೋರಲ್ ಪಿಂಕ್ ಆಂಡ್ ವೈಟ್ ಫ್ರಾಕ್‌ನಲ್ಲಿ ಮಿಂಚಿದ್ದಾರೆ.
ಸಾಮಾನ್ಯವಾಗಿ ರಾಧಿಕಾ ಮತ್ತು ಯಶ್ ಒಂದೇ ಬಣ್ಣದ ಡ್ರೆಸ್ ಧರಿಸುತ್ತಾರೆ ಆದರೆ ಮೊದಲ ಬಾರಿ ಕಾಂಬಿನೇಷನ್ ಡ್ರೆಸ್ ಧರಿಸಿದ್ದಾರೆ. ಯಶ್ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.