- Home
- Entertainment
- Sandalwood
- ಧ್ರುವ ಸರ್ಜಾ ಜೊತೆಗೆ ಲವ್ ಸ್ಟೋರಿ ಮಾಡುತ್ತಿರುವುದು ನನ್ನ ಖುಷಿ: ನಭಾ ನಟೇಶ್ ಹೊಸ ‘ಕೆಮಿಸ್ಟ್ರಿ’
ಧ್ರುವ ಸರ್ಜಾ ಜೊತೆಗೆ ಲವ್ ಸ್ಟೋರಿ ಮಾಡುತ್ತಿರುವುದು ನನ್ನ ಖುಷಿ: ನಭಾ ನಟೇಶ್ ಹೊಸ ‘ಕೆಮಿಸ್ಟ್ರಿ’
ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿರುವ ನಟಿ ನಭಾ ನಟೇಶ್, ಧ್ರುವ ಸರ್ಜಾ ಜೊತೆ 'ಕೆಮಿಸ್ಟ್ರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹೊಸ ಲವ್ ಸ್ಟೋರಿ ಬಗ್ಗೆ ನಟಿ ಏನು ಹೇಳಿದ್ದಾರೆ?

ಪ್ರೇಮ ಕತೆಯ ಚಿತ್ರ
‘ತುಂಬಾ ದಿನಗಳ ನಂತರ ನಾನು ಕನ್ನಡಕ್ಕೆ ಮರಳಿದ್ದೇನೆ ಎನ್ನುವುದರ ಜೊತೆಗೆ ಧ್ರುವ ಸರ್ಜಾ ಅವರ ಜೊತೆಗೆ ಪ್ರೇಮ ಕತೆಯ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬುದು ನನ್ನ ಖುಷಿ ಹಾಗೂ ಎಕ್ಸೈಟ್ಮೆಂಟ್ಗೆ ಕಾರಣ’.
‘ಕೆಮಿಸ್ಟ್ರಿ’ ಚಿತ್ರಕ್ಕೆ ಜೋಡಿ
ಹೀಗೆ ಹೇಳಿಕೊಂಡಿರುವುದು ನಭಾ ನಟೇಶ್. ಧ್ರುವ ಸರ್ಜಾ ಹಾಗೂ ನಭಾ ನಟೇಶ್ ಅವರು ‘ಕೆಮಿಸ್ಟ್ರಿ’ ಚಿತ್ರಕ್ಕೆ ಜೋಡಿಯಾಗುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಆಗಿದೆ.
ತೆಲುಗು ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೆ
ಈ ಕುರಿತು ನಭಾ ನಟೇಶ್, ತೆಲುಗಿನಲ್ಲಿ ಇಸ್ಮಾರ್ಟ್ ಶಂಕರ್ ಚಿತ್ರದ ಯಶಸ್ಸಿನ ನಂತರ ಹೆಚ್ಚಾಗಿ ತೆಲುಗು ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೆ. ತುಂಬಾ ದಿನಗಳ ನಂತರ ಕೆಮಿಸ್ಟ್ರಿ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದೇನೆ.
ತುಂಬಾ ಎಕ್ಸ್ಟೈಟ್ ಆಗುತ್ತಿರುವ ವಿಷಯ
ಧ್ರುವ ಸರ್ಜಾ ಜೊತೆಗೆ ಲವ್ ಸ್ಟೋರಿಗೆ ನಾಯಕಿ ಆಗಿದ್ದೇನೆ ಎಂಬುದು ತುಂಬಾ ಎಕ್ಸ್ಟೈಟ್ ಆಗುತ್ತಿರುವ ವಿಷಯ. ಈಗ ಇಂಥ ಫ್ರೆಶ್ ಹಾಗೂ ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾಗಳ ಅಗತ್ಯ ಇದೆ ಎನ್ನುತ್ತಾರೆ. ಇನ್ನು ನಭಾ ನಟೇಶ್ ಅಭಿನಯದ ತೆಲುಗಿನ ‘ಸ್ವಯಂಭು’ ಸಿನಿಮಾ ತೆರೆಗೆ ಸಿದ್ದವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





