- Home
- Entertainment
- Sandalwood
- ಚಿತ್ರರಂಗ ಬಿಡುವ ಗೊಂದಲದಲ್ಲಿದ್ದ ನಟಿ ಕಾಶಿಮಾಗೆ ಹೊಸ ಭರವಸೆ ನೀಡಿದ್ದು 'ನೀ ನಂಗೆ ಅಲ್ಲವಾ'
ಚಿತ್ರರಂಗ ಬಿಡುವ ಗೊಂದಲದಲ್ಲಿದ್ದ ನಟಿ ಕಾಶಿಮಾಗೆ ಹೊಸ ಭರವಸೆ ನೀಡಿದ್ದು 'ನೀ ನಂಗೆ ಅಲ್ಲವಾ'
ಮನೋಜ್ ಪಿ. ನಡಲಮನೆ ನಿರ್ದೇಶನದ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ್ ದೇವಸಮುದ್ರ ನಿರ್ಮಾಣದ ಈ ಸಿನಿಮಾದಲ್ಲಿ ರಾಹುಲ್ ಆರ್ಕಾಟ್ ಮತ್ತು ಕಾಶಿಮಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

ಟ್ರೇಲರ್ ಬಿಡುಗಡೆ
ಮನೋಜ್ ಪಿ ನಡಲಮನೆ ನಿರ್ದೇಶನದ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜಯರಾಮ್ ದೇವಸಮುದ್ರ ನಿರ್ಮಾಪಕರು. ನ.13ಕ್ಕೆ ತೆರೆಗೆ ಬರುತ್ತಿದೆ. ರಾಹುಲ್ ಆರ್ಕಾಟ್, ಕಾಶಿಮಾ ಚಿತ್ರದ ಜೋಡಿ.
ಪ್ರತಿಭೆಗಳ ಕನಸುಗಳಿಗೆ ಬೆಂಬಲ
ಜಯರಾಮ್ ದೇವಸಮುದ್ರ, ‘ಹೊಸ ಪ್ರತಿಭೆಗಳ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿದೆ’ ಎಂದರು.
ಚಿತ್ರ ನೋಡಿ ಪ್ರೋತ್ಸಾಹಿಸಿ
ಮನೋಜ್ ಪಿ. ನಡಲಮನೆ, ‘ಒಂದು ಸಿನಿಮಾ ಚೆನ್ನಾಗಿದೆಯೇ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ. ನಮ್ಮ ತಂಡ ಪ್ರಾಮಾಣಿಕವಾಗಿ ಪರಿಶ್ರಮ ಹಾಕಿದ್ದು, ಎಲ್ಲರು ನಮ್ಮ ಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದರು.
ಭರವಸೆ ನೀಡಿದ ಚಿತ್ರ
ಕಾಶಿಮಾ, ‘ಈ ಸಿನಿಮಾ ನನ್ನ ಪಾಲಿಗೆ ವಿಶೇಷ. ಚಿತ್ರರಂಗದಲ್ಲಿ ಮುಂದುವರಿಯಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಮತ್ತೆ ಸಿನಿಮಾ ಮಾಡುವ ಭರವಸೆ ನೀಡಿದ ಚಿತ್ರವಿದು’ ಎಂದರು.
ನವೆಂಬರ್ 13ಕ್ಕೆ ತೆರೆಗೆ
ರಾಹುಲ್ ಆರ್ಕಾಟ್, ಮಂಜುನಾಥ ಹೆಗಡೆ, ಸಂಗೀತ ನಿರ್ದೇಶಕ ಸೂರಜ್ ದೇಸಾಯಿ, ಛಾಯಾಗ್ರಾಹಕ ಉದಯ್ ಲೀಲಾ ಹಾಗೂ ಸೌಂಡ್ ಎಂಜಿನಿಯರ್ ನವೀನ್ ಕುಮಾರ್ ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





