ಕನ್ನಡದ ಸ್ಟಾರ್‌ ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್‌ ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು.

ಕನ್ನಡದ ಸ್ಟಾರ್‌ ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್‌ ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು. ಕೆಲವು ಸ್ಟಾರ್‌ಗಳು ಸ್ಯಾಟಲೈಟ್‌ ಹಕ್ಕು ಕೊಟ್ಟರೆ ಸಾಕು ಎನ್ನುವ ಕಾಲವೂ ಇತ್ತು. ಆದರೆ ಈಗ ಕಾಲ ಉಲ್ಟಾ ಆಗಿದೆ. ಸ್ಯಾಟಲೈಟ್‌, ಓಟಿಟಿಯಿಂದ ಕನ್ನಡದ ಬಿಗ್‌ ಬಜೆಟ್‌ ಸಿನಿಮಾಗಳಿಗೂ ಕಾಸು ಹುಟ್ಟುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲನೇಯದಾಗಿ ಪ್ರಸಾರ ಮಾಡುವುದೇ ಕಷ್ಟ. ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಪ್ರಸಾರ ಮಾಡಲ್ಲ. ಅಮೆಜಾನ್‌ ಪ್ರೈಮ್‌ ‘ಪೇ ಪರ್‌ ವ್ಯೂ’ ಮಾದರಿಯಲ್ಲಿ ಪ್ರಸಾರ ಮಾಡಬಹುದು. ಸದ್ಯಕ್ಕೆ ಇರುವ ಒಂದೇ ಒಂದು ಆಶಾಕಿರಣವೆಂದರೆ ಜೀ5. ಅವರೂ ಬೆರಳೆಣಿಕೆ ಸಿನಿಮಾ ಮಾತ್ರ ಖರೀದಿಸುತ್ತಾರೆ.

ಅದೇ ರೇಟ್‌ಗೆ ಮಾರಾಟ

ಇದೀಗ ಬಂದ ಸುದ್ದಿ ಪ್ರಕಾರ, ರೂ.100+ ಕೋಟಿ ಬಜೆಟ್‌ನ ‘ಕೆಡಿ’ ಸಿನಿಮಾದ ಸ್ಯಾಟಲೈಟ್‌ ಮತ್ತು ಓಟಿಟಿ ಹಕ್ಕು ರೂ.7 ಕೋಟಿಗೆ ಮಾರಾಟವಾಗಿದೆ. ಬಲ್ಲ ಮೂಲಗಳ ಪ್ರಕಾರ ದರ್ಶನ್‌ ಅಭಿನಯದ ‘ದಿ ಡೆವಿಲ್‌’ ಚಿತ್ರದ ಸ್ಯಾಟಲೈಟ್‌ ಮತ್ತು ಓಟಿಟಿ ಹಕ್ಕು ಕೂಡ ಅದೇ ರೇಟ್‌ಗೆ ಮಾರಾಟವಾಗಿದೆ.

ಕಡಿಮೆಯಾದರೂ ನಿರ್ಮಾಪಕರು ಬಂದಿದ್ದು, ಬರಲಿ ಎಂಬ ನಿರ್ಧಾರವನ್ನು ತೆಗೆದುಕೊಂಡು ಇದಕ್ಕೆ ಒಪ್ಪಿದ್ದಾರೆ. ಅವರ ಬಳಿ ಬೇರೆ ದಾರಿಯಾದರೂ ಏನಿದೆ, ಅಲ್ಲವೇ! ಇದಕ್ಕೆ ಪರಿಹಾರ ಏನು ಅನ್ನುವುದನ್ನು ಚಿತ್ರರಂಗ ಒಗ್ಗಟ್ಟಾಗಿ ಕುಳಿತು ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಕಷ್ಟಗಳು ಮುಂದುವರಿಯುತ್ತವೆ.