MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Pinaka Movie: ಯಾವ ಸಿನಿಮಾದಲ್ಲೂ ಇರದ ಕ್ಲೈಮ್ಯಾಕ್ಸ್‌ 'ಪಿನಾಕ'ದಲ್ಲಿ ಇರುತ್ತೆ: Golden Star Ganesh

Pinaka Movie: ಯಾವ ಸಿನಿಮಾದಲ್ಲೂ ಇರದ ಕ್ಲೈಮ್ಯಾಕ್ಸ್‌ 'ಪಿನಾಕ'ದಲ್ಲಿ ಇರುತ್ತೆ: Golden Star Ganesh

Golden Star Ganesh Pinaka Kannada Movie: ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ, ಗೋಲ್ಟನ್ ಸ್ಟಾರ್ ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.  

2 Min read
Author : Padmashree Bhat
Published : Jul 06 2026, 06:26 PM IST
Share this Photo Gallery
  • FB
  • TW
  • Linkdin
  • Whatsapp
14
ಮಕ್ಕಳ ಜೊತೆ ಜನ್ಮದಿನ ಆಚರಣೆ ಮಾಡಿದ 'ಗಣಿ'
Image Credit : Asianet News

ಮಕ್ಕಳ ಜೊತೆ ಜನ್ಮದಿನ ಆಚರಣೆ ಮಾಡಿದ 'ಗಣಿ'

ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳೊಂದಿಗೆ ಗಣೇಶ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದರೊಟ್ಟಿಗೆ ‘ಪಿನಾಕ’ ಸಿನಿಮಾದ ಟೀಸರ್ ಸಹ ಅನಾವರಣವಾಯಿತು. ಗೋಲ್ಡನ್ ಮೆಗಾ ಸ್ಟಾರ್ ಅಭಿಮಾನಿಗಳು ಟೀಸರ್ ನೋಡಿ ಗಣೇಶ್ ಅವರ ಹೊಸ ಲುಕ್‌ಗೆ ಫಿದಾ ಆಗಿದ್ದಾರೆ. ಟೀಸರ್ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನಿರ್ದೇಶಕ ಧನಂಜಯ್ ಏನಂದ್ರು?
Image Credit : Asianet News

ನಿರ್ದೇಶಕ ಧನಂಜಯ್ ಏನಂದ್ರು?

ನಿರ್ದೇಶಕ ಧನಂಜಯ್ ಮಾತನಾಡಿ, “ನಾನು ಹಲವು ವರ್ಷಗಳಿಂದ ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿದ್ದೇನೆ. ಈ ಸಿನಿಮಾ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಗಣೇಶ್ ಅವರಿಗೆ ಧನ್ಯವಾದ. ಇನ್ನೂ, ನಾನು ಈವರೆಗೂ ಪಿನಾಕ ಸಿನಿಮಾ ಕರಿತು ಹೆಚ್ಚು ಮಾತನಾಡಿರಲಿಲ್ಲ. ಏಕೆಂದರೆ ನಾನು ಮಾತಾಡುವುದು ಬೇಡ ಕೆಲಸ ಮಾತನಾಡಲಿ ಎಂದು. ಈಗ ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಮನತುಂಬಿ ಬಂದಿದೆ. ಟೀಸರ್ ನಲ್ಲಿ ಹೆಚ್ಚು ಹೇಳಿಲ್ಲ. ಕೇವಲ 30% ಮಾತ್ರ ಚಿತ್ರದ ಕುರಿತು ಹೇಳಿದ್ದೇವೆ. ಚಿತ್ರದಲ್ಲಿ ಇನ್ನೂ ಬಹಳಷ್ಟಿದೆ. ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಮುಂಬರುವ ಟ್ರೇಲರ್‌ನಲ್ಲೂ ಚಿತ್ರದ ಕುರಿತು ಇನ್ನಷ್ಟು ತಿಳಿಸುವುದಾಗಿ ಹೇಳಿದರು.

Related Articles

Related image1
Golden Star Ganesh 'ಬೃಂದಾ ವಿಹಾರಿ'ಯಾದ ರಾಮಾಚಾರಿ ಸೀರಿಯಲ್‌ ನಟಿ ದೇವಿಕಾ ಭಟ್; ರಾಧಾ ರಾಧಾ ಎಂದ ವೀಕ್ಷಕರು
Related image2
Golden Star Ganesh: ಗಣೇಶ್ ಫಿಲಂನಿಂದ ಸೋನು ನಿಗಮ್ ಹಾಡಿಗೆ ಕೊಕ್, ನಮ್ಮ ಭಾಷೆಗೆ ಗೌರವ ಕೊಡದವರ ಹಾಡು ಬೇಡ ಎಂದ ಗೋಲ್ಡನ್ ಸ್ಟಾರ್!
34
ಗೋಲ್ಡನ್ ಸ್ಟಾರ್ ಗಣೇಶ್ ಏನಂದ್ರು?
Image Credit : Asianet News

ಗೋಲ್ಡನ್ ಸ್ಟಾರ್ ಗಣೇಶ್ ಏನಂದ್ರು?

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, "ಮುಂಗಾರು ಮಳೆ ಸಿನಿಮಾದಿಂದ ನಾಯಕನಾಗಿ ಶುರುವಾದ ನನ್ನ ಸಿನಿ ಜರ್ನಿ ಈ ಹಂತ ತಲುಪಲು ದೇವರ, ತಂದೆ - ತಾಯಿ‌ ಹಾಗೂ ಅಭಿಮಾನಿಗಳ ಆಶೀರ್ವಾದವೇ ಕಾರಣ. ಇನ್ನೂ‌, ನನ್ನ ಮಕ್ಕಳು " ಕಾರ್ತಿಕೇಯ 2" ಸಿನಿಮಾವನ್ನು ನೋಡಿದಾಗ, ನೀವು ಈತರಹದ ಚಿತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತಿದ್ದರು. ನಾನು ಶಿವ ಭಕ್ತ. "ಪಿನಾಕ" ಸಹ ಶಿವನ ಕುರಿತಾದ ಸಿನಿಮಾ. ಇಂತಹ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. ಈ ಚಿತ್ರದ ಕುರಿತು ನಿರ್ಮಾಪಕರು ನನ್ನ ಬಳಿ ಮಾತನಾಡಿದಾಗ, ಈ ಕಥೆ ಬಹಳ ಬಜೆಟ್ ಕೇಳುತ್ತದೆ. ನಿಮಗೆ ಹೊರೆಯಾಗಬಾರದು ಎಂದು ಹೇಳಿದೆ. ಅವರು ಇಲ್ಲ ಕಥೆ ಕೇಳುವ ಬಜೆಟ್ ಹಾಕಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು. 

ಈ ಚಿತ್ರದ ಚಿತ್ರೀಕರಣದಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಕ್ಲೈಮ್ಯಾಕ್ಸ್ ಅಂತು ನಾನು ಈವರೆಗೂ ಯಾವ ಚಿತ್ರದಲ್ಲೂ ನೋಡಿರದ ಕ್ಲೈಮ್ಯಾಕ್ಸ್ ಎನ್ನಬಹುದು. 12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನಗಳ ಚಿತ್ರೀಕರಣ ಮಾಡಿದ್ದೇವೆ. "ಪಿನಾಕ", ಚಾರುಕೇಶ ರಾಜನ ಕಥೆ. ಈ ಚಿತ್ರ ಚೆನ್ನಾಗಿ ಮೂಡಿಬರಲು ತಂಡದ ಸಹಕಾರವೇ ಕಾರಣ. ಈ ಚಿತ್ರದಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ ಅವರಂತಹ ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ. ಅಕ್ಟೋಬರ್ 2ರಂದು ತೆರೆಗೆ ಬರುತ್ತಿರುವ ಈ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡಲಿದೆ ಎಂದರು.

44
ಪೌರಾಣಿಕ ಹಿನ್ನೆಲೆಯಿರುವ ಸಿನಿಮಾ
Image Credit : Asianet News

ಪೌರಾಣಿಕ ಹಿನ್ನೆಲೆಯಿರುವ ಸಿನಿಮಾ

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ರಾಜೇಶ್ ಮಾತನಾಡಿ, ‘ಗಣೇಶ್‍ ಜೊತೆಗೆ ಸಿನಿಮಾ ಮಾಡಬೇಕು ಎಂಬುದು ನನ್ನ ಹಾಗೂ ನನ್ನ ಸಹೋದರನ (ವಿಶ್ವಪ್ರಸಾದ್‍) ಆಸೆಯಾಗಿತ್ತು. ನಮ್ಮ ಸಂಸ್ಥೆಯ "ಕಾರ್ತಿಕೇಯ 2" ಚಿತ್ರದ ಬಗ್ಗೆ ಗಣೇಶ್ ಅವರು ತುಂಬಾ ಮೆಚ್ಚುಗೆಯ ಮಾತುಗಳಾಡಿದರು. ಅವರ ಮಗ ವಿಹಾನ್‌ಗೂ ಆ ಚಿತ್ರ ಬಹಳ ಇಷ್ಟವಾಯಿತಂತೆ. ಹಾಗಾಗಿ ನಾವು ಸಹ ಪೌರಾಣಿಕ ಹಿನ್ನೆಲೆಯಿರುವ, ಶಿವನ ಕುರಿತಾದ ಕಥಾಹಂದರವಿರುವ ಈ ಕಥೆ ಆಯ್ಕೆ ಮಾಡಿಕೊಂಡೆವು. ಚಿತ್ರತಂಡದ ಸದಸ್ಯರ ಶ್ರಮದಿಂದ "ಪಿನಾಕ" ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಜನರಿಗೂ ಈ ಚಿತ್ರ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು. ವಿಜಯ ರಾಜೇಶ್ ಅವರು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಸಹ ನಿರ್ಮಾಪಕಿ ಕೃತಿ ಪ್ರಸಾದ್ ಅವರು ಮಾತನಾಡಿ, ಉತ್ತಮ ಚಿತ್ರ ಮೂಡಿಬರಲು ಸಹಕಾರ ನೀಡಿದ "ಪಿನಾಕ" ಚಿತ್ರತಂಡದವರಿಗೆ ಧನ್ಯವಾದ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಸಿನಿಮಾ

Latest Videos
Recommended Stories
Recommended image1
ಬಾದ್‌ಷಾ ಕಿಚ್ಚ ಸುದೀಪ್‌ಗೆ ಜುಲೈ 6 ಯಾಕೆ ಅಷ್ಟು ವಿಶೇಷ? ಈ ಎರಡು ಸಿನಿಮಾಗಳಲ್ಲಿದೆ ಆ ಉತ್ತರ!
Recommended image2
ಪುನರ್ಜನ್ಮದ ಕಥೆಯೊಂದಿಗೆ ಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್: 'ಪಿನಾಕ' ಟೀಸರ್‌ನಲ್ಲಿ ರೋಚಕ ಝಲಕ್
Recommended image3
Daali Dhananjaya ಪುತ್ರನ ಮೊದಲ ಫೋಟೋ ರಿವೀಲ್: ಅಭಿಮಾನಿಗಳ ಮನ ಗೆದ್ದ 'ಮದರ್ ಪ್ರಾಮಿಸ್' ಪೋಸ್ಟ್
Related Stories
Recommended image1
Golden Star Ganesh 'ಬೃಂದಾ ವಿಹಾರಿ'ಯಾದ ರಾಮಾಚಾರಿ ಸೀರಿಯಲ್‌ ನಟಿ ದೇವಿಕಾ ಭಟ್; ರಾಧಾ ರಾಧಾ ಎಂದ ವೀಕ್ಷಕರು
Recommended image2
Golden Star Ganesh: ಗಣೇಶ್ ಫಿಲಂನಿಂದ ಸೋನು ನಿಗಮ್ ಹಾಡಿಗೆ ಕೊಕ್, ನಮ್ಮ ಭಾಷೆಗೆ ಗೌರವ ಕೊಡದವರ ಹಾಡು ಬೇಡ ಎಂದ ಗೋಲ್ಡನ್ ಸ್ಟಾರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved