MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Dr. Rajkumar​ ಉರ್ಫ್​ ಮುತ್ತರಾಜ ಆದ ನಾನು: 1985ರ ಕುತೂಹಲದ ಜಾಹೀರಾತಿನಲ್ಲಿ ಏನಿದೆ ನೋಡಿ

Dr. Rajkumar​ ಉರ್ಫ್​ ಮುತ್ತರಾಜ ಆದ ನಾನು: 1985ರ ಕುತೂಹಲದ ಜಾಹೀರಾತಿನಲ್ಲಿ ಏನಿದೆ ನೋಡಿ

ನಟ ಪುನೀತ್ ರಾಜ್‌ಕುಮಾರ್ ಅವರ ಮೊದಲ ಹೆಸರು ಲೋಹಿತ್ ಆಗಿತ್ತು. 'ಲೋಹಿತ್' ಎಂದರೆ ಅಲ್ಪಾಯು ಎಂಬ ಅರ್ಥವಿದ್ದ ಕಾರಣ, ಚೌಡೇಶ್ವರಿ ದೇವಿಯ ಸಲಹೆಯಂತೆ ಅವರ ಹೆಸರನ್ನು 'ಪುನೀತ್' ಎಂದು ಬದಲಾಯಿಸಲಾಯಿತು. 1985ರಲ್ಲಿ ಡಾ.ರಾಜ್‌ಕುಮಾರ್ ಅವರು ಪತ್ರಿಕೆಯಲ್ಲಿ ನೀಡಿದ್ದ ಜಾಹೀರಾತಿನ ತುಣುಕು ವೈರಲ್ ಆಗಿದೆ.

2 Min read
Author : Suchethana D
Published : Mar 23 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
16
ಪುನೀತ್​ ಹುಟ್ಟುಹಬ್ಬ
Image Credit : Social Media

ಪುನೀತ್​ ಹುಟ್ಟುಹಬ್ಬ

ಇದೇ 17ರಂದು ನಟ ಪುನೀತ್​ ರಾಜ್​ಕುಮಾರ್​ ಅವರ 51ನೇ ಹುಟ್ಟುಹಬ್ಬವನ್ನು ಅವರ ಸ್ಮರಣೆಯಲ್ಲಿಯೇ ಅಭಿಮಾನಿಗಳು, ಕುಟುಂಬಸ್ಥರು ಆಚರಿಸಿಕೊಂಡರು. ಅವರನ್ನು ಸ್ಮರಿಸುತ್ತಾ ಅಭಿಮಾನಿಗಳು ಭಾವುಕರಾದರು. ಅಷ್ಟಕ್ಕೂ ಎಲ್ಲರ ನೆಚ್ಚಿನ ಅಪ್ಪು ಎಲ್ಲರನ್ನೂ ಅಗಲಿ ನಾಲ್ಕು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ.

26
ಲೋಹಿತ್​ ಆಗಿದ್ದ ಅಪ್ಪು
Image Credit : AFP

ಲೋಹಿತ್​ ಆಗಿದ್ದ ಅಪ್ಪು

ಈ ಭೂಮಿಯ ಮೇಲೆ ಜನ್ಮ ತಾಳಿದಾಗಲೇ, ಇಂತಿಷ್ಟೇ ಆಯಸ್ಸು ಎಂದು ಭಗವಂತ ಬರೆದಾಗಿರುತ್ತದೆ. ಉಳಿದೆಲ್ಲವೂ ಒಂದು ನೆಪವಾಗಿಬಿಡುತ್ತದೆ ಅಷ್ಟೇ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ಪುನೀತ್​ ರಾಜ್​ ಅವರು ಗುರುತಿಸಿಕೊಂಡದ್ದು ಬಾಲನಟನಾಗಿ ಲೋಹಿತ್​ ಎಂಬ ಹೆಸರಿನಲ್ಲಿ. ಲೋಹಿತ್​ ಅವರ ಹುಟ್ಟು ಹೆಸರು. ಇದೇ ಹೆಸರನ್ನು ಬೆಂಗಳೂರಿನಲ್ಲಿ ಇರುವ ಫಾರ್ಮ್​ಗೆ ಲೋಹಿತ್​ ಫಾರ್ಮ್​ ಎಂದೇ ಹೆಸರು ಇಡಲಾಗಿತ್ತು.

Related Articles

Related image1
Appu Birthday: ಪುನೀತ್​ ರಾಜ್ ಎದುರು ಅಂದು ರಶ್ಮಿಕಾ ಕನ್ನಡದಲ್ಲಿ ಹೀಗೆಲ್ಲಾ ಮಾತಾಡಿದ್ರಾ? ಆ ವಿಡಿಯೋ ವೈರಲ್​
Related image2
Puneeth's Lifespan Secret: ಪುನೀತ್​ ಆಯಸ್ಸು ಅಂದೇ ಹೇಳಿದ್ದ ಚೌಡೇಶ್ವರಿ ದೇವಿ: ಪೂಜೆಯ ರಹಸ್ಯ ತೆರೆದಿಟ್ಟ ಮಾವ ಚಿನ್ನೇಗೌಡ್ರು...
36
ಚೌಡೇಶ್ವರಿ ದೇವಿ ಪೂಜೆ
Image Credit : AFP

ಚೌಡೇಶ್ವರಿ ದೇವಿ ಪೂಜೆ

ಅಂದು ಚೌಡೇಶ್ವರಿ ದೇವಿ ಪೂಜೆ ನಡೆಯುತ್ತಿದ್ದಾಗ, ದೇವಿಯೇ ಅಲ್ಪಾಯು ಬಗ್ಗೆ ಹೇಳಿದ್ದಳು. ಲೋಹಿತ್​ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ ಪುನೀತ್​ ಎಂದು ನಾಮಕರಣ ಮಾಡುವಂತೆ ಸಲಹೆ ಬಂದಿತ್ತು. ಕೊನೆಗೆ ಲೋಹಿತ್​ಗೆ ಪುನೀತ್​ ಎಂದು ಹೆಸರು ಬದಲಾಯಿಸಿ, ಆ ಫಾರ್ಮ್​ ಹೆಸರನ್ನು ಕೂಡ ಬದಲು ಮಾಡಲಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪುನೀತ್​ ಎಂದು ಹೆಸರು ಬದಲಾದರೂ ಅಲ್ಪಾಯುವಿನಲ್ಲಿಯೇ ಹೋಗಿಬಿಟ್ಟರು ಅಪ್ಪು.

46
ಪತ್ರಿಕೆ ತುಣುಕು ವೈರಲ್​
Image Credit : Social Media

ಪತ್ರಿಕೆ ತುಣುಕು ವೈರಲ್​

ಅಂದಹಾಗೆ, 1985ರಲ್ಲಿ, ಅವರ ಹೆಸರನ್ನು ಲೋಹಿತ್​ನಿಂದ ಪುನೀತ್​ ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದರು ಡಾ.ರಾಜ್​ಕುಮಾರ್​. ಆ ಪತ್ರಿಕೆಯ ತುಣುಕನ್ನು ಮಲ್ಲಿಕಾರ್ಜುನ ಮೇಟಿ ಎನ್ನುವವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

56
ಡಾ.ರಾಜ್​ಕುಮಾರ್​ ಉರ್ಫ್​ ಎಸ್​ಪಿ ಮುತ್ತುರಾದ ಆದ ನಾನು
Image Credit : AFP

ಡಾ.ರಾಜ್​ಕುಮಾರ್​ ಉರ್ಫ್​ ಎಸ್​ಪಿ ಮುತ್ತುರಾದ ಆದ ನಾನು

ಇದರಲ್ಲಿ, ಡಾ.ರಾಜ್​ಕುಮಾರ್​ ಅವರು, ಡಾ.ರಾಜ್​ಕುಮಾರ್​ ಉರ್ಫ್​ ಎಸ್​ಪಿ ಮುತ್ತುರಾದ ಆದ ನಾನು, ನನ್ನ ಮಗ ಮಾಸ್ಟರ್​  ಲೋಹಿತನ ಹೆಸರನ್ನು ಇಂದಿನಿಂದ ಅಂದರೆ 16.3.1985ರಿಂದ ಮಾಸ್ಟರ್​ ಪುನೀತಾ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಶ್ರೀ ಎಸ್​.ಬಿ.ಚಂದ್ರಶೇಖರ್​ರವ್ ಸಮಕ್ಷಮದಲ್ಲಿ ಪ್ರಮಾಣ ಸಹ ಈ ದಿನ ಮಾಡಿಸಿರುತ್ತೇನೆ ಎಂದು ಬರೆಯಲಾಗಿದೆ.

66
ಲೋಹಿತ್​ ಆಗಿ ಚಿತ್ರಗಳು...
Image Credit : Asianet News

ಲೋಹಿತ್​ ಆಗಿ ಚಿತ್ರಗಳು...

ಪುನೀತ್ ಆರು ತಿಂಗಳು ಮಗುವಿದ್ದಾಗ 1976ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಕಾಣಿಸಿಕೊಂಡರು. ಇದಾದ ಬಳಿಕ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ', ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ',ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು' ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಕಾಣಿಸಿಕೊಂಡರು. ಇವರು ನಟಿಸಿದ್ದ `ಚಲಿಸುವ ಮೋಡಗಳು' ಮತ್ತು `ಎರಡು ನಕ್ಷತ್ರಗಳು' ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದ್ದವು. ಇವುಗಳಲ್ಲಿ ಬಾಲ ಕಲಾವಿದನಾಗಿ ಲೋಹಿತ್​ ಎಂದೇ ಫೇಮಸ್​ ಆದವರು ಅಪ್ಪು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪುನೀತ್ ರಾಜ್‌ಕುಮಾರ್
ಡಾ. ರಾಜ್‌ಕುಮಾರ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
Latest Videos
Recommended Stories
Recommended image1
ಯಕ್ಷದ್ರುವರ ಧ್ವನಿಯಲ್ಲಿ 'ಬನ' ಚಿತ್ರದ ಮೊದಲ 'ನಾಗ' ಹಾಡಿಗೆ ಮನಸೋತ ತುಳುನಾಡು
Recommended image2
ರವಿಚಂದ್ರನ್​ ರೀತಿ ಉಪ್ಪಿನಕಾಯಿ ಬಾಟ್ಲಿ ತೋರಿಸಿದ್ರೆ ಸೆರಗು ಸರ್ಸೋ ಸಮಸ್ಯೆನೇ ಆಗ್ತಿರಲಿಲ್ಲ- ಜಯಮಾಲಾ
Recommended image3
ಕಿಕ್ ಶುರು.. 3ನೇ ದಿನ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ 3’ ಮ್ಯಾಜಿಕ್: ವೀಕೆಂಡ್‌ನಲ್ಲಿ ಬಂತು ಕೋಟಿ ಕೋಟಿ ಹಣ!
Related Stories
Recommended image1
Appu Birthday: ಪುನೀತ್​ ರಾಜ್ ಎದುರು ಅಂದು ರಶ್ಮಿಕಾ ಕನ್ನಡದಲ್ಲಿ ಹೀಗೆಲ್ಲಾ ಮಾತಾಡಿದ್ರಾ? ಆ ವಿಡಿಯೋ ವೈರಲ್​
Recommended image2
Puneeth's Lifespan Secret: ಪುನೀತ್​ ಆಯಸ್ಸು ಅಂದೇ ಹೇಳಿದ್ದ ಚೌಡೇಶ್ವರಿ ದೇವಿ: ಪೂಜೆಯ ರಹಸ್ಯ ತೆರೆದಿಟ್ಟ ಮಾವ ಚಿನ್ನೇಗೌಡ್ರು...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved