ಅಲ್ಲಿಗೆ ಕುಟುಂಬದ ಭೇಟಿ ದರ್ಶನ್​ಗೆ ಖುಷಿ ತರೋದಕ್ಕಿಂತ ಹೆಚ್ಚಾಗಿ ದುಃಖವನ್ನ ತಂದಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬೇರೆ ದರ್ಶನ್​ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡುವಂತೆ ಮಾಡಿದೆ. ಸೋ ಇದೇ ಆತಂಕದಲ್ಲೇ ಜೈಲಿನಲ್ಲಿ ದಾಸನ ಮೌನವೃತ ಶುರುವಾಗಿದೆ. ಜೈಲಿಂದು ಬಿಡುಗಡೆ ಎಂದು?

ಮದುವೆ ವಾರ್ಷಿಕೋತ್ಸವದ ದಿನ (Marriage Anniversary) ದರ್ಶನ್​ಗೆ ಪತ್ನಿ, ಪುತ್ರನನ್ನ ಭೇಟಿ ಆಗೋ ಅವಕಾಶ ಸಿಕ್ಕಿತ್ತು. ಸೋ ಮ್ಯಾರೇಜ್ ಆನಿವರ್ಸರಿ ದಿನ ಫ್ಯಾಮಿಲಿ ಮೀಟ್ ಮಾಡಿ ದರ್ಶನ್ ಖುಷಿಯಾಗಿದ್ರು. ಆದ್ರೆ ಆ ಬಳಿಕ ದರ್ಶನ್ (Darshan Thoogudeepa) ಮೌನಕ್ಕೆ ಜಾರಿದ್ದಾರಂತೆ. ಮತ್ತದೇ ಬೇಸರ, ಏಕಾಂತ, ಆತಂಕ ದರ್ಶನ್​ನ ಕಾಡ್ತಾ ಇವೆ. ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ್ದರಿಂದ ಮುಂದೇನು ಅನ್ನೋ ಚಿಂತೆ ದಾಸನನ್ನ ಕಾಡ್ತಾ ಇದೆ.

Add Asianetnews Kannada as a Preferred SourcegooglePreferred

ಕುಟುಂಬದ ಭೇಟಿ ಬಳಿಕ ಕಣ್ಣೀರಿಟ್ಟ ದರ್ಶನ್; ಜೈಲಿನಲ್ಲಿ ಏಕಾಂತವಾಸ.. ಮೌನಕ್ಕೆ ಜಾರಿದ ದಾಸ..!

ಯೆಸ್ ಮೊನ್ನೆ ಮೇ 19ನೇ ತಾರೀಖು ದರ್ಶನ್ ಮತ್ತು ವಿಜಯಲಕ್ಷ್ಮೀ ಮದುವೆ ವಾರ್ಷಿಕೋತ್ಸವ. ಪತ್ನಿ ಹೊರಗಿದ್ರೆ ಪತಿ ಜೈಲಿನಲ್ಲಿ. ಆದ್ರೆ ಅದೃಷ್ಟವಶಾತ್ ಅಂದೇ ಕುಟುಂದವರನ್ನ ಭೇಟಿ ಮಾಡುವ ದರ್ಶನ್ ಮನವಿಗೆ ಕಾರಾಗೃಹ ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ರು. ಪತ್ನಿ-ಪುತ್ರನನ್ನ ಭೇಟಿ ಮಾಡಿದ ದರ್ಶನ್ ಖುಷಿ ಖುಷಿಯಾಗಿದ್ರು.

ಅದ್ರಲ್ಲೂ ಒಳ ಸಂದರ್ಶನ ಭೇಟಿಗೆ ಜೈಲರ್ ಅವಕಾಶ ನೀಡಿದ್ದು ದರ್ಶನ್​ಗೆ ಮತ್ತಷ್ಟು ಖುಷಿ ತಂದಿತ್ತು. ಈ ಭೇಟಿ ವೇಳೆ ಪತ್ನಿ ಮಗನನ್ನ ಬಿಗಿದಪ್ಪಿ ದರ್ಶನ್ ಭಾವುಕರಾದರೆ ಪತ್ನಿ ಮಗ ಕಣ್ಣೀರಿಟ್ಟಿದ್ರು.

ಇನ್ನೂ ವಿಜಯಲಕ್ಷ್ಮೀ ಮತ್ತು ವಿನೀಶ್ ಜೊತೆಗೆ ಮ್ಯಾನೇಜರ್ ನಾಗರಾಜು ಕೂಡ ದರ್ಶನ್​ ಭೇಟಿ ಮಾಡಿದ್ರು. ನಾಗರಾಜು ಕೂಡ ಈ ಕೇಸ್​​ನಲ್ಲಿ ಆರೋಪಿ ಆಗಿದ್ದು, ಅವರ ಜೊತೆಗೆ ದರ್ಶನ್​ ಕೇಸ್ನ ​​ ಅಪ್​ಡೇಟ್ ಬಗ್ಗೆ ಚರ್ಚೆ ಮಾಡಿದ್ದಾರಂತೆ.

ಇನ್ನೊಂದು ವರ್ಷ ತಪ್ಪದ ಜೈಲುವಾಸ.. ದರ್ಶನ್ ಆತಂಕ..!

ಹೌದು ವಾರದ ಹಿಂದಷ್ಟೇ ಸುಪ್ರೀಂ ಕೋರ್ಟ್​​ನಲ್ಲಿ ದರ್ಶನ್​ ಬೇಲ್ ಅರ್ಜಿಯ ವಿಚಾರಣೆ ನಡೆದಿತ್ತು. ಕೇಸ್ ವಿಚಾರಣೆ ವಿಳಂಬವಾಗ್ತಾ ಇರೋದನ್ನ ಕೋರ್ಟ್ ಗಮನಕ್ಕೆ ತಂದು ಬೇಲ್ ಕೊಡಿ ಅಂತ ಕೇಳಲಾಗಿತ್ತು. ಆದ್ರೆ ಸುಪ್ರೀಂ ಕೋರ್ಟ್ ಒಂದು ವರ್ಷದಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಿ ಅಂತ ಸೆಷೆನ್ಸ್ ಕೋರ್ಟ್​​ಗೆ ಆರ್ಡರ್ ಮಾಡಿ, ಇನ್ನೂ ಒಂದು ಕಾಯಿರಿ ಅಂತ ದರ್ಶನ್​ಗೆ ಸೂಚನೆ ಕೊಟ್ಟಿದೆ.

ಅಲ್ಲಿಗೆ ಇನ್ನೊಂದು ವರ್ಷ ದರ್ಶನ್ ಬೇಲ್ ಮಾತೇ ಎತ್ತುವ ಹಾಗಿಲ್ಲ. ಸೋ ಈ ವರ್ಷ ಅನ್ನೋ ಪದವೇ ದರ್ಶನ್​ನ ಬೆಚ್ಚಿಬೀಳಿಸ್ತಾ ಇದೆ. ಜೈಲಿನಲ್ಲಿ ಒಂದೊಂದು ದಿನ ಕಳೆಯೋದಕ್ಕೂ ಪರದಾಡ್ತಾ ಇರೋ ದಾಸನಿಗೆ ಬೇಲ್ ಸಿಗೋದು ಯಾವಾಗ? ಕೇಸ್ ವಿಚಾರಣೆ ವಿಳಂಬ ಆದ್ರೆ ಬೇಲ್ ಸಿಗೋ ಸಾಧ್ಯತೆ ಎಷ್ಟಿದೆ? ನಟ ದರ್ಶನ್ ಹೊರಜಗತ್ತಿಗೆ ಬರೋ ಚಾನ್ಸ್ ಇದೆಯಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಎಲ್ಲಿದೆ?

ಮೂಲಗಳ ಪ್ರಕಾರ ಕುಟುಂಬದವರನ್ನ ಭೇಟಿ ಆದ ಬಳಿಕ, ಬ್ಯಾರಕ್​ನಲ್ಲಿ ಯಾರ ಜೊತೆಗೂ ಮಾತನಾಡದೇ ಒಬ್ಬಂಟಿಯಾಗಿ ಸಮಯ ಕಳಿತಿದ್ದಾರಂತೆ ದರ್ಶನ್. ಏಕಾಂಗಿಯಾಗಿ ಮೌನವ್ರತ ಆಚರಿಸ್ತಾ ಇದ್ದಾರಂತೆ.

ಅಲ್ಲಿಗೆ ಕುಟುಂಬದ ಭೇಟಿ ದರ್ಶನ್​ಗೆ ಖುಷಿ ತರೋದಕ್ಕಿಂತ ಹೆಚ್ಚಾಗಿ ದುಃಖವನ್ನ ತಂದಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬೇರೆ ದರ್ಶನ್​ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡುವಂತೆ ಮಾಡಿದೆ. ಸೋ ಇದೇ ಆತಂಕದಲ್ಲೇ ಜೈಲಿನಲ್ಲಿ ದಾಸನ ಮೌನವೃತ ಶುರುವಾಗಿದೆ..!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..