ದಕ್ಷಿಣ ಭಾರತದ ಜನಪ್ರಿಯ ನಟಿ ಊರ್ವಶಿ, ಇತ್ತೀಚೆಗೆ ತಮಿಳು ಸಂದರ್ಶನವೊಂದರಲ್ಲಿ ಡಾ. ರಾಜ್ ಕುಮಾರ್ ಜೊತೆಗಿನ ಶ್ರಾವಣ ಬಂತು ಸಿನಿಮಾ ಶೂಟಿಂಗ್ ವೇಳೆ ಯಾವ ರೀತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಗೆ ಕನ್ನಡ ಟೀಚರ್ ಆಗಿದ್ದರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. 

ನಟಿ ಊರ್ವಶಿಗೆ ಕನ್ನಡ ಟೀಚರ್ ಆದ ಅಪ್ಪು

ದಕ್ಷಿಣ ಭಾರತದ ಜನಪ್ರಿಯ ನಟಿ ಊರ್ವಶಿ. ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಮಿಂಚಿದ ಅದ್ಭುತ ಪ್ರತಿಭೆ ಇವರು. ಬಾಲ ನಟಿಯಾಗಿ ಚಿತ್ರಂಗ ಪ್ರವೇಶಿಸಿ, ಸ್ಟಾರ್ ನಟರೊಂದಿಗೆ ನಟಿಸಿದ ನಟಿ ಇವರು. ಅದು ಯಾವುದೇ ಪಾತ್ರ ಕೊಟ್ಟರೂ ಸಹಿ, ಪಾತ್ರದೊಳಗೆ ಹೊಕ್ಕು, ಆ ಪಾತ್ರವೇ ತಾನಾಗಿ ನಟಿಸುವ ಊರ್ವಶಿ ಪಾತ್ರಕ್ಕೆ ಮನಸೋಲದವರು ಯಾರೂ ಇಲ್ಲ. ಇದೀಗ ನಟಿ ಊರ್ವಶಿ, ತಮಿಳಿನ ಒಂದು ಸಂದರ್ಶನದಲ್ಲಿ 40 ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಯಾವ ರೀತಿ ನಟಿಗೆ ಟೀಚರ್ ಆಗಿದ್ದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಊರ್ವಶಿ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾನು ನನ್ನ ಹೆಂಡ್ತಿ, ಶ್ರಾವಣ ಬಂತು, ಈ ಜೀವ ನಿನಗಾಗಿ, ನ್ಯೂ ಡೆಲ್ಲಿ, ಜೀವನದಿ, ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ ಶಾಮ ಭಾಮ, ಸೇರಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ. ಡಾ. ರಾಜಕುಮಾರ್ ಜೊತೆ ಊರ್ವಶಿ ನಟಿಸಿದ್ದು ಕೇವಲ ಒಂದೇ ಸಿನಿಮಾ ಅದು ಶ್ರಾವಣ ಬಂತು. ಶ್ರಿನಾಥ್ , ಅಣ್ಣಾವ್ರು ಹಾಗೂ ಊರ್ವಶಿ ಕಾಂಬಿನೇಶನ್ ನಲ್ಲಿ ಬಂದಂತಹ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು, ಜೊತೆಗೆ ಸಿನಿಮಾ ಹಾಡುಗಳು ಸೂಪರ್ ಹಿಟ್. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದಂತಹ ಒಂದು ಸನ್ನಿವೇಶವನ್ನು ಸ್ವಾರಸ್ಯಕರವಾಗಿ ಊರ್ವಶಿ ಒಂದು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ಆ ಬಗ್ಗೆ ಏನು ಹೇಳಿದ್ರು ನೋಡೋಣ.

ಊರ್ವಶಿಗೆ ಡೈಲಾಗ್ ಹೇಳಿಕೊಟ್ಟಿದ್ದ ಪುನೀತ್ ರಾಜಕುಮಾರ್

ಬಾಲನಟಿಯಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದ ಊರ್ವಶಿ, ಅಷ್ಟೇ ಬೇಗ ನಾಯಕಿಯಾಗಿಯೂ ಭರ್ತಿ ಪಡೆದಿದ್ದರು. ಶ್ರಾವಣ ಬಂತು ಸಿನಿಮಾ ಶೂಟಿಂಗ್ ಸಮಯದಲ್ಲಿ ಊರ್ವಶಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು, ಅಂದರೆ ಅವರಿಗೆ ಕೇವಲ 16 ವರ್ಷ. ಕನ್ನಡಕ್ಕೆ ಆಗಷ್ಟೇ ಬಂದಿದ್ದುದರಿಂದ ಅವರಿಗೆ ಅಷ್ಟಾಗಿ ಕನ್ನಡ ಬರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಊರ್ವಶಿಯವರಿಗೆ ಡೈಲಾಗ್ ಹೇಳಲು ನೆರವಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತೆ. ಶೂಟಿಂಗ್ ಸಮಯದಲ್ಲಿ ಸೆಟ್ ನಲ್ಲಿ ಇರುತ್ತಿದ್ದ ಅಪ್ಪು ಆವಾಗ ಐದನೇ ತರಗತಿಯಲ್ಲಿ ಕಲಿಯುತ್ತಿದ್ದರೆ, ಊರ್ವಶಿ 10ನೇ ತರಗತಿ. ಆ ಸಂದರ್ಭದಲ್ಲಿ ಪುನೀತ್ ಅಕ್ಕ ಹೀಗೆ ಡೈಲಾಗ್ ಹೇಳಿ ಎನ್ನುತ್ತಾ ಡೈಲಾಗ್ ಹೇಳಲು ನೆರವಾಗುತ್ತಿದ್ದರು ಎಂದು ಊರ್ವಶಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

View post on Instagram