ರಚಿತಾ ರಾಮ್ ವಿರುದ್ಧ ಮುಗಿಬಿದ್ದ ಡೈರೆಕ್ಟರ್ ನಾಗಶೇಖರ್!
ಸಂಜು ವೆಡ್ಸ್ ಗೀತಾ-2 ಚಿತ್ರದ ರೀ-ರಿಲೀಸ್‌ಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ, ಚಿತ್ರದ ನಾಯಕಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗಶೇಖರ್ ನಿರ್ದೇಶನ ಮಾಡಿರುವ ಸಂಜು ವೆಡ್ಸ್ ಗೀತಾ-2 ಸಿನಿಮಾ ಇತ್ತೀಚೆಗೆ ರೀರಿಲೀಸ್ ಆಗಿತ್ತು. ಆದರೆ, ರೀ ರಿಲೀಸ್‌ಗೂ ಪ್ರೇಕ್ಷಕರಿಂದ ಅಷ್ಟೇನೂ ಸ್ಪಂದನೆ ವ್ಯಕ್ತವಾಗಿರಲಿಲ್ಲ.
ಇದರ ಬೆನ್ನಲ್ಲಿಯೇ ನಾಗಶೇಖರ್ ಸಿನಿಮಾದ ನಾಯಕಿ ರಚಿತಾ ರಾಮ್ ವಿರುದ್ಧ ತಿರುಗಿಬಿದ್ದಿದ್ದು ಸಾಲು ಸಾಲು ದೂರು ಹೇಳಿಕೊಂಡಿದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ರಚಿತಾ ರಾಮ್ ನಟಿಯ ವಿರುದ್ಧ ನಾಗ್‌ಶೇಖರ್ ಮಾತ್ರವಲ್ಲದೆ, ಇಡೀ ಚಿತ್ರತಂಡ ತಿರುಗಿಬಿದ್ದಿದೆ. ಸಂಜು ವೆಡ್ಸ್ ಗೀತಾ ಸಿನಿಮಾ ನಿರ್ದೇಶಕ ನಾಗಶೇಖರ್ ಮಾತನಾಡಿದ್ದು, ನಾವು ಇಂಥ ಕಲಾವಿದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್‌ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ರಚಿತಾ ರಾಮ್ ಒಪ್ಪಿಲ್ಲ ಎಂದು ದೂರಿದ್ದಾರೆ.
ನಾನು ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಆದರೆ, ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದು ನಾಗಶೇಖರ್ ಬೇಸರ ತೋಡಿಕೊಂಡಿದ್ದಾರೆ.
ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡಿದೆ. ಆದರೆ, ಸಿನಿಮಾದ ನಾಯಕನಟಿಯಾಗಿ ಆಕೆ ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ ಎಂದು ನಾಗಶೇಖರ್ ಗರಂ ಆಗಿದ್ದಾರೆ.
ಶಿವಣ್ಣ, ಉಪೇಂದ್ರ, ಸುದೀಪ್ ಅಂಥ ನಟರುಗಳೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ. ಆದರೆ, ರಚಿತಾ ರಾಮ್‌ಗೆ ದೊಡ್ಡ ಪ್ರಮಾಣದಲ್ಲಿ ಪೇಮೆಂಟ್ ಕೊಟ್ಟಿದ್ದರೂ ಸಿನಿಮಾಗೆ ಬೆಂಬಲ ಕೊಟ್ಟಿಲ್ಲ ಎಂದಿದ್ದಾರೆ.