ದರ್ಶನ್ ಅಭಿನಯದ ‘ದಿ ಡೆವಿಲ್’ ಶೂಟಿಂಗ್ ಮುಗೀತು.. ಆದ್ರೆ ದಸರಾಗೆ ರಿಲೀಸ್ ಆಗಲ್ಲ!
ಎರಡು ಹಾಡುಗಳ ಶೂಟಿಂಗ್ ಹೊರತುಪಡಿಸಿದರೆ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದ ಉಳಿದ ಭಾಗಗಳ ಶೂಟಿಂಗ್ ಬಹುತೇಕ ಸಂಪೂರ್ಣವಾಗಿದೆ.
15

Image Credit : Instagram
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದ ಉದಯಪುರ ಶೂಟಿಂಗ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಇದರಲ್ಲಿ ದರ್ಶನ್ ಅವರ ನಟನೆಯ ತುಣುಕುಗಳೂ ಕಾಣಿಸಿಕೊಂಡಿವೆ.
25
Image Credit : Asianet News
ಜೊತೆಗೆ ನಾಯಕಿ ರಚನಾ ರೈ, ಕಲಾವಿದರಾದ ಅಚ್ಯುತ ಕುಮಾರ್, ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ಚಂದನ್ ಗೌಡ ಅವರ ಲುಕ್ ರಿವೀಲ್ ಆಗಿದೆ.
35
Image Credit : Instagram
ರಾಜಸ್ತಾನದ ಉದಯಪುರದಲ್ಲಿ ಚಿತ್ರೀಕರಣದ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೂಡಾ ಭಾಗಿಯಾಗಿದ್ದರು. ಜು.15ರ ಬಳಿಕ ಸಿನಿಮಾ ತಂಡ 2 ಹಾಡುಗಳ ಶೂಟ್‌ಗಾಗಿ ಬ್ಯಾಂಕಾಕ್‌ಗೆ ತೆರಳುವ ಸಾಧ್ಯತೆ ಇದೆ.
45
Image Credit : our own
ಎರಡು ಹಾಡುಗಳ ಶೂಟಿಂಗ್ ಹೊರತುಪಡಿಸಿದರೆ ‘ದಿ ಡೆವಿಲ್’ ಸಿನಿಮಾದ ಉಳಿದ ಭಾಗಗಳ ಶೂಟಿಂಗ್ ಬಹುತೇಕ ಸಂಪೂರ್ಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಜೊತೆಜೊತೆಗೇ ನಡೆಯುತ್ತಿವೆ.
55
Image Credit : our own
ಆದರೆ ದಸರಾ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಚಿತ್ರತಂಡ ತಿಳಿಸಿದ್ದು, ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
Latest Videos