- Home
- Entertainment
- Sandalwood
- ನೀಲಿ ಡ್ರೆಸ್‌ನಲ್ಲಿ ಮಗನ ಜೊತೆ ಮಿಂಚಿದ ವಿಜಯಲಕ್ಷ್ಮಿ ದರ್ಶನ್: ವಿನೀಶ್ ಕೈಯಲ್ಲಿ ಆ ಹೆಸರಿನ ಡ್ರೆಸ್ ತೊಟ್ಟ ಸಾಕುನಾಯಿ!
ನೀಲಿ ಡ್ರೆಸ್‌ನಲ್ಲಿ ಮಗನ ಜೊತೆ ಮಿಂಚಿದ ವಿಜಯಲಕ್ಷ್ಮಿ ದರ್ಶನ್: ವಿನೀಶ್ ಕೈಯಲ್ಲಿ ಆ ಹೆಸರಿನ ಡ್ರೆಸ್ ತೊಟ್ಟ ಸಾಕುನಾಯಿ!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ವಿಜಯಲಕ್ಷ್ಮಿ ಮಿಂಚಿದ್ದಾರೆ.
ವಿಜಯಲಕ್ಷ್ಮಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಒಂದಲ್ಲ ಒಂದು ಫೋಟೋಗಳು ಮತ್ತು ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಸ್ ಹಂಚಿಕೊಂಡಿರುವ ವಿಜಯಲಕ್ಷ್ಮಿ ಮಗನೊಟ್ಟಿಗೆ ಕೂಡ ಪೋಸ್ ಕೊಟ್ಟಿದ್ದಾರೆ. ಪುತ್ರ ವಿನೀಶ್ ಕೈಯಲ್ಲಿ ಸಾಕುನಾಯಿಯನ್ನು ಎತ್ತಿಕೊಂಡಿದ್ದು, ನಾಯಿಗೆ ತೊಡಿಸಿರುವ ಉಡುಗೆ ಮೇಲೆ ಬಾಸ್ ಎಂದು ಹೆಸರು ಇರುವುದು ವಿಶೇಷ.
ವಿಜಯಲಕ್ಷ್ಮಿ ನೀಲಿ ಬಣ್ಣದ ಡ್ರೆಸ್ ಧರಿಸಿ, ಅದಕ್ಕೆ ತಕ್ಕಂತೆ ನೀಲಿ ಮತ್ತು ವೈಟ್ ಪರ್ಲ್ ಮಿಕ್ಸ್ ಇರುವ ಕ್ಲ್ಯಾಸಿಕ್ ನೆಕ್‌ಲೇಸ್ ಧರಿಸಿದ್ದಾರೆ. ಸದ್ಯ ಈ ಫೊಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತಿಚೆಗಷ್ಟೇ ಪತಿ ದರ್ಶನ್ ಜೊತೆಗೆ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಪುತ್ರ ವಿನೀಶ್ ಜೊತೆ ವಿಜಯಲಕ್ಷ್ಮಿ ಫೋಟೋಗೆ ಪೋಸ್ ನೀಡಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ದರ್ಶನ್ ಹೊರ ಬಂದಮೇಲೆ, ದರ್ಶನ್ ಅವರು ಶೂಟಿಂಗ್ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆಯಾಗಿರುತ್ತಾರೆ. ಆದರೆ ಈ ಫೋಟೋಸ್‌ಗಳಲ್ಲಿ ದರ್ಶನ್ ಇಲ್ಲ.