- Home
- Entertainment
- Sandalwood
- Sushmitha Gowda Engaged: ಮಂಜಿನ ನಡುವೆ ರಿಂಗ್ ಬದಲಾಯಿಸಿಕೊಂಡ ಲವ್ ಮಾಕ್ಟೇಲ್ 2 ನಟಿ!
Sushmitha Gowda Engaged: ಮಂಜಿನ ನಡುವೆ ರಿಂಗ್ ಬದಲಾಯಿಸಿಕೊಂಡ ಲವ್ ಮಾಕ್ಟೇಲ್ 2 ನಟಿ!
ಲವ್ ಮಾಕ್ಟೇಲ್ 2 ಚಿತ್ರದ ನಾಯಕಿ ಸುಶ್ಮಿತಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವಿ ಪತಿ ಫೋಟೋ ರಿವೀಲ್ ಮಾಡಿದ್ದಾರೆ.

ಕನ್ನಡದ ಸೂಪರ್ ಹಿಟ್ ಸಿನಿಮಾ ಲವ್ ಮಾಕ್ಟೇಲ್ 2 (Love Mocktail 2) ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಸುಶ್ಮಿತಾ ಗೌಡ.
ಜನಪ್ರಿಯ ಹೇರ್‌ಕೇರ್ ಪ್ರಾಡೆಕ್ಟ್ ಮಿರಾಖಿ ಸಂಸ್ಥಾಪಕಿ ಆಗಿರುವ ಸುಶ್ಮಿತಾ (Sushmitha Gowda) ಸೋಷಿಯಲ್ ಮೀಡಿಯಾ influencer ಕೂಡ ಹೌದು.
ವಿದೇಶ ಪ್ರಯಾಣದಲ್ಲಿ ಬ್ಯುಸಿಯಾಗಿರುವ ಸುಶ್ಮಿತಾ ಅವರು ಮಂಜಿನ ನಡುವೆ ತಮ್ಮ ಭಾವಿ ಪತಿ ಅಶ್ವಿನ್‌ಗೆ ಉಂಗುರ ತೊಡಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ನೀನು ಬರೆದಿರುವ ಪ್ರತಿಯೊಂದೂ ಸಾಲುಗಳು ನನಗೆ ಪ್ರಪಂಚವಿದ್ದಂತೆ, ಎಂದು ಪ್ರತಿ ಸಲ ಅಶ್ವಿನ್ ನನ್ನ ಕಣ್ಣುಗಳನ್ನು ನೋಡಿದಾಗ ಹೇಳುತ್ತಾರೆ,' ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.
'ಈ ಮೆಸೇಜ್‌ನ ನಾನು ಟೈಪ್ ಮಾಡುವಾಗ ತುಂಬಾ ಭಾವುಕಳಾಗಿದ್ದೀನಿ. ಈ ಅದ್ಭುತ ದಿನದ ಪ್ರತಿಯೊಂದೂ ಕ್ಷಣವನ್ನು ಅದ್ಭುತವಾಗಿ ಪ್ಲಾನ್ ಮಾಡಿದ್ದಾರೆ. ಇದನ್ನು ಅನುಭವಿಸುವುದಕ್ಕೆ ನಾನು ಪುಣ್ಯ ಮಾಡಿದ್ದೆ,' ಎಂದಿದ್ದಾರೆ.
'ನಾನು ಮೊದಲು ಭೇಟಿಯಾದಾಗ ಅಪರಿಚಿತರಾಗಿದ್ದರು. ಆನಂತರ ಸಣ್ಣ infatuation ಶುರುವಾಗಿತ್ತು. ನನ್ನ ಗುರಿಗಳನ್ನು ಮುಟ್ಟಲು ನಾವು ದೂರವಾದೆವು. ಆದರೆ ವಿಧಿ ನಮ್ಮನ್ನು ಒಟ್ಟಿಗೆ ತಂದು ನಿಲ್ಲಿಸಿದೆ,' ಎಂದು ಬರೆದಿದ್ದಾರೆ.
'ನಮ್ಮ ಜರ್ನಿಯಲ್ಲಿ ನಾವು ಈಗಾಗಲೇ ಸಾಕಷ್ಟು ದೂರ ಬಂದಿದ್ದೇವೆ, ಒಟ್ಟಿಗೆ ನಡೆಯಲು ಜರ್ನಿ ಇನ್ನೂ ಇದೆ. ಈ ಪ್ರೀತಿ ಹೀಗೆ ಶಾಶ್ವತವಾಗಿರಲಿ,' ಎಂದಿದ್ದಾರೆ.