Daali Dhananjaya: 'ಜಿಂಗೋ' ಮೂಲಕ ಜನರ ಮುಂದೆ ಬರಲು ರೆಡಿಯಾದ ಡಾಲಿ ಧನಂಜಯ!
ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ಅಭಿನಯದ ʼಜಿಂಗೋʼ ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಅನ್ನು ನಟ ಧನಂಜಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್ಮೆಂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಚರ್ಚೆಯನ್ನು ಸೃಷ್ಟಿಸಿತು, ಡಾಲಿ ಧನಂಜಯ ಅವರ "ಜಿಂಗೋ" ಮೋನೋಲಾಗ್ ಮತ್ತು ಅದರ ಜೊತೆಗಿನ ಸಂಗೀತ "ನರ ನರ ಜಿಂಗೋ" ಜನರ ಮೆಚ್ಚುಗೆ ಪಡೆಯಿತು.
ಪ್ರೇಕ್ಷಕರ ಅಗಾಧ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ಚಿತ್ರ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದ್ದು ಒಂದು ಅಪ್ಪಟ ದೊಡ್ಡ ಪರದೆ ವೀಕ್ಷಣೆಗೆ ಸರಿಹೊಂದುವಂತೆ ಸ್ಕ್ರೀನ್‌ಪ್ಲೇ ಹೆಣೆಯಲಾಗಿದೆ.
"ನಮಗೆ ಸಿಕ್ಕ ಪ್ರತಿಕ್ರಿಯೆ ನಮ್ಮನ್ನು ದೊಡ್ಡದಾಗಿ ಯೋಚಿಸಲು ಪ್ರೇರೇಪಿಸಿದೆ. 2026ರಲ್ಲಿ ವೀಕ್ಷಕರಿಗೆ ವಿಶಿಷ್ಟ ಚಿತ್ರರಂಗದ ಅನುಭವವನ್ನು ನೀಡುತ್ತದೆ. ಪೊಲಿಟಿಕಲ್ ಸಟೈರ್, ಕಾಮಿಡಿ, ಆಕ್ಷನ್, ಥ್ರಿಲ್ಲರ್ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ಕೊಡಬೇಕು ಎಂಬುದೇ ನಮ್ಮ ಗುರಿ. ಸದ್ಯ ಕನ್ನಡ, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಅತ್ಯುತ್ತಮ ಕಲಾವಿದರ ತಾರಾ ಬಳಗವಿರುತ್ತದೆ" ಎಂದು ನಿರ್ಮಾಣ ತಂಡ ತಿಳಿಸಿದೆ.
“ ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಲ್ಲಿ ತುಂಬಾ ವಿವರಗಳಿವೆ. ಮೇಲ್ನೋಟಕ್ಕೆ ಒಂದು ಫನ್ ಪೋಸ್ಟರ್ ಥರ ಕಾಣುತ್ತೆ, ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ತೆರೆದುಕೊಳ್ಳುತ್ತೆ. ಸಿನಿಮಾ ಕೂಡ ಇದೇ ಇರುತ್ತದೆ. ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇದರಲ್ಲಿ Takeaway ಗಳಿರುತ್ತದೆ, ಒಟ್ಟಿನಲ್ಲಿ 2026 ಕ್ಕೆ ಒಂದು ಮಜವಾದ ಚಿತ್ರಕ್ಕೆ ಪ್ರೇಕ್ಷಕರು ಸಜ್ಜಾಗಲಿ” ಎನ್ನುತ್ತಾರೆ ನಿರ್ದೇಶಕ ಶಶಾಂಕ್ ಸೋಗಾಲ್
ಡಾಲಿ ಧನಂಜಯ ಜನ್ಮದಿನದ ಪ್ರಯುಕ್ತ ʼ666 ಥೀಮ್ ಆಪರೇಶನ್ ಥಿಯೇಟರ್ʼ, ʼಹಲಗಲಿʼ, ʼಜಿಂಗೋʼ, ʼಉತ್ತರಕಾಂಡʼ ಸಿನಿಮಾಗಳು ಕೂಡ ಪೋಸ್ಟರ್ ರಿಲೀಸ್ ಮಾಡಿವೆ.