- Home
- Entertainment
- Sandalwood
- ರೆಟ್ರೋ ಲುಕ್, ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್: ಜನ್ಮದಿನದ ಸಂಭ್ರಮದಲ್ಲಿ ಡಾಲಿ ಧನಂಜಯ
ರೆಟ್ರೋ ಲುಕ್, ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್: ಜನ್ಮದಿನದ ಸಂಭ್ರಮದಲ್ಲಿ ಡಾಲಿ ಧನಂಜಯ
ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್, ಧನಂಜಯ್ ರೆಟ್ರೋ ಲುಕ್’ ಅನ್ನುವ ಅಡಿಬರಹದೊಂದಿಗೆ 666 ಆಪರೇಷನ್ ಡ್ರೀಮ್ ಥಿಯೇಟರ್ ಹೊಸ ಲುಕ್ ರಿಲೀಸ್ ಆಗಿದೆ.

ಡಾಲಿ ಧನಂಜಯ ಜನ್ಮದಿನ. 39ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಸಂದರ್ಭದಲ್ಲಿ ಡಾಲಿ ಧನಂಜಯ ನಟಿಸುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಹೊಸ ಲುಕ್ ಬಿಡುಗಡೆಯಾಗಿದೆ.
‘ಕೈಯಲ್ಲಿ ಗನ್ನು, ಕಾರಲ್ಲಿ ಡ್ರೀಮ್, ಧನಂಜಯ್ ರೆಟ್ರೋ ಲುಕ್’ ಅನ್ನುವ ಅಡಿಬರಹದೊಂದಿಗೆ ಈ ಹೊಸ ಲುಕ್ ರಿಲೀಸ್ ಆಗಿದೆ. ಹೇಮಂತ್ ಎಂ ರಾವ್ ನಿರ್ದೇಶನದ, ಡಾ.ವೈಶಾಕ್ ಜೆ. ಗೌಡ ನಿರ್ಮಾಣದ ಈ ಚಿತ್ರದ ಶೂಟಿಂಗ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಅದ್ದೂರಿ ಸೆಟ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಶಿವಣ್ಣ ಹಾಗೂ ಧನಂಜಯ ಇಬ್ಬರೂ ಭಾಗಿಯಾಗಿದ್ದಾರೆ. ಧನಂಜಯ ಸದ್ಯಕ್ಕೀಗ ‘666 ಆಪರೇಶನ್ ಡ್ರೀಮ್ ಥಿಯೇಟರ್’, ‘ಹಲಗಲಿ’, ‘ಜಿಂಗೋ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಹುಟ್ಟುಹಬ್ಬ ಆಚರಣೆ ಇಲ್ಲ: ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ ಎಂದು ಧನಂಜಯ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಪ್ರತೀ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ.
ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮದ ಜೊತೆಗೆ ಆಚರಿಸೋಣ. ಲವ್ ಯೂ ಆಲ್ ಎಂದು ಹೇಳಿದ್ದಾರೆ.