- Home
- Entertainment
- Sandalwood
- Yash 'ಟಾಕ್ಸಿಕ್' ಸಿನಿಮಾದ ಪೋಸ್ಟರ್ ನೋಡಿ ಕಥೆ ಏನಂತ ಗೆಸ್ ಮಾಡ್ತೀರಾ? ಹಾಗಿದ್ರೆ ಹೇಳಿ ನೋಡೋಣ..!
Yash 'ಟಾಕ್ಸಿಕ್' ಸಿನಿಮಾದ ಪೋಸ್ಟರ್ ನೋಡಿ ಕಥೆ ಏನಂತ ಗೆಸ್ ಮಾಡ್ತೀರಾ? ಹಾಗಿದ್ರೆ ಹೇಳಿ ನೋಡೋಣ..!
ಸ್ಯಾಂಡಲ್‌ವುಡ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಟ್ರೈಲರ್ ಹಾಗೂ ಪೋಸ್ಟರ್ಸ್ ರಿಲೀಸ್ ಆಗಿದೆ. ಯಶ್ ಟಾಕ್ಸಿಕ್ ಸಿನಿಮಾ ಪೋಸ್ಟರ್ ನೋಡಿ ನೀವು ಈ ಸಿನಿಮಾದ ಕಥೆ ಏನಿರಬಹುದು ಎಂದು ಗೆಸ್ ಮಾಡ್ತೀರಾ? ನೋಡಿ ಹೇಳಿ ನೋಡೋಣ..

ಇಂದು ರಾಕಿಂಗ್ ಸ್ಟಾರ್ ನಟ ಯಶ್ ಹುಟ್ಟುಹಬ್ಬ. ತಮ್ಮ ಜನುಮದಿನದ ಕಾಣಿಕೆಯಾಗಿ ನಟ ಯಶ್ ಅವರು ಅಭಿಮಾನಿಗಳ ಜೊತೆ ಹುಟ್ಟಹಬ್ಬ ಆಚರಿಸಿಕೊಳ್ಳುವ ಬದಲು ತಮ್ಮ ‘ಟಾಕ್ಸಿಕ್’ ಸಿನಿಮಾದ ಟೀಸರ್ ಟ್ರೈಲರ್ ಲಾಂಚ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ.
ಈಗಾಗಲೇ ಟಾಕ್ಸಿಟ್ ಟ್ರೈಲರ್ 11 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಟ್ರೈಲರ್ ನೋಡಿ ಜಗತ್ತೇ ನಿಬ್ಬೆರಗಾಗಿದೆ. ಹಸಿಬಿಸಿಯ ದೃಶ್ಯದ ಈ ಟ್ರೈಲರ್ ಯಶ್ ಅವರ ಈ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಯಶ್ ಅವರ ಟ್ರೈಲರ್‌ನಲ್ಲಿ ಮೂಡಿಬಂದಿರುವ ಕೆಲವು ದೃಶ್ಯಗಳು ತುಂಬಾ ವೈರಲ್ ಆಗುತ್ತಿವೆ. ಈ ಬಗ್ಗೆ ಹಲವು ಡಿಬೆಟ್‌ಗಳು ಕೂಡ ಶುರುವಾಗಿವೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಹಲವು ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ಜೊತೆಗೆ, ಇಂದು ಟೀಸರ್ ಟ್ರೈಲರ್ ಕೂಡ ಬಿಡುಗಡೆ ಆಗಿದೆ. ಅವುಗಳನ್ನೆಲ್ಲಾ ನೋಡಿ ನೀವು ಈ ಚಿತ್ರದ ಕಥೆಯನ್ನು ಗೆಸ್ ಮಾಡ್ತೀರಾ?
ಈ ಟಾಸ್ಕ್ ನಿಮ್ಮಿಂದ ಸಾಧ್ಯಾನಾ ನೋಡಿ.. ಏಕೆಂದರೆ, ಟಾಕ್ಸಿಕ್ ಚಿತ್ರದಲ್ಲಿನ ಹಲವು ನಟನಟಿಯರ ಪೋಸ್ಟರ್ ಈಗಾಗಲೇ ಹೊರಬಿದ್ದಿದೆ. ಯಶ್, ನಯನತಾರಾ ಸೇರಿದಂತೆ ಹಲವರ ಲುಕ್ ಬಯಲಾಗಿವೆ. ಇದು ಕತೆಗೆ ಪೂರಕವಾಗಿಯೇ ಇದೆ.. ಹಾಗಿದ್ದರೆ ಟಾಕ್ಸಿಕ್ ಕತೆ ಏನು?
ಇಂದಿನ ಟ್ರೈಲರ್ ನೋಡಿ ಜಗತ್ತೇ ಟಾಕ್ಸಿಕ್ ಬಗ್ಗೆ ಮಾತನ್ನಾಡಿಕೊಳ್ಳುವಂತೆ ಆಗಿದೆ. ಆದರೆ, ಟ್ರೈಲರ್ ಟೀಸರ್ ಮೂಲಕ ಕಥೆ ರಿವೀಲ್ ಮಾಡೋದಿಲ್ಲ. ಆದರೆ, ಫಸ್ಟ್ ಲುಕ್ ನೋಡಿ ಕೆಲವರು ಕಥೆ, ಸಬ್ಜೆಕ್ಟ್ ಊಹೆ ಮಾಡುತ್ತಾರೆ. ಹಾಗಿದ್ದರೆ ಟಾಕ್ಸಿಕ್ ಕತೆ ಏನಿರಬಹುದು?
ಯಶ್ ಅಭಿನಯದ, ಗೀತೂ ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾವು 03 ಮಾರ್ಚ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ನಟ ಯಶ್ ಅವರು ‘ರಾಯ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ರಿವೀಲ್ ಆಗಿದೆ.
ಅಂದಹಾಗೆ, ನಟ ಯಶ್ ಅವರು ಈ ಹುಟ್ಟುಹಬ್ಬವನ್ನೂ ಕೂಡ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿಲ್ಲ. ಆದರೆ, ತಮ್ಮ ಫ್ಯಾನ್ಸ್‌ಗಳ ಖುಷಿಗೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಯಶ್ ಫ್ಯಾನ್ಸ್ ಟಾಕ್ಸಿಕ್ ಟ್ರೈಲರ್ ನೋಡಿ ಫಿದಾ ಆಗಿದ್ದಾರೆ.
ಮರೆಯಬೇಡಿ…! ಪೋಸ್ಟರ್ ಹಾಗು ಟೀಸರ್ ಟ್ರೈಲರ್ ನೋಡಿ ಟಾಕ್ಸಿಕ್ ಕಥೆ ಏನಿರಬಹುದು ಅಂತ ಕಾಮೆಂಟ್ ಮಾಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

