- Home
- Entertainment
- TV Talk
- Bigg Boss ಇತಿಹಾಸದಲ್ಲಿಯೇ ಮೂರು ದಾಖಲೆ ಬರೆದ Mallamma! ಇಂಟರೆಸ್ಟಿಂಗ್ ವಿಷಯ ತಿಳಿಸಿದ Kiccha Sudeep
Bigg Boss ಇತಿಹಾಸದಲ್ಲಿಯೇ ಮೂರು ದಾಖಲೆ ಬರೆದ Mallamma! ಇಂಟರೆಸ್ಟಿಂಗ್ ವಿಷಯ ತಿಳಿಸಿದ Kiccha Sudeep
ಬಿಗ್ಬಾಸ್ ಮನೆಯಲ್ಲಿ ಕೆಲವೇ ದಿನಗಳಿದ್ದರೂ, ಮಲ್ಲಮ್ಮ ತಮ್ಮ ಮೌನ ಮತ್ತು ಪ್ರೀತಿಯ ವ್ಯಕ್ತಿತ್ವದಿಂದ ಅಪಾರ ಜನಪ್ರീതി ಗಳಿಸಿದರು. ಮನೆಯಿಂದ ಹೊರಬಂದಾಗ, ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಇತಿಹಾಸದಲ್ಲಿ ಮಲ್ಲಮ್ಮ ಸೃಷ್ಟಿಸಿದ ಮೂರು ವಿಶಿಷ್ಟ ದಾಖಲೆಗಳನ್ನು ಬಹಿರಂಗಪಡಿಸಿದರು.

ಪ್ರೀತಿಯ ಅಮ್ಮ
ಬಿಗ್ಬಾಸ್ (Bigg Boss)ನಲ್ಲಿ ಕೆಲವೇ ದಿನಗಳು ಇದ್ದರೂ ಎಲ್ಲರಿಗೂ ಪ್ರೀತಿಯ ಅಮ್ಮನಾಗಿ, ಬಿಗ್ಬಾಸ್ನಿಂದ ಹೊರಬಂದವರು ಮಲ್ಲಮ್ಮ. ದೊಡ್ಮನೆಯಲ್ಲಿ ಮಲ್ಲಮ್ಮನ ಹವಾ ಜೋರಾಗಿಯೇ ಇತ್ತು. ಜಗಳವಾಡದೇ, ಮೌನವಾಗಿದ್ದುಕೊಂಡೇ ಬಿಗ್ಬಾಸ್ನಂಥ ಮನೆಯಲ್ಲಿ ಜನರ ಪ್ರೀತಿ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಒಂದರ್ಥದಲ್ಲಿ ಇದೇ ಕಾರಣಕ್ಕಾಗಿಯೇ ಅವರನ್ನು ಬೇಗ ಮನೆಯಿಂದ ಹೊರಕ್ಕೆ ಕಳುಹಿಸಲಾಯಿತು ಎನ್ನುವ ಮಾತೂ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
ಮೌನವಾಗಿದ್ದುಕೊಂಡೇ ಜನಪ್ರೀತಿ ಗಳಿಸಿದವರು
ಜಗಳವಾಡುವ ಮೂಲಕವೋ, ನೆಗೆಟಿವ್ ಕಮೆಂಟ್ಸ್ ಮೂಲಕವೋ, ಎಲ್ಲ ಗಡಿಯನ್ನು ದಾಟಿ ಕೆಟ್ಟದ್ದಾಗಿ ನಡೆದುಕೊಳ್ಳುವ ಮೂಲಕವೋ, ಬಿಗ್ಬಾಸ್ ಮನೆಯಲ್ಲಿಯೇ ಪ್ರೀತಿ-ಪ್ರೇಮ ಎಂದು ಒಂದು ಹಂತ ದಾಟುವ ಮೂಲಕವೋ... ಕೊನೆಯವರೆಗೂ ಇಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳೇ ಹೆಚ್ಚು. ಇಂಥ ಘಟನೆಗಳನ್ನು ಬೈದುಕೊಳ್ಳುತ್ತಲೇ ಕುತೂಹಲದಿಂದ ಸವಿಯುವ ದೊಡ್ಡ ವರ್ಗವೇ ಇರುವ ಕಾರಣ, ಬಿಗ್ಬಾಸ್ಗೆ ಟಿಆರ್ಪಿ (Bigg Boss TRP) ತಂದುಕೊಡುವುದು ನಿಜವೇ. ಆದರೆ, ಕೆಲವೇ ದಿನಗಳು ಇದ್ದರೂ ಯಾರ ತಂಟೆಗೂ ಹೋಗದೇ ಎಲ್ಲರ ಪ್ರೀತಿ ಗಳಿಸಿ, ಈ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಮಲ್ಲಮ್ಮನಂಥವರು ಇಂಥ ರಿಯಾಲಿಟಿ ಷೋಗಳಲ್ಲಿ ಅಪರೂಪವೇ ಸರಿ.
ಸುದೀಪ್ ಹೇಳಿದ್ದೇನು?
ಇವುಗಳ ನಡುವೆಯೇ ಮಲ್ಲಮ್ಮ (Bigg Boss Mallamma)ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಅವರು ಹೊರಕ್ಕೆ ಬಂದಾಗ, ಕಿಚ್ಚ ಸುದೀಪ್ ಅವರು ಆಡಿದ ಮಾತುಗಳ ತುಣುಕುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪಲ್ಲವಿ ಅವರಿಂದ ಛಾನ್ಸ್
ಅವರು ಕೆಲಸ ಮಾಡುವ ಟೈಲರಿಂಗ್ ಷಾಪ್ನ ಮಾಲೀಕರಾಗಿರುವ ಪಲ್ಲವಿ ಅವರು ಮಲ್ಲಮ್ಮನವರನ್ನು ಬಿಗ್ಬಾಸ್ಗೆ ಪರಿಚಯಿಸಿದವರು. ಅರ್ಥಾತ್ ಅವರಿಂದಾಗಿಯೇ ಮಲ್ಲಮ್ಮನವರಿಗೆ ಇಂಥ ಛಾನ್ಸ್ ಸಿಕ್ಕಿದ್ದು. ಇದೇ ಕಾರಣಕ್ಕೆ ಮನೆಯಿಂದ ಹೊರಕ್ಕೆ ಬರುತ್ತಲೇ ಪಲ್ಲವಿ ಅವರನ್ನು ಮಲ್ಲಮ್ಮ ವೇದಿಕೆಯ ಮೇಲೆ ಬರಮಾಡಿಕೊಂಡಿದ್ದರು.
ಸುದೀಪ್ ಮಾತು
ಆ ಸಂದರ್ಭದಲ್ಲಿ ಸುದೀಪ್ ಅವರು, ಮಲ್ಲಮ್ಮ ಬಿಗ್ಬಾಸ್ ಇತಿಹಾಸದಲ್ಲಿ ಸೃಷ್ಟಿಸಿರುವ ದಾಖಲೆಗಳ ಬಗ್ಗೆ ಮಾತನಾಡಿದ್ದಾರೆ. ಪಲ್ಲವಿ ಅವರ ಎದುರು ಮಾತನಾಡಿದ ಸುದೀಪ್, ಮಲ್ಲಮ್ಮನವರು ಎಲ್ಲಾ ದಾಖಲೆಗಳನ್ನೂ ಬ್ರೇಕ್ ಮಾಡಿದ್ದಾರೆ ಎಂದಿದ್ದಾರೆ.
ದಾಖಲೆಗಳೇನು?
ಬಿಗ್ಬಾಸ್ನಲ್ಲಿ ಇಲ್ಲಿಯವರೆಗೆ ಬಂದ ಸ್ಪರ್ಧಿಗಳ ಪೈಕಿ ವಯಸ್ಸಿನಲ್ಲಿ ಹಿರಿಯರು ಎನ್ನುವುದು ಒಂದಾದರೆ, ಸುಶಿಕ್ಷಿತರು ಎನ್ನುವ ಹಣೆಪಟ್ಟಿ ಇಟ್ಟುಕೊಂಡು ಬಿಗ್ಬಾಸ್ನಲ್ಲಿ ಸ್ಪರ್ಧಿಗಳು ನಡೆದುಕೊಳ್ಳುವ ರೀತಿಗಳ ನಡುವೆ, ಶಿಕ್ಷಣವೇ ಇಲ್ಲದೇ ಬಿಗ್ಬಾಸ್ ಮನೆ ಪ್ರವೇಶಿಸಿದವರು ಎನ್ನುವ ದಾಖಲೆಯೂ ಮಲ್ಲಮ್ಮ ಅವರಿಗೆ ಇದೆ.
ವ್ಯಕ್ತಿತ್ವ ಒಂದೇ
ಬಿಗ್ಬಾಸ್ನಲ್ಲಿ ಬರಬೇಕಾದರೆ ಒಂದಿಷ್ಟು ಬ್ಯಾಕ್ಗ್ರೌಂಡ್ ಬೇಕೇ ಬೇಕು. ಆದರೆ ಅದು ಕೂಡ ಇಲ್ಲದೇ ಕೇವಲ ವ್ಯಕ್ತಿತ್ವ ಒಂದನ್ನೇ ಇಟ್ಟುಕೊಂಡು ಮನೆಯೊಳಕ್ಕೆ ಬಂದಿರುವ ಬಗ್ಗೆ ಸುದೀಪ್ ಅವರು ಮಲ್ಲಮ್ಮನವರನ್ನು ಶ್ಲಾಘಿಸಿದ್ದಾರೆ.