- Home
- Entertainment
- TV Talk
- ʼಪ್ರೀತಿಯ ವರ್ತೂರು ಸಂತೋಷ್...ʼ ಸಾಲು ಸಾಲು ಫೋಟೋ ಹಂಚ್ಕೊಂಡು ತನಿಷಾ ಕುಪ್ಪಂಡ ಹೇಳಿದ್ದೇನು?
ʼಪ್ರೀತಿಯ ವರ್ತೂರು ಸಂತೋಷ್...ʼ ಸಾಲು ಸಾಲು ಫೋಟೋ ಹಂಚ್ಕೊಂಡು ತನಿಷಾ ಕುಪ್ಪಂಡ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಅವರು ಭಾಗವಹಿಸಿದ್ದರು. ಆಗ ಈ ಜೋಡಿ ಮಧ್ಯೆ ಸ್ನೇಹ ಶುರುವಾಗಿತ್ತು. ಆ ಸ್ನೇಹ ಈಗಲೂ ಮುಂದುವರೆದಿದೆ.

ʼಬಿಗ್ ಬಾಸ್ ಕನ್ನಡ ಸೀಸನ್ 10' ಮನೆಯಲ್ಲಿಯೇ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಅವರು ಪರಿಚಿತರಾದರು. ಅಲ್ಲಿಯೇ ಇವರಿಬ್ಬರ ಸ್ನೇಹ ಶುರುವಾಗಿತ್ತು. ದೊಡ್ಮನೆಯಲ್ಲಿ ಜೈಲಿನಿಂದ ಹೊರಗಡೆ ಬಂದ್ಮೇಲೆ ತನಿಷಾ ಕುಪ್ಪಂಡ ಅವರು ಅಪ್ಪುಗೆ ನೀಡಿದ ಫೋಟೋ ಇದು!
ವರ್ತೂರು ಸಂತೋಷ್ ಅವರ ತಂಗಿಯ ಮಗನ ನಾಮಕರಣದಲ್ಲಿ ತನಿಷಾ ಕುಪ್ಪಂಡ ಭಾಗಿ ಆಗಿದ್ದರು. ಆ ವೇಳೆ ಈ ಫೋಟೋ ತೆಗೆಯಲಾಗಿತ್ತು. ವರ್ತೂರು ಸಂತೋಷ್ ಅಳಿಯನಿಗೆ ತನಿಷಾ ಕುಪ್ಪಂಡ ಅವರು ಚಿನ್ನದ ಉಂಗುರ ಕೊಟ್ಟಿದ್ದರು.
ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರು ಹೊರಗಡೆ ಬರುತ್ತಿದ್ದಂತೆ ತನಿಷಾ ಕುಪ್ಪಂಡ ತೆಗೆದುಕೊಂಡ ಸೆಲ್ಫಿ ಇದು. ಫಿನಾಲೆ ನಂತರದ ಫೋಟೋ ಇದು!
ತನಿಷಾ ಕುಪ್ಪಂಡ ಅವರ ಹೋಟೆಲ್‌ಗೆ ವರ್ತೂರು ಸಂತೋಷ್ ಅವರು ಭೇಟಿ ಕೊಟ್ಟಾಗ ತೆಗೆದ ಫೋಟೋ ಇದು. ಇವರಿಬ್ಬರ ಸ್ನೇಹ ಇನ್ನೂ ಮುಂದುವರೆದಿದೆ.
ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮುಂದೆ ಡ್ಯಾನ್ಸ್ ಮಾಡಿ, ಡೈಲಾಗ್ ಹೇಳಿದ ಸಂದರ್ಭ ಇದು.
ಇಂದು ತನಿಷಾ ಅವರು ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಶುಭಾಶಯ ತಿಳಿಸಿದ್ದಾರೆ.
"ಹುಟ್ಟು ಹಬ್ಬದ ಶುಭಾಷಗಳು ಪ್ರೀತಿಯ ಸ್ನೇಹಿತ ವರ್ತೂರು ಸಂತೋಷ್. ಎಲ್ಲ ಒಳ್ಳೆಯದಾಗಲಿ ಕುಶಿ ಪ್ರೀತಿ ನಿಮ್ಮ ಜೀವನದಲ್ಲಿ ಸದಾ ಇರಲಿ, ಅಂದಿನಿಂದ ಇಂದಿನ ವರೆಗೂ ನಾ ಕಂಡ ವರ್ತೂರ್ ಸಂತೋಷ್ ಈ ಕೆಲವು ಫೋಟೋದಲ್ಲಿ" ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.
ವರ್ತೂರು ಸಂತೋಷ್ ಹಾಗೂ ಬೆಂಕಿ ತನಿಷಾ ಕುಪ್ಪಂಡ ಸ್ನೇಹ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ವರ್ತೂರು ಅವರಿಗೆ ಶುಭಾಶಯ ತಿಳಿಸಿದ್ದಾರೆ.
ತನಿಷಾ ಕುಪ್ಪಂಡ ಅವರು ಚಿತ್ರರಂಗದಲ್ಲಿ ನಟಿ, ನಿರ್ಮಾಪಕಿಯಾಗಿ ಬ್ಯುಸಿ ಆಗಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್, ಆಭರಣ ಮಳಿಗೆಯನ್ನು ಕೂಡ ಹೊಂದಿದ್ದಾರೆ.