MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ‘ಪ್ರೇಮದ ಊರಲಿ’ ಬಳಿಕ ರಮಿಕಾ ಶಿವುಗೆ ಹೆಚ್ಚಿದ ಬೇಡಿಕೆ: ‘ವಸಂತ’ ಪಾತ್ರಕ್ಕೆ ಭಾರೀ ಮೆಚ್ಚುಗೆ

‘ಪ್ರೇಮದ ಊರಲಿ’ ಬಳಿಕ ರಮಿಕಾ ಶಿವುಗೆ ಹೆಚ್ಚಿದ ಬೇಡಿಕೆ: ‘ವಸಂತ’ ಪಾತ್ರಕ್ಕೆ ಭಾರೀ ಮೆಚ್ಚುಗೆ

ನಟಿ ರಮಿಕಾ ಶಿವು ಇದೀಗ ಹಿರಿತೆರೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಶೇಡ್‌ಗಳನ್ನು ಹೊಂದಿರುವ ‘ವಸಂತ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

2 Min read
Author : Govindaraj S
Published : Oct 07 2026, 08:28 PM IST
Share this Photo Gallery
  • FB
  • TW
  • Linkdin
  • Whatsapp
18
ತಮ್ಮದೇ ಛಾಪು
Image Credit : Ramika Shivu Instagram

ತಮ್ಮದೇ ಛಾಪು

ಕನ್ನಡ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಮಿಕಾ ಶಿವು, ಇದೀಗ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಪಾರು’ ಹಾಗೂ ‘ನೀನಾದೆ ನಾ’ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದ ರಮಿಕಾ, ಇದೀಗ ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಮಹತ್ವದ ಹೆಜ್ಜೆ
Image Credit : Ramika Shivu Instagram

ಮಹತ್ವದ ಹೆಜ್ಜೆ

ಕಿರುತೆರೆಯಲ್ಲಿ ನಟನೆಯ ಅನುಭವ ಪಡೆದ ಬಳಿಕ ಹಿರಿತೆರೆಯಲ್ಲಿ ವಿಭಿನ್ನ ಪಾತ್ರವೊಂದರ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾದ ರಮಿಕಾ ಶಿವು, ಕಥೆಯಲ್ಲಿದ್ದ ಗಂಭೀರತೆ ಹಾಗೂ ಪಾತ್ರದ ತೂಕವನ್ನು ಗಮನದಲ್ಲಿಟ್ಟುಕೊಂಡು ‘ಪ್ರೇಮದ ಊರಲಿ’ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಚಿತ್ರ ಅವರ ಸಿನಿ ಜರ್ನಿಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

Related Articles

Related image1
ಕನ್ನಡದಲ್ಲಿ ಕಲೆಕ್ಷನ್‌ ಕಿಂಗ್‌.. ಈಗ ಬಾಲಿವುಡ್‌ಗೆ ಕಾಲಿಡುತ್ತಿರುವ 'ಪ್ರೇಮದ ಊರಲಿ' ಸಿನಿಮಾ!
Related image2
3.5 ಕೋಟಿ ಬಜೆಟ್‌ನಿಂದ 13 ಕೋಟಿ+: ‘ಪ್ರೇಮದ ಊರಲಿ’ ಸಕ್ಸಸ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?
38
ನಾಲ್ಕು ಶೇಡ್‌ಗಳಲ್ಲಿ ‘ವಸಂತ’!
Image Credit : Ramika Shivu Instagram

ನಾಲ್ಕು ಶೇಡ್‌ಗಳಲ್ಲಿ ‘ವಸಂತ’!

‘ಪ್ರೇಮದ ಊರಲಿ’ ಸಿನಿಮಾದಲ್ಲಿ ರಮಿಕಾ ಶಿವು ‘ವಸಂತ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಪಾತ್ರ ಒಂದೇ ರೀತಿಯದ್ದಾಗಿರದೆ ನಾಲ್ಕು ವಿಭಿನ್ನ ಶೇಡ್‌ಗಳನ್ನು ಹೊಂದಿದೆ. ಹೀಗಾಗಿ ಪಾತ್ರವನ್ನು ತೆರೆ ಮೇಲೆ ಕಟ್ಟಿಕೊಡುವುದು ನಟಿಗೆ ದೊಡ್ಡ ಸವಾಲಾಗಿತ್ತು. ಆದರೆ ತಮ್ಮ ಸಹಜ ಅಭಿನಯ ಹಾಗೂ ವಿಭಿನ್ನ ಭಾವನೆಗಳನ್ನು ಕಟ್ಟಿಕೊಡುವ ಮೂಲಕ ರಮಿಕಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

48
ವಿಭಿನ್ನ ರೀತಿಯಲ್ಲಿ ಸಿನಿಮಾಗೆ ಪ್ರಚಾರ
Image Credit : Ramika Shivu Instagram

ವಿಭಿನ್ನ ರೀತಿಯಲ್ಲಿ ಸಿನಿಮಾಗೆ ಪ್ರಚಾರ

ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಅದರ ಪ್ರಚಾರದಲ್ಲೂ ರಮಿಕಾ ಶಿವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಚಿತ್ರತಂಡದೊಂದಿಗೆ ಬಿಎಂಟಿಸಿ ಬಸ್ ಹಾಗೂ ರೈಲುಗಳಲ್ಲಿ ಸಂಚರಿಸಿ, ನೇರವಾಗಿ ಜನರನ್ನು ಭೇಟಿ ಮಾಡುವ ಮೂಲಕ ‘ಪ್ರೇಮದ ಊರಲಿ’ ಸಿನಿಮಾವನ್ನು ಪ್ರಚಾರ ಮಾಡಿದ್ದರು. ಸಾಮಾನ್ಯ ಪ್ರಚಾರಕ್ಕಿಂತ ವಿಭಿನ್ನವಾಗಿ ಜನರ ನಡುವೆಯೇ ತೆರಳಿ ಸಿನಿಮಾ ಬಗ್ಗೆ ಮಾತನಾಡಿದ್ದು ಪ್ರೇಕ್ಷಕರ ಗಮನ ಸೆಳೆದಿತ್ತು. ಈ ವೇಳೆ ರಮಿಕಾ ಶಿವು ಅವರ ಸರಳತೆ ಹಾಗೂ ಸಹಜ ನಡೆ ಕೂಡ ಹಲವರ ಮೆಚ್ಚುಗೆಗೆ ಪಾತ್ರವಾಯಿತು.

58
ಮೊದಲ ಸಿನಿಮಾದಲ್ಲೇ ಸಿಕ್ಕಿತು ಪ್ರೇಕ್ಷಕರ ಪ್ರೀತಿ
Image Credit : Ramika Shivu Instagram

ಮೊದಲ ಸಿನಿಮಾದಲ್ಲೇ ಸಿಕ್ಕಿತು ಪ್ರೇಕ್ಷಕರ ಪ್ರೀತಿ

‘ಪ್ರೇಮದ ಊರಲಿ’ ಸಿನಿಮಾದಲ್ಲಿನ ರಮಿಕಾ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾತ್ರವನ್ನು ಸಹಜವಾಗಿ ನಿರ್ವಹಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

68
ಅಭಿನಯಕ್ಕೂ ಮೆಚ್ಚುಗೆ
Image Credit : Ramika Shivu Instagram

ಅಭಿನಯಕ್ಕೂ ಮೆಚ್ಚುಗೆ

ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯ ಜೊತೆಗೆ ರಮಿಕಾ ಶಿವು ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಅವರ ಮುಂದಿನ ಸಿನಿ ಪಯಣದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದ ನಟಿ, ಹಿರಿತೆರೆಯಲ್ಲೂ ಭದ್ರವಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ.

78
ಮುಂದೆ ಕಥೆ ಹಾಗೂ ಪಾತ್ರಕ್ಕೆ ಹೆಚ್ಚು ಆದ್ಯತೆ
Image Credit : Ramika Shivu Instagram

ಮುಂದೆ ಕಥೆ ಹಾಗೂ ಪಾತ್ರಕ್ಕೆ ಹೆಚ್ಚು ಆದ್ಯತೆ

ಮೊದಲ ಸಿನಿಮಾದಲ್ಲೇ ಸಿಕ್ಕ ಯಶಸ್ಸು ಮತ್ತು ಪ್ರೇಕ್ಷಕರ ಪ್ರೀತಿಯಿಂದ ರಮಿಕಾ ಶಿವು ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಸಿನಿಮಾಗಳ ಸಂಖ್ಯೆಯತ್ತ ಗಮನ ಹರಿಸುವ ಬದಲು, ಕಥೆ ಮತ್ತು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ಧಾರದಲ್ಲಿದ್ದಾರೆ.

88
ಮತ್ತೊಂದು ಮುಖ
Image Credit : Ramika Shivu Instagram

ಮತ್ತೊಂದು ಮುಖ

ತೂಕವಿರುವ ಹಾಗೂ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಅಭಿನಯದ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶವನ್ನು ರಮಿಕಾ ಹೊಂದಿದ್ದಾರೆ. ಮೊದಲ ಹೆಜ್ಜೆಯಲ್ಲೇ ಸಿಕ್ಕ ಉತ್ತಮ ಪ್ರತಿಕ್ರಿಯೆ, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ರಮಿಕಾ ಶಿವುಗೆ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಮನರಂಜನಾ ಸುದ್ದಿ
ಕನ್ನಡ ಚಲನಚಿತ್ರಗಳು
ಸ್ಯಾಂಡಲ್‌ವುಡ್
 

Latest Videos
Recommended Stories
Recommended image1
ಸ್ಕೂಲ್ ಮಕ್ಕಳಿಂದ 'ಪ್ರೇಮದ ಊರಲಿ' ಟೈಟಲ್ ಟ್ರಾಕ್ ಹಾಡಿಸಿದ ಸೀಕ್ರೆಟ್ ಬಿಚ್ಚಿಟ್ಟ ಸುನಾದ್ ಗೌತಮ್!
Recommended image2
ಪ್ಯಾನ್ ಇಂಡಿಯಾ ಕ್ರೇಜ್ ಇದ್ದರೂ ಈ ಕನ್‌ಫ್ಯೂಷನ್ ಯಾಕೆ? ಯಶ್, ರಿಷಬ್, ಸುದೀಪ್ ಕಥೆ ಇದು!
Recommended image3
ಧ್ರುವ ಸರ್ಜಾ ‘ವಸುದೈವ ಕುಟುಂಬಕಂ’ ಬಗ್ಗೆ ಬಿಗ್ ಅಪ್‌ಡೇಟ್: ರಿಮೇಕ್ ವದಂತಿಗೆ ನಂದ ಕಿಶೋರ್ ಖಡಕ್ ಸ್ಪಷ್ಟನೆ
Related Stories
Recommended image1
ಕನ್ನಡದಲ್ಲಿ ಕಲೆಕ್ಷನ್‌ ಕಿಂಗ್‌.. ಈಗ ಬಾಲಿವುಡ್‌ಗೆ ಕಾಲಿಡುತ್ತಿರುವ 'ಪ್ರೇಮದ ಊರಲಿ' ಸಿನಿಮಾ!
Recommended image2
3.5 ಕೋಟಿ ಬಜೆಟ್‌ನಿಂದ 13 ಕೋಟಿ+: ‘ಪ್ರೇಮದ ಊರಲಿ’ ಸಕ್ಸಸ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved